For Quick Alerts
  ALLOW NOTIFICATIONS  
  For Daily Alerts

  ವಿಜಯ್ ದೇವರಕೊಂಡ ಬಂದೋಗಿದ್ದ 'ಕಾಫಿ ವಿಥ್ ಕರಣ್‌' ಸಂಚಿಕೆಗೆ ಅತೀ ಹೆಚ್ಚು ವೀವ್ಸ್!

  |

  ರಿಯಾಲಿಟಿ ಶೋ ಇರಬಹುದು. ಇಲ್ಲವೇ ಟಾಕ್ ಶೋ ಇರಬಹುದು. ಎಲ್ಲವೂ ಬಹುತೇಕ ಒಟಿಟಿ ಕಡೆ ಮುಖ ಮಾಡುತ್ತಿವೆ. ಅದರಲ್ಲೂ ಭಾರತದ ಜನಪ್ರಿಯ ಹಾಗೂ ವಿವಾದಾತ್ಮಕ ಶೋ 'ಕಾಫಿ ವಿಥ್ ಕರಣ್' ಕೂಡ ಈ ಬಾರಿ ಒಟಿಟಿಯಲ್ಲಿಯೇ ಸ್ಟ್ರೀಮಿಂಗ್ ಆಗುತ್ತಿದೆ.

  ಈಗಾಗಲೇ ನಾಲ್ಕು ಎಪಿಸೋಡ್‌ಗಳನ್ನು ಒಟಿಟಿ ವೇದಿಕೆ ಡಿಸ್ನಿ+ ಹಾಟ್ ಸ್ಟಾರ್ ಬಿಡುಗಡೆ ಮಾಡಿದೆ. ಮೊದಲ ಎಪಿಸೋಡ್‌ನಿಂದ ಹಿಡಿದು ಇಲ್ಲಿವರೆಗೂ ರಿಲೀಸ್ ಮಾಡಿರುವ ಸಂಚಿಕೆಗಳು ವೀಕ್ಷಕರನ್ನು ಸೆಳೆದಿವೆ. ಕರಣ್‌ ಜೋಹರ್ ನಡೆಸಿಕೊಡುವ ಒಂದೊಂದೂ ಶೋ ಕೂಡ ವಿಭಿನ್ನ ಹಾಗೂ ಆಸಕ್ತಿದಾಯಕ ಎನಿಸಿಕೊಂಡಿವೆ. ಇದೇ ವೇಳೆ ಕೆಲವು ಹೇಳಿಕೆಗಳು ಹಾಗೂ ಪ್ರಶ್ನೆಗಳು ವಿವಾದಕ್ಕೆ ಸಿಲುಕಿದ್ದು ಕೂಡ ಇದೆ.

  'ಕಾಫಿ ವಿಥ್ ಕರಣ್ ಸೀಸನ್‌ 7'ನಲ್ಲಿ ಇದೂವರೆಗೂ ಬಂದಿರೋ ಎಪಿಸೋಡ್‌ಗಳ ವೀಕ್ಷಕರ ಗಮನವನ್ನೇನೋ ಸೆಳೆದಿವೆ. ಆದರೆ, ಇವುಗಳಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಬಂದಿದ್ದ ಎಪಿಸೋಡ್ ಅತೀ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಹಾಗಿದ್ದರೆ, ಈ ಜೋಡಿ ಬಂದೋಗಿದ್ದ ಸಂಚಿಕೆಗೆ ಒಟಿಟಿ ವೇದಿಕೆಯಲ್ಲಿ ಎಷ್ಟು ವೀವ್ಸ್ ಬಂದಿದೆ? ಅನ್ನೋದನ್ನು ತಿಳಿಯೋಕೆ ಮುಂದೆ ಓದಿ.

  ನಾಲ್ಕೂ ಎಪಿಸೋಡ್ ಸೂಪರ್

  ನಾಲ್ಕೂ ಎಪಿಸೋಡ್ ಸೂಪರ್

  ಭಾರತದಲ್ಲಿ ಒಟಿಟಿ ಮನರಂಜನೆಗೆ ಹೊಸ ವೇದಿಕೆಯಾಗಿದೆ. ಎಲ್ಲಾ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳೂ ಕೂಡ ಒಂದಲ್ಲ ಒಂದು ಶೋ ತರುತ್ತಲೇ ಇವೆ. ಅದರಲ್ಲೂ ಜನಪ್ರಿಯರವಾಗಿರುವ ಶೋ ಕಾಫಿ ವಿಥ್ ಕರಣ್. ಈ ಶೋ ಇದೇ ಮೊದಲ ಬಾರಿಗೆ ಒಟಿಟಿಗೆ ಲಗ್ಗೆ ಇಟ್ಟಿದೆ. ಈ ಬಾರಿ ಬಂದ ಎಲ್ಲಾ ಎಪಿಸೋಡ್‌ಗಳನ್ನೂ ವೀಕ್ಷಕರು ಮೆಚ್ಚಿದ್ದಾರೆ. ಇದರ ಜನಪ್ರಿಯತೆಯನ್ನು ಆಧಾರವಾಗಿಟ್ಟುಕೊಂಡೇ ಒರ್ಮ್ಯಾಕ್ಸ್ ಮೀಡಿಯಾ ಮಾಡಿದ ಸರ್ವೆಯಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಎಪಿಸೋಡ್ ಅತೀ ವೀವ್ಸ್ ಪಡೆದುಕೊಂಡಿದೆ.

