'ಜವಾನ್' ಎದುರು ನಿಲ್ಲದ 'ಖುಷಿ': ಒಟಿಟಿಗೆ ಬಿಡುಗಡೆ ಯಾವಾಗ, ಎಲ್ಲಿ ತಿಳಿಯಿರಿ

ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತ್ ಪ್ರಭು ಅಭಿನಯದ ಖುಷಿ ಸಿನಿಮಾ ಸೆಪ್ಟೆಂಬರ್ 1 ರಂದು ಚಿತ್ರಮಂದಿರಗಳಿಗೆ ಬಿಡುಗಡೆಯಾಗಿತ್ತು. ಉತ್ತಮ ಪ್ರದರ್ಶನ ಕಾಣುತ್ತಿದ್ದ ಸಿನಿಮಾಗೆ ಶಾರುಖ್ ಖಾನ್ ಅಭಿನಯದ ಜವಾನ್ ಸವಾಲಾಗಿ ನಿಂತಿದೆ. ಇದೆ ಬೆನ್ನಲ್ಲೇ ಸಿನಿಮಾವನ್ನು ಒಟಿಟಿಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಸತತ ಸೋಲುಗಳನ್ನು ಕಾಣುತ್ತಿದ್ದ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತ್ ಪ್ರಭುಗೆ ಈ ಸಿನಿಮಾ ನಿರ್ಣಾಯಕವಾಗಿತ್ತು. ಆರಂಭದಲ್ಲಿ ಉತ್ತಮ ಯಶಸ್ಸು ಪಡೆದ ಸಿನಿಮಾ ನಂತರ ಬಾಕ್ಸ್ ಆಫೀಸ್‌ನಲ್ಲಿ ಕುಸಿಯಲು ಪ್ರಾರಂಭಿಸಿತ್ತು. ಬಿಡುಗಡೆಯಾದ ಮೊದಲ ಐದು ದಿನಗಳಲ್ಲಿ 70 ಕೋಟಿ ಗಳಿಸುವಲ್ಲಿ ಯಶಸ್ವಿಯಾಗಿತ್ತು.

Vijay Deverakonda and Samantha starrer Kushi OTT Release Date

ವಿಜಯ್, ಸಮಂತಾರ 'ಖುಷಿ' ಕಿತ್ತುಕೊಂಡ ಜವಾನ್!

ಐದು ದಿನಗಳ ಕಾಲ ಬಾಕ್ಸ್ ಅಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಂಡಿದ್ದ ಖುಷಿಗೆ ಜಾಗವನ್ನು ಶಾರುಖ್ ಖಾನ್ ಅಭಿನಯದ ಜವಾನ್ ವಶಪಡಿಸಿಕೊಡಿತ್ತು. ಇದರಿಂದ ಖುಷಿಯ ವ್ಯಾಪಾರ ಕುಸಿಯಲು ಪ್ರಾರಂಭಿಸಿದೆ. ಇದರ ಮಧ್ಯೆ, ನಿರ್ಮಾಪಕರು ಚಿತ್ರದ ಒಟಿಟಿ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದ್ದಾರೆ.

ಖುಷಿ ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಶಾರುಖ್ ಖಾನ್ ಅವರ ಜವಾನ್ ಬಿಡುಗಡೆಯಾಗಿತ್ತು. ಸೆಪ್ಟಂಬರ್ ಏಳರಂದು ಬಿಡುಗಡೆಯಾದ ಜವಾನ್‌ಗಾಗಿ ಖುಷಿ ಪ್ರದರ್ಶನಗೊಳ್ಳುತ್ತಿದ್ದ ಥಿಯೇಟರ್‌ಗಳು ಖಾಲಿಯಾಗಿ ಜವಾನ್‌ಗೆ ಜಾಗ ಕೊಟ್ಟವು.

Vijay Deverakonda and Samantha starrer Kushi OTT Release Date

ಒಟಿಟಿಗೆ ಖುಷಿ

ಶಿವ ನಿರ್ವಾಣ ನಿರ್ದೇಶನದ ತೆಲುಗಿನ ಖುಷಿ ಸಿನಿಮಾ ತಮಿಳು, ಕನ್ನಡ, ಮಲಯಾಳಂ, ಹಿಂದಿ ಮತ್ತು ಇತರ ಭಾಷೆಗಳಿಗೆ ಡಬ್ ಆಗಿದ್ದು ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಬಹು ನಿರೀಕ್ಷೆಯ ನಡುವೆ ಬಿಡುಗಡೆಯಾಯಿತು. ಬಿಡುಗಡೆಯಾದ ಮೂರು ದಿನದಲ್ಲಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಖುಷಿ ಚಿತ್ರ 3 ದಿನ ಕೊನೆಗೆ 50 ಕೋಟಿ ಕಲೆಕ್ಷನ್ ಮಾಡಿತ್ತು. ಆ ನಂತರ ಕ್ರಮೇಣ ಖುಷಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಕಡಿಮೆಯಾಗತೊಡಗಿತು.

ಚಿತ್ರವು ತೆಲುಗು ರಾಜ್ಯಗಳಲ್ಲಿ ಉತ್ತಮ ಕಲೆಕ್ಷನ್ ಮಾಡಲು ವಿಫಲವಾಗಿದ್ದರೂ, ತಮಿಳಿನಲ್ಲಿ ಖುಷಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ತಮಿಳುನಾಡು ಒಂದರಲ್ಲೇ ಈ ಚಿತ್ರ ರೂ.9.25 ಕೋಟಿ ಕಲೆಕ್ಷನ್ ಮಾಡಿದೆ. ಅದೇ ರೀತಿ ಹೊರ ದೇಶಗಳಲ್ಲೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ಅಮೇರಿಕಾದಲ್ಲಿ ಖುಷಿ ಸಿನಿಮಾ ಹಿಟ್ ಆಗಿದೆ ಎಂಬ ವರದಿಗಳಿವೆ.

ಸಿನಿಮಾ ಬಿಡುಗಡೆಯಾದ ಕೆಲವು ದಿನಗಳ ನಂತರ, ತಯಾರಕರು ಈಗ ಚಿತ್ರದ ಒಟಿಟಿ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಖುಷಿ ಚಿತ್ರದ OTT ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಖರೀದಿಸಿದೆ. ವರದಿಯ ಪ್ರಕಾರ, ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ಖರೀದಿಸಲು ನೆಟ್‌ಫ್ಲಿಕ್ಸ್ ಭಾರಿ ಮೊತ್ತವನ್ನು ಪಾವತಿಸಿದೆ. ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಸೆಪ್ಟೆಂಬರ್ 30 ಅಥವಾ ಅಕ್ಟೋಬರ್ 6 ರಂದು ಪ್ರಾರಂಭವಾಗುತ್ತದೆ.

More from Filmibeat

English summary
Vijay Deverakonda and Samantha starrer Kushi OTT release date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X