20 ದಿನಕ್ಕೆ ಓಟಿಟಿ ಬಂತು ವಿಜಯ್ ದೇವರಕೊಂಡ 'ದಿ ಫ್ಯಾಮಿಲಿ ಸ್ಟಾರ್'

ದೊಡ್ಡ ಸಿನಿಮಾಗಳು ಕೂಡ ಈಗ ಬಹಳ ಬೇಗ ಓಟಿಟಿಗೆ ಬಂದುಬಿಡುತ್ತಿವೆ. ಬೇಗ ಸ್ಟ್ರೀಮಿಂಗ್‌ಗೆ ಒಪ್ಪಂದ ಮಾಡಿಕೊಂಡರೆ ನಿರ್ಮಾಪಕರಿಗೆ ಹೆಚ್ಚಿನ ಹಣ ಸಿಗುತ್ತದೆ. ಅದೇ ಕಾರಣಕ್ಕೆ 20 ದಿನಕ್ಕೆ ಕೆಲ ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಿವೆ. ಇತ್ತೀಚೆಗೆ ಕನ್ನಡದ 'ಯುವ' ಸಿನಿಮಾ ತೆರೆಕಂಡ 21 ದಿನಕ್ಕೆ ಪ್ರೈಂ ವಿಡಿಯೋಗೆ ಬಂದಿತ್ತು.

ಬಹುಕೋಟಿ ವೆಚ್ಚದ ಸ್ಟಾರ್ ನಟರ ಸಿನಿಮಾಗಳಿಗೆ ಮಾತ್ರ ಥಿಯೇಟರ್ ಎನ್ನುವ ಕಾಲ ದೂರ ಇಲ್ಲ. ಸಣ್ಣ ಸಿನಿಮಾಗಳನ್ನು ನೋಡಲು ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹಾಗಾಗಿ ಓಟಿಟಿ, ಸ್ಯಾಟಲೈಟ್ ಹಕ್ಕುಗಳನ್ನೇ ನಿರ್ಮಾಪಕರು ನೆಚ್ಚಿಕೊಳ್ಳುವಂತಾಗಿದೆ. ಇತ್ತೀಚೆಗೆ ತೆಲುಗಿನಲ್ಲಿ ಬಿಡುಗಡೆಯಾಗಿದ್ದ 'ದಿ ಫ್ಯಾಮಿಲಿ ಸ್ಟಾರ್' ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ.

Vijay Deverakonda s The Family Star Ott streaming date amp amp platform confirmed

ವಿಜಯ್ ದೇವರಕೊಂಡ ಹಾಗೂ ಮೃಣಾಲ್ ಠಾಕೂರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. 'ಲೈಗರ್' ಹಾಗೂ 'ಖುಷಿ' ಸಿನಿಮಾ ಸೋಲಿನ ಬಳಿಕ ದೇವರಕೊಂಡ 'ಫ್ಯಾಮಿಲಿ ಸ್ಟಾರ್' ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಗಿತ್ತು. ನೆಗೆಟಿವ್ ಟ್ರೋಲ್ ಕೂಡ ಚಿತ್ರದ ಹಿನ್ನಡೆಗೆ ಕಾರಣವಾಗಿತ್ತು.

'ಗೀತಾಗೋವಿಂದಂ' ಸಿನಿಮಾ ಕಟ್ಟಿಕೊಟ್ಟಿದ್ದ ಪರಶುರಾಮ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ದಿಲ್ ರಾಜು, ಶಿರೀಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಏಪ್ರಿಲ್ 5ಕ್ಕೆ ಈ ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ ತೆರೆಗೆ ಬಂದಿತ್ತು.

