'ಮಹಾರಾಜ'ನ ದರ್ಶನಕ್ಕೆ ಮುಗಿ ಬಿದ್ದ ಜನ,  ನೆಟ್‌ಫ್ಲಿಕ್ಸ್‌ನಲ್ಲಿ ದಾಖಲೆ ಬರೆದ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ..!

ಒಂದು ಕಡೆ ಕಮರ್ಷಿಯಲ್‌ ಹೀರೋ ಆಗಿದ್ದುಕೊಂಡೂ ಯಾವುದೇ ಇಮೇಜಿಗೆ ಅಂಟಿಕೊಳ್ಳದ ದಕ್ಷಿಣ ಭಾರತದ ಏಕೈಕ ಹೀರೋ ವಿಜಯ್‌ ಸೇತುಪತಿ.

ಒಂದು ಸಿನಿಮಾ ಹಿಟ್‌ ಆಗುತ್ತಿದ್ದಂತೇ ಅದರ ಗೆಲುವನ್ನು ತಲೆಗೇರಿಸಿಕೊಂಡು ಇಂಥದ್ದೇ ಪಾತ್ರ ಮಾಡುತ್ತೀನಿ ಅಂತಾ ಹಠ ಹಿಡಿಯುವವರೇ ಹೆಚ್ಚು. ಇಂಥವರ ನಡುವೆ ಅದ್ಯಾವುದೇ ರೋಲಾದರೂ ಕೊಡಿ. ಕಥೆ ಚೆನ್ನಾಗಿದ್ದರೆ ಮಾಡ್ತೀನಿ ಎನ್ನುವ ವಿಜಯ್‌ ಸೇತುಪತಿ ವಯಸ್ಸಿಗೆ ಮೀರಿದ ಪಾತ್ರಗಳನ್ನು ಮಾಡಿದವರು. ಪ್ರತಿ ಚಿತ್ರದಲ್ಲಿಯೂ ಪ್ರಯೋಗಾತ್ಮಕವಾಗಿಯೇ ತಮ್ಮನ್ನು ಒಡ್ಡಿಕೊಂಡವರು. ಇಂಥಾ ವಿಜಯ್ ಸೇತುಪತಿ ಅಭಿನಯದ ಮಹಾರಾಜ ಚಿತ್ರಕ್ಕೆ ಅಖಂಡ ಭಾರತ ಉಘೇ ಉಘೇ ಎನ್ನುತ್ತಿದೆ.

Vijay Sethupathi s Maharaja Takes the Top Spot on Netflix s Trending List in India

ಹೌದು.. ಮಹಾರಾಜ.. 'ಮಕ್ಕಳ್ ಸೆಲ್ವನ್' ವಿಜಯ್ ಸೇತುಪತಿ ಅಭಿನಯದ 50ನೇ ಸಿನಿಮಾ. ಜೂನ್ 14ರಂದು ಚಿತ್ರಮಂದಿರದಲ್ಲಿ ತೆರೆಗೆ ಬಂದು, ಮೂರು ವಾರದಲ್ಲಿ 100 ಕೋಟಿಯನ್ನು ಕೊಳ್ಳೆ ಹೊಡೆದ ಈ ಸಿನಿಮಾವನ್ನ ಈಗ ಭಾಷೆಯ ಭೇದ -ಭಾವ ಇಲ್ಲದೇ ಅನೇಕರು ನೆಟ್‌ಫ್ಲಿಕ್ಸ್‌ನಲ್ಲಿ ಮುಗಿಬಿದ್ದು ನೋಡುತ್ತಿದ್ದಾರೆ. ಅದ್ಭುತ ಚಿತ್ರಕಥೆ ,ಸಂಭಾಷಣೆ , ಬದುಕಿಗೆ ಹತ್ತಿರವಾಗುವ ನಿರೂಪಣೆ, ಎಂದೆಲ್ಲಾ ಬಾಯ್ತುಂಬ ಹೊಗಳುತ್ತಿದ್ದಾರೆ.

