57 ದಿನಗಳ ನಂತರ ಸದ್ದಿಲ್ಲದೇ ಓಟಿಟಿಗೆ ಬಂತು ಸೆಕೆಂಡ್ ಕೇಸ್ ಆಫ್ ಸೀತಾರಾಮ್ ; ಈ ಹೊಸ ಕೇಸ್ ಮಿಸ್ ಮಾಡ್ಬೇಡಿ

ಬೆಳ್ಳಿಪರದೆಯಲ್ಲಿ ಚಿತ್ರವನ್ನು ನೋಡುವ ಮಜಾನೇ ಬೇರೆ. ಆದರೆ ಇಂದು ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಓಟಿಟಿಯ ಮೂಲಕ ಸಿನಿಮಾ ಮನೆಯ ಲಿವಿಂಗ್ ರೂಮ್‌ವರೆಗೆ ಬಂದಿದೆ. ಆ ಕಾಲದಲ್ಲಿ ಚಿತ್ರವೊಂದು ಚಿತ್ರಮಂದಿರದಲ್ಲಿ ಸೋತರೆ ಕಥೆ ಮುಕ್ತಾಯವಾದಂತೆ ಇತ್ತು. ಆದರೆ ಇಂದು ಓಟಿಟಿಯ ಮೂಲಕ ಚಿತ್ರಗಳು ಎರಡನೇ ಜನ್ಮ ಪಡೆಯುತ್ತಿವೆ.

ಹೀಗೆ ಬಿಡುಗಡೆಯಾಗುವ ಚಿತ್ರಗಳಲ್ಲಿ ಕೆಲ ಚಿತ್ರಗಳು ಹಲವರ ಬದುಕು ಬದಲಿಸಿವೆ. ಚಿತ್ರಮಂದಿರದಲ್ಲಿ ಸೋತ ಚಿತ್ರಗಳಲ್ಲಿ ಕೆಲ ಚಿತ್ರಗಳು ಓಟಿಟಿಯಲ್ಲಿ ಸದ್ದು ಮಾಡಿವೆ. ಗೆದ್ದ ಚಿತ್ರಗಳು ಓಟಿಟಿಯಲ್ಲಿ ಇತಿಹಾಸವನ್ನು ಕೂಡ ಬರೆದಿವೆ. ಭಾಷೆಯ ಭೇದ ಭಾವ ಇಲ್ಲದೆ ಗಡಿಯಾಚೆ ಸದ್ದು ಮಾಡಿವೆ.

Vijay Raghavendra s Most Intense Thriller Second Case of Seetharam is Now Streaming

ಸದ್ಯ ಈ ಸಾಲಿನಲ್ಲಿ ವಿಜಯ್ ರಾಘವೇಂದ್ರ ಅಭಿನಯದ ''ಸೆಕೆಂಡ್ ಕೇಸ್ ಆಫ್ ಸೀತಾರಾಮ್'' ಸೇರಿಕೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದ್ದು ಚಿತ್ರ ಸದ್ದಿಲ್ಲದೆ ಓಟಿಟಿಯ ಅಂಗಳಕ್ಕೆ ಬಂದಿದೆ. ಇಂದಿನಿಂದ (ಏಪ್ರಿಲ್ 17) ಚಿತ್ರ ಪ್ರಸಾರವಾಗುತ್ತಿದೆ.

ಅಂದ್ಹಾಗೇ ''ಸೆಕೆಂಡ್ ಕೇಸ್ ಆಫ್ ಸೀತಾರಾಮ" ಈ ವರ್ಷದ ಆರಂಭದಲ್ಲಿ ಅಂದರೆ ಫೆಬ್ರವರಿ 20ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲಿಯೂ ಕೂಡ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಕನ್ನಡಿಗರ ಜೊತೆ ಆಂಧ್ರದವರ ಮನ ಕೂಡ ಗೆದ್ದಿತ್ತು.

ವಿಶೇಷ ಅಂದರೆ ಈಗ ಈ ಕುತೂಹಲ ಕೆರಳಿಸುವ ಚಿತ್ರವನ್ನು ಮನೆಯಲ್ಲಿಯೇ ಕುಳಿತು ಕನ್ನಡ ಮತ್ತು ತೆಲುಗು ಜೊತೆಯಲ್ಲಿ ಹಿಂದಿ,ತಮಿಳು ಮತ್ತು ಮಲಯಾಳಂನ ಪ್ರೇಕ್ಷಕರು ಕೂಡ ನೋಡಬಹುದು.

ಕಥಾಹಂದರ

2021ರಲ್ಲಿ ಬಿಡುಗಡೆಯಾಗಿದ್ದ ''ಸೀತಾರಾಮ್ ಬಿನೊಯ್ ಕೇಸ್ ನಂ. 18'' ಚಿತ್ರದ ಎರಡನೇ ಭಾಗ ಇದು. ಹಾಗಂಥ ಆ ಕಥೆಗೂ ಈ ಕಥೆಗೂ ಸಂಬಂಧ ಇಲ್ಲ. ಅಲ್ಲಿನ ಜಾಗ, ಪಾತ್ರ, ಸಂಬಂಧಗಳು ಇಲ್ಲಿ ಮುಂದುವರೆದಿವೆ. ಹಳೇ ಪ್ರಕರಣದ ಭೇದಿಸಿದ ಬಳಿಕ ಪೊಲೀಸ್ ಅಧಿಕಾರಿ ಸೀತಾರಾಮ್ ಬಿನೋಯ್ (ವಿಜಯ್ ರಾಘವೇಂದ್ರ) ಆನೆಗುಡ್ಡ ಠಾಣೆಯಲ್ಲಿ ಕರ್ತವ್ಯ ಮುಂದುವರೆಸುತ್ತಿರುತ್ತಾನೆ.