  ವಿಜಯ್-ಅನನ್ಯಾ ಪಾಂಡೆ ಸಂಚಿಕೆಗೆ ಎಷ್ಟು ವೀವ್ಸ್?

  ವಿಜಯ್-ಅನನ್ಯಾ ಪಾಂಡೆ ಸಂಚಿಕೆಗೆ ಎಷ್ಟು ವೀವ್ಸ್?

  'ಕಾಫಿ ವಿಥ್ ಕರಣ್ ಸೀಸನ್ 7' ಕಳೆದ ಆರು ಸಂಚಿಕೆಗಳಿಗಿಂತ ಹೆಚ್ಚು ಬೋಲ್ಡ್ ಆಗಿದೆ ಅನ್ನೋದು ಅಭಿಪ್ರಾಯ ವ್ಯಕ್ತವಾಗಿದೆ. ಕಳೆದ ನಾಲ್ಕು ವಾರಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಸರ್ವೆಯಲ್ಲಿ 'ಅತೀ ಹೆಚ್ಚು ಸ್ಟ್ರೀಮಿಂಗ್ ಆದ ಶೋ ಮತ್ತು ಸಿನಿಮಾ' ವಿಭಾಗದಲ್ಲಿ 6.1 ಮಿಲಿಯನ್ ವೀವ್ಸ್ ಸಿಕ್ಕಿದೆ. ಈ ಸಂಚಿಕೆಯಲ್ಲಿ ವಿಜಯ್ ದೇವರಕೊಂಡ ಹಾಗೂ ಅನನ್ಯಾ ಪಾಂಡೆ ಇಬ್ಬರೂ ಲೈಫ್, ಸಿನಿಮಾ ಸೇರಿದಂತೆ ಲೈಂಗಿಕತೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಬೋಲ್ಡ್ ಆಗಿ ಉತ್ತರ ನೀಡಿದ್ದರು.

  3 ಪ್ರಮುಖ ಸ್ಥಾನದಲ್ಲಿ ಏನೇನಿದೆ?

  3 ಪ್ರಮುಖ ಸ್ಥಾನದಲ್ಲಿ ಏನೇನಿದೆ?

  ಒಟಿಟಿ ಪ್ಲ್ಯಾಟ್‌ ಫಾರ್ಮ್‌ಗಳಲ್ಲಿ ಅತೀ ಹೆಚ್ಚು ವೀವ್ಸ್ ಪಡೆದ ಶೋ ಹಾಗೂ ಸಿನಿಮಾದಲ್ಲಿ ಡಿಸ್ನಿ+ ಹಾಟ್‌ ಸ್ಟಾರ್‌ಗೆ ಬಹುಪಾಲು ಇದೆ. ಕಾಫಿ ವಿಥ್ ಕರಣ್ ಸೀಸನ್ 7 ಮೊದಲ ಸ್ಥಾನದಲ್ಲಿದ್ದರೆ. ಇತ್ತ 'ಘರ್ ವಾಪ್ಸಿ' ಇದೇ ಒಟಿಟಿ ಪ್ಲ್ಯಾಟ್ ಫಾರ್ಮ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಸುಮಾರು 5.2 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಹಾಗೇ ಎಂಎಕ್ಸ್ ಪ್ಲೇಯರ್‌ನಲ್ಲಿ 'ರೋಹನಿಯತ್' ಸೀರಿಸ್ 5.1 ಮಿಲಿಯನ್ ವೀವ್ಸ್ ಪಡೆದ ಮೂರನೇ ಸ್ಥಾನದಲ್ಲಿದೆ.

  'ಗುಡ್ ಲಕ್ ಜೆರ್ರಿ'ಗೆ 4ನೇ ಸ್ಥಾನ

  'ಗುಡ್ ಲಕ್ ಜೆರ್ರಿ'ಗೆ 4ನೇ ಸ್ಥಾನ

  ಮೊದಲ ಮೂರು ಸ್ಥಾನ ಟಾಕ್ ಶೋ ಹಾಗೂ ವೆಬ್ ಸಿರೀಸ್ ಪಾಲಾಗಿದ್ದರೆ. ನಾಲ್ಕನೇ ಸ್ಥಾನ ಸಿನಿಮಾ ಪಾಲಾಗಿದೆ. ಜಾಹ್ನವಿ ಕಪೂರ್, ದೀಪಕ್ ಡೊಬ್ರಿಯಾಲ್, ಮಿಟಾ ವಸಿಷ್ಠ್, ನೀರಜ್ ಸೂದ್ ಹಾಗೂ ಸುಶಾಂತ್ ಸಿಂಗ್ ಅಭಿನಯದ 'ಗುಡ್ ಲಕ್ ಜೆರ್ರಿ' ಕಳೆದ ವಾರವಷ್ಟೇ ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ 4.9 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈ ಮೂಲಕ ನಾಲ್ಕನೇ ಸ್ಥಾನದಲ್ಲಿದೆ.

  English summary
  Vijay Deverakonda And Ananya Pandey In Koffee with Karan Is Most Viewed Episode, Know More.
  Tuesday, August 2, 2022, 9:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X