Vijay Deverakonda s The Family Star Ott streaming date amp amp platform confirmed

ಚಿತ್ರದ ನಾಯಕ ಗೋವರ್ಧನ್ (ವಿಜಯ್ ದೇವರಕೊಂಡ) ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಹೊತ್ತ 'ಫ್ಯಾಮಿಲಿ ಸ್ಟಾರ್'. ಬೇಜವಾಬ್ದಾರಿ ಸಹೋದರರು ಮತ್ತವರ ಕುಟುಂಬಗಳು. ಬೆಳಗ್ಗೆ ಹಾಲಿನ ಪ್ಯಾಕೆಟ್ ತರುವುದರಿಂದ ಹಿಡಿದು ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಕಳುಹಿಸುವವರೆಗೆ ಮನೆಯ ಸಂಪೂರ್ಣ ಜವಾಬ್ದಾರಿ ಗೋವರ್ಧನ್‌ದ್ದು. ಹೀಗಿರುವಾಗ ನಾಯಕಿ ಇಂದು (ಮೃಣಾಲ್ ಠಾಕೂರ್) ಅವರ ಮನೆಗೆ ಬಾಡಿಗೆಗೆ ಬರುತ್ತಾಳೆ. ಗೋವರ್ಧನ್ ಫ್ಯಾಮಿಲಿಗೆ ಹತ್ತಿರವಾಗಿ ಥೀಸಿಸ್ ಬರೆಯುತ್ತಾಳೆ. ಆತನಿಗೂ ಹತ್ತಿವಾಗುತ್ತಾಳೆ. ಆದರೆ ಆ ಥೀಸಿಸ್ ವಿಚಾರದಿಂದ ಪ್ರೇಮಿಗಳು ದೂರಾಗುತ್ತಾರೆ. ಮುಂದೇನು ಎನ್ನುವುದು ಸಿನಿಮಾ ಕಥೆ.

'ದಿ ಫ್ಯಾಮಿಲಿ ಸ್ಟಾರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಏಪ್ರಿಲ್ 26ಕ್ಕೆ ಸಿನಿಮಾ ಅಮೇಜಾನ್‌ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಅದ್ಯಾಕೋ ಅರ್ಜುನ್ ರೆಡ್ಡಿ ಹಾಗೂ ಗೀತಗೋವಿಂದಂ ಸಿನಿಮಾಗಳ ಬಳಿಕ ವಿಜಯ್ ದೇವರಕೊಂಡ ನಟನೆಯ ಯಾವುದೇ ಸಿನಿಮಾ ಕೈ ಹಿಡಿಯುತ್ತಿಲ್ಲ. ಆತನ ಬಗ್ಗೆ ಕ್ರೇಜ್ ಇದ್ದರೂ ಸಿನಿಮಾಗಳು ಕೈ ಕೊಡುತ್ತಲೇ ಇವೆ.

ಇನ್ನು ವಿಜಯ್ ದೇವರಕೊಂಡರನ್ನು ಕೆಲವರು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಆತನ ಸಿನಿಮಾಗಳು ಬಿಡುಗಡೆ ಆಗುವಾಗ ನೆಗೆಟಿವ್ ಕಾಮೆಂಟ್ ಮಾಡಿ ಸಿನಿಮಾ ಉತ್ತಮ ರೀತಿಯಲ್ಲಿ ಪ್ರದರ್ಶನವಾಗದಂತೆ ತಡೆಯುತ್ತಿದ್ದಾರೆ ಎನ್ನಲಾಗ್ತಿದೆ. 'ಲೈಗರ್' ಸಿನಿಮಾ ಬಿಡುಗಡೆ ಸಮಯದಲ್ಲಿ ಕೂಡ ಇದೇ ರೀತಿಯ ಚರ್ಚೆ ನಡೆದಿತ್ತು.

'ದಿ ಫ್ಯಾಮಿಲಿ ಸ್ಟಾರ್' ಸಿನಿಮಾ ರಿಲೀಸ್ ಬೆನ್ನಲ್ಲೇ ಇಂತಹ ನೆಗೆಟಿವ್ ಪೋಸ್ಟ್‌ಗಳು ವೈರಲ್ ಆಗಿದ್ದವು. ಈ ಸಂಬಂಧ ವಿಜಯ್ ಆಪ್ತರು ಹೈದರಾಬಾದ್ ಮಾಧಪುರ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಇನ್ನು ವಿಜಯ್ ದೇವರಕೊಂಡ ನಟನೆಯ 12ನೇ ಸಿನಿಮಾ ಚಿತ್ರೀಕರಣ ನಡೀತಿದೆ. ಗೌತಮ್ ತಿನ್ನನೂರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Vijay Deverakonda, Mrunal Thakur's The Family Star ott details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X