twitter
    For Quick Alerts
    ALLOW NOTIFICATIONS  
    For Daily Alerts

    ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್' ಅಮೆಜಾನ್‌ ಪ್ರೈಂಗೆ ಸೇಲ್: ಡೀಲ್ ಕುದುರಿದ್ದು ಎಷ್ಟಕ್ಕೆ?

    |

    ವಿಜಯ್ ದೇವರಕೊಂಡ ಅಭಿನಯದ ಬಹು ನಿರೀಕ್ಷೆಯ ಸಿನಿಮಾ 'ಲೈಗರ್'. ಇದೇ ಮೊದಲ ಬಾರಿಗೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ನಸೀಬು ಬದಲಾಗುತ್ತಾ? ಕುತೂಹಲ ಸ್ವತಃ ಅಭಿಮಾನಿಗಳಿಗಿದೆ. ಈಗಾಗಲೇ 'ಲೈಗರ್' ಸಿನಿಮಾದ ಚಿಕ್ಕದೊಂದು ಟೀಸರ್ ಕೂಡ ರಿಲೀಸ್ ಆಗಿದ್ದು, ವಿಜಯ್ ದೇವರಕೊಂಡ ಖದರ್‌ಗೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಮಧ್ಯೆ ಲೈಗರ್ ಡಿಜಿಟಲ್ ರೈಟ್ಸ್ ದೊಡ್ಡ ಮೊತ್ತ ಸೇಲ್ ಆಗಿದೆ ಎನ್ನಲಾಗಿದೆ.

    'ಲೈಗರ್' ಈ ಮಟ್ಟಕ್ಕೆ ಸದ್ದು ಮಾಡಲು ಹಲವು ಕಾರಣವಿದೆ. ವಿಜಯ್ ದೇವರಕೊಂಡ ಸಿನಿಮಾಗೆ ದಿಗ್ಗಜರೇ ಕೈ ಜೋಡಿಸಿದ್ದಾರೆ. ಬಾಲಿವುಡ್ ಸ್ಟಾರ್ ನಿರ್ಮಾಪಕ ಕರಣ್ ಜೋಹರ್, ನಿರ್ದೇಶಕ ಪುರಿ ಜಗನ್ನಾಥ್, ನಟ ಚಾರ್ಮಿ ಕೌರ್ ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆ 'ಲೈಗರ್' ಡಿಜಿಟಲ್ ರೈಟ್ಸ್ ಅಮೆಜಾನ್‌ಗೆ ಸೇಲ್ ಆಗಿದೆ ಅಂತ ಬಾಲಿವುಡ್‌ ಮಾತಾಡಿಕೊಳ್ಳುತ್ತಿದೆ. ಹಾಗಿದ್ದರೆ 'ಲೈಗರ್' ಡಿಜಿಟಲ್ ರೈಟ್ಸ್ ಸೇಲ್ ಆಗಿದ್ದು ಎಷ್ಟು ಮೊತ್ತಕ್ಕೆ? ವಿವರಗಳಿಗಾಗಿ ಮುಂದೆ ಓದಿ.

     ಅಮೆಜಾನ್‌ಗೆ 'ಲೈಗರ್' ಸಿನಿಮಾ ಸೇಲ್

    ಅಮೆಜಾನ್‌ಗೆ 'ಲೈಗರ್' ಸಿನಿಮಾ ಸೇಲ್

    ವಿಜಯ್ ದೇವರಕೊಂಡ ಟಾಲಿವುಡ್‌ನಿಂದ ಬಾಲಿವುಡ್‌ಗೆ ಜಿಗಿದಿದ್ದಾರೆ. 'ಲೈಗರ್' ಪ್ಯಾನ್ ಇಂಡಿಯಾ ಅಂತ ಅನಿಸಿಕೊಂಡಿದ್ದರೂ, ಬಾಲಿವುಡ್ ಛಾಯೆನೇ ಹೆಚ್ಚಿದೆ. ಟೀಸರ್ ನೋಡಿದವರಿಗೂ 'ಲೈಗರ್'ನಲ್ಲಿ ಬಾಲಿವುಡ್ ಟಚ್ ಇದೆ ಅನ್ನುವುದು ಮೇಲ್ನೊಟಕ್ಕೆ ಕಾಣಿಸುತ್ತಿದೆ. ಇದರ ಜೊತೆನೇ ವಿಜಯ್ ದೇವರಕೊಂಡ ಸಿನಿಮಾ ಅತೀ ದೊಡ್ಡ ಮೊತ್ತಕ್ಕೆ ಡಿಜಿಟಲ್ ರೈಟ್ಸ್ ಸೇಲ್ ಆಗಿದೆ ಎಂದು ಚರ್ಚೆಯಾಗುತ್ತಿದೆ. ವಿಜಯ್ ಯಾವ ಸಿನಿಮಾಗೂ ಒಷ್ಟೊಂದು ದೊಡ್ಡ ಮೊತ್ತ ಸಿಕ್ಕಿರಲ್ಲಿಲ್ಲ ಎಂದು ಬಾಲಿವುಡ್‌ ಮೂಲಗಳಿಂದ ಹೊರಬಿದ್ದಿದೆ.

