For Quick Alerts
  ALLOW NOTIFICATIONS  
  For Daily Alerts

  'ಕಾಫಿ ವಿತ್ ಕರಣ್‌'ನಲ್ಲಿ ವಿಜಯ್ ದೇವರಕೊಂಡ: ಸೆಕ್ಸ್ ಕುರಿತ ಪ್ರಶ್ನೆಗಳ ಸುರಿಮಳೆ

  |

  ಅತ್ಯಂತ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದ ಸ್ಟಾರ್‌ ಗಿರಿ ಪಡೆದ ಕೆಲವೇ ನಟರಲ್ಲಿ ಒಬ್ಬರು ವಿಜಯ್ ದೇವರಕೊಂಡ.

  'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ದೊಡ್ಡ ಹಿಟ್ ಸಂಪಾದಿಸಿದ ವಿಜಯ್ ದೇವರಕೊಂಡ ಆ ನಂತರ ಸಿನಿಮಾಗದಿಂದ ಸಿನಿಮಾಕ್ಕೆ ವೃತ್ತಿಯಲ್ಲಿ ಮೇಲೇರುತ್ತಲೇ ಸಾಗುತ್ತಿದ್ದಾರೆ. ತೆಲುಗು ಚಿತ್ರರಂಗದ ಬಳಿಕ ಇದೀಗ ಬಾಲಿವುಡ್‌ಗೂ ಅಡಿ ಇಡಲಯ ಸಕಲ ಸಜ್ಜಾಗಿದ್ದಾರೆ.

  ಕಾಫಿ ವಿತ್ ಕರಣ್‌ನಲ್ಲಿ ಕೊಡುವ ಉಡುಗೊರೆ ಬುಟ್ಟಿಯ ಒಳಗೇನಿರುತ್ತೆ ಗೊತ್ತೆ!ಕಾಫಿ ವಿತ್ ಕರಣ್‌ನಲ್ಲಿ ಕೊಡುವ ಉಡುಗೊರೆ ಬುಟ್ಟಿಯ ಒಳಗೇನಿರುತ್ತೆ ಗೊತ್ತೆ!

  ಇದೀಗ 'ಲೈಗರ್' ಹೆಸರಿನ ಪ್ಯಾನ್ ಇಂಡಿಯಾ ಸಿನಿಮಾ ಚಿತ್ರೀಕರಣ ಮುಗಿಸಿರುವ ವಿಜಯ್ ದೇವರಕೊಂಡ ರಿಲೀಸ್‌ಗೆ ರೆಡಿಯಾಗುತ್ತಿದ್ದಾರೆ. ಈ ನಡುವೆ ಹಿಂದಿಯ ಜನಪ್ರಿಯ ಟಾಕ್ ಶೋ 'ಕಾಫಿ ವಿತ್ ಕರಣ್' ನಲ್ಲಿ ಭಾಗವಹಿಸಿದ್ದಾರೆ. ಭಾರತೀಯ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್‌ಗಳಲ್ಲಿ ಒಬ್ಬರಾಗಿರುವ ವಿಜಯ್ ದೇವರಕೊಂಡಗೆ 'ಕೇಳಬಾರದ' ಪ್ರಶ್ನೆಗಳನ್ನೆಲ್ಲ ಕೇಳಿದ್ದಾರೆ ಕರಣ್ ಜೋಹರ್.

