ತಿಂಗಳಿಗೂ ಮುನ್ನ ಓಟಿಟಿಗೆ ಅಜಿತ್ 'ವಿಡಾಮುಯರ್ಚಿ'; ಅಧಿಕೃತವಾಗಿ ಡೇಟ್ ಘೋಷಣೆ

ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳಿಗೂ ಮುನ್ನ ಓಟಿಟಿಗೆ ಬರುವ ಕಾಲ ಇದು. 50 ದಿನ, 100 ದಿನ ಪ್ರದರ್ಶನದ ಲೆಕ್ಕಾಚಾರ ಈಗ ಇಲ್ಲ. ಮೊದಲ ವಾರ ಒಂದಷ್ಟು ಹಣ ಬಾಚಿಕೊಂಡರೆ ಮುಗೀತು. ಬಳಿಕ ಓಟಿಟಿ, ಸ್ಯಾಟಲೈಟ್ ರೈಟ್ಸ್ ಇದೇ ಇದೆಯಲ್ಲ ಎನ್ನುವಂತಾಗಿಬಿಟ್ಟಿದೆ.

ಪ್ರೇಕ್ಷಕರ ನಿರೀಕ್ಷೆಯೇ ಹೆಚ್ಚಾಗುತ್ತಿದೆಯೋ ಅಥವಾ ಒಳ್ಳೆ ಚಿತ್ರಗಳೇ ಬರುತ್ತಿಲ್ಲವೋ ಗೊತ್ತಿಲ್ಲ. ದೊಡ್ಡ ದೊಡ್ಡ ಸಿನಿಮಾಗಳೇ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಿವೆ. ತಮಿಳಿನಲ್ಲಿ ಬಹಳ ನಿರೀಕ್ಷೆ ಮೂಡಿಸಿದ್ದ 'ವಿಡಾಮುಯರ್ಚಿ' ಸಿನಿಮಾ ನಿರಾಸೆ ಮೂಡಿಸಿತ್ತು. ಹಾಲಿವುಡ್ ಸ್ಟೈಲ್ ಮೇಕಿಂಗ್ ಇದ್ದರೂ ಯಾಕೋ ಅಷ್ಟಾಗಿ ಪ್ರೇಕ್ಷಕರನ್ನು ರಂಜಿಸಲಿಲ್ಲ. ಇದೀಗ ಸಿನಿಮಾ ಓಟಿಟಿಗೆ ಬರಲು ಸಜ್ಜಾಗಿದೆ.

Vidaamuyarchi OTT Release Date Confirmed When And Where To Wach Ajith starrer

ಮಗಿಳ್ ತಿರುಮನೇನಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಚಿತ್ರದಲ್ಲಿ ಅಜಿತ್ ಜೋಡಿಯಾಗಿ ತ್ರಿಷಾ ನಟಿಸಿದ್ದರು. ಸಣ್ಣ ಎಳೆ ಇಟ್ಟುಕೊಂಡು 'ವಿಡಾಮುಯರ್ಚಿ' ಚಿತ್ರ ತೆರೆಗೆ ತರಲಾಗಿತ್ತು. ಎರಡು ಹಾಲಿವುಡ್ ಚಿತ್ರಗಳಿಂದ ಪ್ರೇರಣೆಗೊಂಡು ಸಿನಿಮಾ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅದರಲ್ಲೂ 'ಬ್ರೇಕ್‌ಡೌನ್' ಸಿನಿಮಾ ಛಾಯೆ ಗಾಢವಾಗಿದೆ.

ಥಲಾ ಅಜಿತ್ ನಟನೆಯ ಸಿನಿಮಾಗಳು ಇತ್ತೀಚೆಗೆ ಅಷ್ಟಾಗಿ ಸದ್ದು ಮಾಡ್ತಿಲ್ಲ. ತಮಿಳುನಾಡು ಬಿಟ್ಟರೆ ಹೊರ ರಾಜ್ಯಗಳಲ್ಲಿ ವಿದೇಶಗಳಲ್ಲಿ ಅಜಿತ್ ಸಿನಿಮಾ ಮಾರ್ಕೆಟ್ ಕೂಡ ಕಮ್ಮಿ ಇದೆ. ಅಂದಾಜು 185 ಕೋಟಿ ರೂ. ಬಜೆಟ್‌ನಲ್ಲಿ ಚಿತ್ರವನ್ನು ನಿರ್ಮಿಸಲಾಗಿತ್ತು. ವಿಶ್ವದಾದ್ಯಂತ 'ವಿಡಾಮುಯರ್ಚಿ' ಸಿನಿಮಾ 135 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾತ್ರ ಮಾಡಿರುವುದಾಗಿ ಹೇಳಲಾಗ್ತಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿ ಹಿನ್ನಡೆಗೆ ಕಾರಣವಾಗಿತ್ತು.

ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಿತ್ತು. ಓಂ ಪ್ರಕಾಶ್ ಛಾಯಾಗ್ರಹಣ, ಅನಿರುದ್ದ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. 2 ವರ್ಷಗಳ ಬಳಿಕ ಅಜಿತ್ ನಟನೆಯ ಸಿನಿಮಾ ಚಿತ್ರಮಂದಿರಕ್ಕೆ ಬಂದಿತ್ತು. ಆದರೆ ಯಾಕೋ ಜೋರಾಗಿ ಸದ್ದು ಮಾಡಲಿಲ್ಲ. ಅಭಿಮಾನಿಗಳಿಗೆ ಇಷ್ಟವಾದರೂ ಸಾಮಾನ್ಯ ಪ್ರೇಕ್ಷಕರಿಗೆ ಹತ್ತಿರವಾಗಲಿಲ್ಲ.

Vidaamuyarchi OTT Release Date Confirmed When And Where To Wach Ajith starrer

ಅಂದಾಜು 100 ಕೋಟಿ ರೂ.ಗೆ 'ವಿಡಾಮುಯರ್ಚಿ' ಓಟಿಟಿ ರೈಟ್ಸ್ ಅನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿರುವುದರಿಂದ ಪ್ರೇಕ್ಷಕರ ಬರ ಎದುರಿಸುತ್ತಿರುವುದರಿಂದ ಇನ್ನು ಕಾಯುವುದು ಬೇಡ ಎಂದು ಡಿಜಿಟಲ್ ಸ್ಟ್ರೀಮಿಂಗ್‌ಗೆ ಸಿದ್ಧತೆ ನಡೆಸಲಾಗ್ತಿದೆ. ಮಾರ್ಚ್ 3ರಂದು ಅಂದರೆ ಮುಂದಿನ ಸೋಮವಾರ ಸಿನಿಮಾ ಓಟಿಟಿಗೆ ಬರಲಿದೆ.

ಅರ್ಜುನ್(ಅಜಿತ್) ಹಾಗೂ ಕಯಲ್(ತ್ರಿಷಾ) ಪ್ರೀತಿಸಿ ಮದುವೆ ಆಗಿರುತ್ತಾರೆ. ಆದರೆ ಭಿನ್ನಾಭಿಪ್ರಾಯಗಳಿಂದ ದೂರಗಲು ನಿರ್ಧರಿಸುತ್ತಾರೆ. ಡಿವೋರ್ಸ್ ಸಿಗುವವರೆಗೂ ಕಯಲ್ ತಮ್ಮ ತಾಯಿ ಮನೆಯಲ್ಲಿ ಇರಲು ನಿರ್ಧರಿಸುತ್ತಾಳೆ. ಆಕೆಯನ್ನು ತಾನೇ ಅಲ್ಲಿಗೆ ಕರೆದುಕೊಂಡು ಹೋಗಿಬಿಡಲು ಅರ್ಜುನ್ ಮುಂದಾಗುತ್ತಾನೆ. ಆದರೆ ಮಾರ್ಗ ಮಧ್ಯೆ ಆಕೆಯ ಅಪಹರಣವಾಗುತ್ತದೆ. ಆಕೆಯನ್ನು ಅಪಹರಿಸಿದ್ದು ಯಾರು? ಹೇಗೆ ವಾಪಸ್ ಕರೆದುಕೊಂಡು ಬರ್ತಾನೆ ಎನ್ನುವುದು ಇನ್ನುಳಿದ ಸಿನಿಮಾ ಕಥೆ.

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗ 24 ದಿನಗಳಲ್ಲಿ 'ವಿಡಾಮುಯರ್ಚಿ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅಜಿತ್ ಎಂದಿನಂತೆ ತಮ್ಮ ಅಭಿನಯ, ಸ್ಟಂಟ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಅರ್ಜುನ್ ಸರ್ಜಾ, ರೆಜಿನಾ ಕಸೆಂದ್ರ ಸೇರಿದಂತೆ ಅನುಭವಿ ಕಲಾವಿದರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಓಟಿಟಿಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಾ ಎಂದು ಕಾದು ನೋಡಬೇಕಿದೆ.

More from Filmibeat

English summary
Thala Ajith's Vidaamuyarchi OTT Release: Streaming Date & Platform Revealed
Read more about: ajith kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X