`

ಆದರೆ ದರೋಡೆ, ಹತ್ಯೆಗಳಿಂದ ಊರು ತಣ್ಣಗಾಯಿತು ಎಂದುಕೊಳ್ಳುವ ವೇಳೆಗೆ ಮತ್ತೆ ಸರಣಿ ಹತ್ಯೆಗಳು ಆರಂಭವಾಗುತ್ತದೆ. ಪೋಸ್ಟ್‌ಮಾರ್ಟಂ ರಿಪೋರ್ಟ್‌ನಲ್ಲಿ ಇದು ಸೈಕೋ ಕಿಲ್ಲರ್ ಕೆಲಸ ಎನ್ನುವುದು ಗೊತ್ತಾಗುತ್ತದೆ. ಅಲ್ಲಿಂದ ಮುಂದೆ ಸೀತಾರಾಮ್ ಪ್ರಕರಣದ ಬೆನ್ನು ಬೀಳುತ್ತಾನೆ. ಅಷ್ಟಕ್ಕೂ ಈ ಹತ್ಯೆಗಳ ಹಿಂದೆ ಯಾರಿದ್ದಾರೆ? ಪ್ರಕರಣದ ತನಿಖೆ ಹೇಗೆ ಸಾಗುತ್ತದೆ? ಎನ್ನುವುದು ಇನ್ನುಳಿದ ಕಥೆ.

ತಾರಾಬಳಗ

ವಿಜಯ್ ರಾಘವೇಂದ್ರ, ಗೋಪಾಲ್ ಕೃಷ್ಣ ದೇಶಪಾಂಡೆ, ಉ‍ಷಾ ಭಂಡಾರಿ ಮುಂತಾದವರು

ನಿರ್ದೇಶನ - ದೇವಿಪ್ರಸಾದ್ ಶೆಟ್ಟಿ

ನಿರ್ಮಾಣ- ಸಾತ್ವಿಕ್ ಹೆಬ್ಬಾರ್ ಮತ್ತು ದೇವಿಪ್ರಸಾದ್ ಶೆಟ್ಟಿ

ಛಾಯಾಗ್ರಹಣ- ಹೇಮಂತ್ ಆಚಾರ್ಯ

ಸಂಗೀತ ನಿರ್ದೇಶನ - ನವನೀತ್ ಶಾಮ್

ಎಲ್ಲಿ ನೋಡಬಹುದು..?

ಸದ್ಯ ಇಂದಿನಿಂದ ''ಸೆಕೆಂಡ್ ಕೇಸ್ ಆಫ್ ಸೀತಾರಾಮ್'' ಚಿತ್ರ ಪ್ರಸಾರವಾಗುತ್ತಿದೆ. ಆಗಲೇ ಹೇಳಿದಂತೆ ಐದು ಭಾಷೆಗಳಲ್ಲಿ ಚಿತ್ರ ನೋಡುವ ಅವಕಾಶ ಪ್ರೇಕ್ಷಕರಿಗಿದ್ದು ಆಸಕ್ತ ಚಿತ್ರಪ್ರೇಮಿಗಳು ಈ ಚಿತ್ರವನ್ನು ''ಅಮೆಜಾನ್ ಪ್ರೈಮ್‌''ನಲ್ಲಿ ನೋಡಬಹುದು.

ಈಗಾಗಲೇ ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಿರುವ ಹಲವರು, ಓಟಿಟಿಯಲ್ಲಿ ಚಿತ್ರ ಬಂದಿರುವ ಹಿನ್ನೆಲೆ ತಮ್ಮ ತಮ್ಮ ಹಿಂಬಾಲಕರಲ್ಲಿ ಈ ಚಿತ್ರವನ್ನು ನೋಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಈ ಚಿತ್ರವನ್ನು ಅಮೆಜಾನ್ ಪ್ರೈಮ್‌ನಲ್ಲಿ ಈಗಾಗಲೇ ಕಣ್ತುಂಬಿಕೊಂಡಿದ್ದು ವಿಜಯ್ ರಾಘವೇಂದ್ರ ಅವರ ಅಭಿನಯಕ್ಕೆ ಮನ ಸೋತಿದ್ಧಾರೆ. ಇಡೀ ತಂಡದ ಪರಿಶ್ರಮವನ್ನು ಮೆಚ್ಚಿಕೊಂಡು ಟ್ವಿಟ್‌ಗಳನ್ನು ಮಾಡುತ್ತಿದ್ಧಾರೆ. ನೀವು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ಇಷ್ಟ ಪಡುವರಾಗಿದ್ದರೆ ಈ ಹೊಸ ಕೇಸ್‌ನ್ನು ತಪ್ಪದೇ ಮನೆಯವರ ಜೊತೆ ಕುಳಿತು ಯಾವುದೇ ನಿರೀಕ್ಷೆಗಳಿಲ್ಲದೇ ನೋಡಿ.

`

English summary
Watch the Second Case of Seetharam on Amazon Prime! Vijay Raghavendra returns as the brilliant Inspector Seetharam in this gripping, critically acclaimed investigative thriller. A new town, a darker mystery, and a chilling hunt for the truth. Stream the most anticipated Kannada sequel now!`
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X