     ಎಷ್ಟು ಕೋಟಿಗೆ 'ಲೈಗರ್' ಡೀಲ್?

    ಎಷ್ಟು ಕೋಟಿಗೆ 'ಲೈಗರ್' ಡೀಲ್?

    'ಲೈಗರ್' ಸಿನಿಮಾದಲ್ಲಿ ಕರಣ್ ಜೋಹರ್ ಪಾತ್ರವಿದೆ ಅಂದಾಗಲೇ ವ್ಯಾಪಾರ ದೃಷ್ಟಿಯಿಂದ ನಷ್ಟ ಆಗುವುದಿಲ್ಲ ಕಾನ್ಫಿಡೆನ್ಸ್ ಅಂತೂ ಇದ್ದೇ ಇತ್ತು. ಆದರೆ, ವಿಜಯ್ ವೃತ್ತಿ ಬದುಕಿನಲ್ಲೇ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗುತ್ತೆ ಅನ್ನುವ ಸುಳಿವು ಇರಲಿಲ್ಲ. 'ಲೈಗರ್' ಸಿನಿಮಾವನ್ನು ಅಮೆಜಾನ್ ಪ್ರೈಂ ಸಂಸ್ಥೆ ಬರೋಬ್ಬರಿ 60 ಕೋಟಿ ಕೊಟ್ಟು ಕೊಂಡು ಕೊಂಡಿದೆ. ಇದು ವಿಜಯ್ ದೇವರಕೊಂಡ ವೃತ್ತಿ ಬದುಕಿಗೆ ಹೊಸ ತಿರುವು ಎನ್ನಲಾಗಿದೆ. ಆದರೆ, ಇದು ಕೇವಲ ಹಿಂದೆ ಭಾಷೆಗಷ್ಟೇ ಅಲ್ಲ. ಬದಲಿಗೆ ಐದೂ ಭಾಷೆಗಳ ಹಕ್ಕೂ ಸೇರಿ ಇಷ್ಟು ದೊಡ್ಡ ಮೊತ್ತವನ್ನು ಅಮೆಜಾನ್ ನೀಡಿದೆ ಎನ್ನುವ ಟಾಕ್ ಕೂಡ ಇದೆ.

     ದೊಡ್ಡ ಮೊತ್ತಕ್ಕೆ 'ಲೈಗರ್' ಸೇಲ್

    ದೊಡ್ಡ ಮೊತ್ತಕ್ಕೆ 'ಲೈಗರ್' ಸೇಲ್

    ಈ ಹಿಂದೆ ವಿಜಯ್ ದೇವರಕೊಂಡ ಹಾಗೂ ಪುರಿಜಗನ್ನಾರ್ಥ ಯಾವುದೇ ಸಿನಿಮಾ ಕೂಡ ಈ ಮೊತ್ತಕ್ಕೆ ಸೇಲ್ ಆಗಿಲ್ಲ. ಆದರೂ, 60 ಕೋಟಿ ಡೀಲ್ ಕುದುರಿದ್ದು ಹೇಗೆ? ಎಂಬ ಪ್ರಶ್ನೆ ಕೂಡ ಮೂಡಿದೆ. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಹಾಗೂ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಇಬ್ಬರಿಂದ ಸಿನಿಮಾದ ಬೆಲೆ ಗಗನಕ್ಕೇರಿದೆ ಎನ್ನಲಾಗಿದೆ. ಇದರೊಂದಿಗೆ ಅನನ್ಯ ಪಾಂಡೆ ಹಾಗೂ ವಿಜಯ್ ದೇವರಕೊಂಡ ಜೋಡಿ ಬಾಲಿವುಡ್‌ನಲ್ಲಿ ಎವರ್‌ಗ್ರೀನ್ ಪೇರ್ ಆಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.

     ವಿಜಯ್-ಪುರಿ ಮತ್ತೊಂದು ಸಿನಿಮಾ

    ವಿಜಯ್-ಪುರಿ ಮತ್ತೊಂದು ಸಿನಿಮಾ

    'ಲೈಗರ್' ಸಿನಿಮಾ ಬಳಿಕ ವಿಜಯ್ ದೇವರಕೊಂಡ ಮತ್ತು ಪುರಿ ಜಗನ್ನಾಥ್ ಮತ್ತೆ ಒಂದಾಗುತ್ತಿದ್ದಾರೆ. ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ 'ಜನ ಗಣ ಮನ' ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದೂ ಕೂಡ ಫ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಕರಣ್ ಜೋಹರ್ ಹಾಗೂ ಪುರಿ ಕನೆಕ್ಟ್ಸ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಜಾಹ್ನವಿ ಕಫೂರ್ ಇದೇ ಮೊದಲ ಭಾರಿಗೆ ಟಾಲಿವುಡ್ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ನಿರೀಕ್ಷೆಗಳು ದುಪ್ಪಟ್ಟಾಗಿವೆ.

    English summary
    Vijay Devarakonda Starrer Liger movie sale on amazon prime for 60 crores. This is a huge price for Vijay Devarakonda movie and this deal is includes all languages.
    Wednesday, February 9, 2022, 10:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X