  ಕಾಫಿ ವಿತ್ ಕರಣ್‌ನಲ್ಲಿ ವಿಜಯ್-ಅನನ್ಯಾ ಪಾಂಡೆ

  ಕಾಫಿ ವಿತ್ ಕರಣ್‌ನಲ್ಲಿ ವಿಜಯ್-ಅನನ್ಯಾ ಪಾಂಡೆ

  ವಿಜಯ್ ದೇವರಕೊಂಡ ಈಗ ಎಲ್ಲರ ಬೇಡಿಕೆಯ ನಟ. ಅದರಲ್ಲೂ ಬಾಲಿವುಡ್‌ನ ಯುವ ನಟಿಯರಂತೂ ವಿಜಯ್ ದೇವರಕೊಂಡ ರಗಡ್‌ ಲುಕ್ಸ್‌ಗೆ ಫಿದಾ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಪ್ರಸಾರವಾಗಿದ್ದ 'ಕಾಫಿ ವಿತ್ ಕರಣ್' ನ ಎರಡನೇ ಎಪಿಸೋಡ್‌ನಲ್ಲಿ ಭಾಗವಹಿಸಿದ್ದ ಜಾನ್ಹವಿ ಹಾಗೂ ಸಾರಾ ಅಲಿ ಖಾನ್ ಅಂತೂ ವಿಜಯ್‌ ದೇವರಕೊಂಡ ಹೆಸರಿನ ಜಪವನ್ನೇ ಮಾಡಿದರು. ಜೊತೆಗೆ ವಿಜಯ್‌ ದೇವರಕೊಂಡಗೆ ಚೀಸ್ ಎಂದು ಹೆಸರಿಟ್ಟರು ಸಹ!

  ಸಿಎಂ ಮೊಮ್ಮಕಳಿಬ್ಬರನ್ನು ಡೇಟ್ ಮಾಡಿದ್ದ ಸಾರಾ ಅಲಿ ಖಾನ್-ಜಾನ್ಹವಿ! ಕರಣ್ ಬಿಚ್ಚಿಟ್ಟ ರಹಸ್ಯಸಿಎಂ ಮೊಮ್ಮಕಳಿಬ್ಬರನ್ನು ಡೇಟ್ ಮಾಡಿದ್ದ ಸಾರಾ ಅಲಿ ಖಾನ್-ಜಾನ್ಹವಿ! ಕರಣ್ ಬಿಚ್ಚಿಟ್ಟ ರಹಸ್ಯ

  ಕರಣ್ ಜೋಹರ್ ನಾಟಿ ಪ್ರಶ್ನೆಗಳು

  ಕರಣ್ ಜೋಹರ್ ನಾಟಿ ಪ್ರಶ್ನೆಗಳು

  ಇದೀಗ ವಿಜಯ್ ದೇವರಕೊಂಡ ಎಪಿಸೋಡ್‌ನ ಟೀಸರ್ ಬಿಡುಗಡೆ ಆಗಿದ್ದು, ಕರಣ್ ಜೋಹರ್, ಹಲವು ನಾಟಿ ಪ್ರಶ್ನೆಗಳನ್ನು ವಿಜಯ್‌ಗೆ ಕೇಳಿದ್ದಾರೆ. ಟೀಸರ್‌ನಲ್ಲಿಯಂತೂ ವಿಜಯ್‌ಗೆ ಕರಣ್ ಕೇಳಿರುವ ಸೆಕ್ಸ್ ಕುರಿತಾದ ಪ್ರಶ್ನೆಗಳೇ ತುಂಬಿವೆ. 'ಕೊನೆಯದಾಗಿ ನೀವು ಲೈಂಗಿಕ ಕ್ರಿಯೆ ನಡೆಸಿದ್ದು ಯಾವಾಗ?'' ಎಂದು ತೀರ ಖಾಸಗಿ ಪ್ರಶ್ನೆಯನ್ನು ಅವಿವಾಹಿತ ವಿಜಯ್ ದೇವರಕೊಂಡಗೆ ಕೇಳಿದ್ದಾರೆ ಕರಣ್. ಪ್ರಶ್ನೆಗೆ ವಿಜಯ್ ಏನು ಉತ್ತರ ನೀಡಿದ್ದಾರೆ ಎಂಬುದು ಎಪಿಸೋಡ್ ಪ್ರಸಾರವಾದ ಮೇಲೆ ತಿಳಿಯಲಿದೆ. ಆದರೆ ಪಕ್ಕದಲ್ಲೇ ಇದ್ದ ಮತ್ತೊಬ್ಬ ಅತಿಥಿ ನಟಿ ಅನನ್ಯಾ ಪಾಂಡೆ, 'ಇಂದು ಬೆಳಿಗ್ಗೆಯೇ ಆಗಿರುತ್ತದೆ' ಎಂದಿದ್ದಾರೆ.

  ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್!

  ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್!

  ಕರಣ್‌ರ ನಾಟಿ ಪ್ರಶ್ನೆಗಳು ಅಷ್ಟಕ್ಕೆ ನಿಂತಿಲ್ಲ, ''ನೀವು ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್‌ನಲ್ಲಿ ಅಥವಾ ರೊಮ್ಯಾನ್ಸ್‌ನಲ್ಲಿ ತೊಡಗಿದ್ದೀರ?'' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ವಿಜಯ್‌ ''ಕಾರಿನಲ್ಲಿ ಮಾಡಿದ್ದೇನೆ'' ಎಂದಿದ್ದಾರೆ. ವಿಜಯ್ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಕರಣ್, ಶೌಚಾಲಯಗಳಲ್ಲಿ ಮಾಡುತ್ತಾರೆ ಎಂಬುದು ಗೊತ್ತಿದೆ. ಆದರೆ ಕಾರಿನಲ್ಲಿ ಹೇಗೆ? ಇಕ್ಕಟ್ಟಾಗುವುದಿಲ್ಲವೇ?'' ನಾನು ಎಂದೂ ಕಾರಿನಲ್ಲಿ ಇಂಥಹದ್ದನ್ನು ಪ್ರಯತ್ನಿಸಿಲ್ಲ ಯಾವಾಗಲಾದರೂ ಪ್ರಯತ್ನ ಮಾಡಬೇಕು'' ಎಂದಿದ್ದಾರೆ. ಅದಕ್ಕೆ ವಿಜಯ್ ದೇವರಕೊಂಡ, ''ಕೆಲವು ಅತಿ ಅವಸರದ ಸಂದರ್ಭಗಳಲ್ಲಿ ಮಾಡಬೇಕಾಗುತ್ತದೆ'' ಎಂದು ಕಣ್ಣು ಮಿಟಕಿಸಿದ್ದಾರೆ.

  ಇಬ್ಬರೊಟ್ಟಿಗೆ ಸೆಕ್ಸ್!

  ಇಬ್ಬರೊಟ್ಟಿಗೆ ಸೆಕ್ಸ್!

  ಬಳಿಕ ಇನ್ನೂ ಮುಂದೆ ಹೋಗಿರುವ ಕರಣ್ ಜೋಹರ್, ''ನೀವು ಎಂದಾದರೂ ಇಬ್ಬರು ಸಂಗಾತಿಗಳೊಟ್ಟಿಗೆ ಒಟ್ಟಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದೀರ?'' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಇಲ್ಲವೆಂದು ನೇರ ಉತ್ತರ ನೀಡಿದ್ದಾರೆ ವಿಜಯ್, ಆದರೆ ಆ ಉತ್ತರದಿಂದ ತೃಪ್ತವಾಗದ ಕರಣ್ ಜೋಹರ್, ''ಆ ರೀತಿಯ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಅವಕಾಶ ಸಿಕ್ಕರೆ ಏನು ಮಾಡುತ್ತೀರಿ?'' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿರುವ ವಿಜಯ್, ''ನನಗೇನೂ ಅಭ್ಯಂತರವಿಲ್ಲ'' ಎಂದಿದ್ದಾರೆ. ವಿಜಯ್ ದೇವರಕೊಂಡ-ಅನನ್ಯಾ ಪಾಂಡೆ ಭಾಗವಹಿಸಿರುವ 'ಕಾಫಿ ವಿತ್ ಕರಣ್'ನ ಹೊಸ ಎಪಿಸೋಡ್‌ ಇದೇ ಗುರುವಾರ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.

  English summary
  Vijay Devarkonda participated in Koffee with Karan show with actress Ananya Pande. Karan asks many naughty questions to Vijya Devarkonda.
  Wednesday, July 27, 2022, 10:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X