ಇದೆಲ್ಲದಕ್ಕೆ ಕೈಗನ್ನಡಿ ಎಂಬಂತೆ ಜುಲೈ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ದಿನದಿಂದ ಮಹಾರಾಜ ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿದೆ. ಇನ್ನು. ಮಹಾರಾಜ ಕೇವಲ ತಮಿಳಿನಲ್ಲಿ ಅಷ್ಟೇ ಅಲ್ಲ ಓಟಿಟಿಯಲ್ಲಿ ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೆ ಡಬ್ ಮಾಡಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಕೇವಲ ಭಾರತದಲ್ಲಿ ಮಾತ್ರ ಅಲ್ಲ ಓಮನ್, ನ್ಯೂಜಿಲ್ಯಾಂಡ್, ಮಾರಿಷಸ್, ಕುವೈತ್, ಕೀನ್ಯಾ, ಆಸ್ಟ್ರೇಲಿಯಾ, ಶ್ರೀಲಂಕಾ, ಸಿಂಗಾಪುರ, ಕತಾರ್, ನೈಜಿರಿಯಾ, ಮಾಲ್ಡೀವ್ಸ್, ಮಲೇಷ್ಯಾ, ಬಾಂಗ್ಲಾದೇಶ, ಬಹ್ರೈನ್, ಪಾಕಿಸ್ತಾನ ಸೇರಿದಂತೆ ಒಟ್ಟು 10 ದೇಶಗಳ ನೆಟ್‌ಫ್ಲಿಕ್ಸ್‌ ಓಟಿಟಿಯಲ್ಲಿ ಮಹಾರಾಜ ಟಾಪ್‌ ಟ್ರೆಂಡಿಂಗ್‌ನಲ್ಲಿದೆ.

ಅಂದ್ಹಾಗೇ ಜವಾನ್ ಚಿತ್ರದ ಮೂಲಕ ಉತ್ತರ ಭಾರತೀಯ ಸಿನಿ ರಸಿಕರ ಹೃದಯವನ್ನೂ ಗೆದ್ದವರು ವಿಜಯ್‌ ಸೇತುಪತಿ. ಇನ್ನೂ ಈ ಚಿತ್ರದಲ್ಲಿ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿಲನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಹೀಗಾಗಿ ಹಿಂದಿಯಲ್ಲಿ ಈ ಚಿತ್ರ ನೋಡಲು ಅನೇಕರು ನೆಟ್‌ಫ್ಲಿಕ್ಸ್‌ನ ಬಾಗಿಲು ಬಡಿಯುತ್ತಿದ್ದಾರೆ. ವಿಜಯ್ ಸೇತುಪತಿ ಮತ್ತು ಅನುರಾಗ್ ಕಶ್ಯಪ್ ಅಭಿನಯಕ್ಕೆ ಮನ ಸೋಲುತ್ತಿದ್ದಾರೆ.

ವಿಜಯ್ ಸೇತುಪತಿ ಮತ್ತು ಅನುರಾಗ್ ಕಶ್ಯಪ್ ಹೊರತು ಪಡಿಸಿ ಮಮತಾ ಮೋಹನ್‌ದಾಸ್, ಅಭಿರಾಮಿ, ಭಾರತೀರಾಜಾ, ಸಿಂಗಂಪುಲಿ, ವಿನೋದ್ ಸಾಗರ್, ಸರವಣ ಸುಬ್ಬಯ್ಯ, ಮುನಿಶ್‌ಕಾಂತ್, ಅರುಳ್‌ದಾಸ್‌, ವೆಟ್ರಿವೇಲ್ ರಾಜ, ಸಚನಾ ನಮಿದಾಸ್, ಮುಂತಾದವರು ಇದ್ದಾರೆ. ಇನ್ನೂ ವಿಜಯ್ ಸೇತುಪತಿ ಅವರ ಪತ್ನಿ ಪಾತ್ರವನ್ನು ದಿವ್ಯಾ ಭಾರತಿ ನಿರ್ವಹಿಸಿದ್ಧಾರೆ.

ಇನ್ನೂ ಕನ್ನಡದ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ನೀಡಿರುವುದು ಇನ್ನೊಂದು ವಿಶೇಷ. ನಿತಿಲನ್ ಸ್ವಾಮಿನಾಥನ್ ಈ ಚಿತ್ರವನ್ನು ನಿರ್ದೇಶಿಸಿದ್ಧಾರೆ. ಜಗದೀಶ್ ಪಳನಿಸ್ವಾಮಿ, ಸುಧನ್ ಸುಂದರಂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ವಿಜಯ್ ಸೇತುಪತಿ ಅಭಿನಯದ ಮಹಾರಾಜ ಚಿತ್ರವನ್ನ ಅನೇಕರು ನೆಟ್‌ಫ್ಲಿಕ್ಸ್‌ ಓಟಿಟಿಯಲ್ಲಿ ನೋಡುತ್ತಿದ್ದಾರೆ. ಬೇರೆಯವರಿಗೂ ನೋಡಲು ಹೇಳುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X