For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರಕ್ಕೆ ನೋ, ಟಿವಿ-ಒಟಿಟಿಗೆ ಜೈ ಎಂದ ವಿಜಯ್ ಸೇತುಪತಿ ಚಿತ್ರ

  |

  ಆಧುನಿಕತೆ ಬೆಳೆಯುತ್ತಿದ್ದಂತೆ ಟ್ರೆಂಡ್ ಬದಲಾಗುತ್ತಿದೆ. ಅದೊಂದು ಸಮಯದಲ್ಲಿ ಸಿನಿಮಾಗಳು ಅಂದ್ರೆ ಚಿತ್ರಮಂದಿರಕ್ಕೆ ಬಂದು ನೋಡಬೇಕಿತ್ತು. ಕಾಲಕ್ರಮೇಣ ದೂರದರ್ಶನ ಬಂದರೂ ಸಿನಿಮಾ ಅಂದ್ರೆ ಥಿಯೇಟರ್ ಅನುಭವಕ್ಕಿಂತ ಬೇರಿಲ್ಲ ಎನ್ನುತ್ತಿದ್ದರು ಜನರು. ಈಗ ಚಿತ್ರಮಂದಿರ, ಟಿವಿಗಳನ್ನು ಮೀರಿದ ತಂತ್ರಜ್ಞಾನ ಬೆಳೆದು ನಿಂತಿದೆ.

  ಈಗ ಒಟಿಟಿಗಳ ಕಾಲ. ಚಿತ್ರಮಂದಿರ, ಟಿವಿಯಲ್ಲಿ ಸಿನಿಮಾ ನೋಡುವುದಕ್ಕಿಂತ ತನ್ನ ಮೊಬೈಲ್‌ನಲ್ಲಿ ಕುಳಿತು ಹೊಸ ಹೊಸ ಚಿತ್ರಗಳನ್ನು ನೋಡುವ ಸಮಯ ಇದು. ಕಳೆದ ಎರಡು ವರ್ಷದಲ್ಲಿ ಚಿತ್ರಮಂದಿರಗಳು ಮುಚ್ಚಿದ್ದರ ಪರಿಣಾಮ ಒಟಿಟಿಗಳು ಹೆಚ್ಚು ಪರಿಣಾಮಕಾರಿ ಹಾಗೂ ಪ್ರಭಾವ ಬೀರಿದೆ. ಸ್ಟಾರ್ ನಟರ ಚಿತ್ರಗಳು ಈಗ ಥಿಯೇಟರ್‌ಗೆ ಕಾಯದೆ ನೇರವಾಗಿ ಒಟಿಟಿಯಲ್ಲಿ ತಮ್ಮ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.

  'ಈಗಲೇ ನನಗೊಂದು ಕಿಸ್ ಕೊಡು': ಶಮಿತಾ ಶೆಟ್ಟಿ ಮತ್ತು ರಾಕೇಶ್ ಮುತ್ತಿನ ಕಥೆ 'ಈಗಲೇ ನನಗೊಂದು ಕಿಸ್ ಕೊಡು': ಶಮಿತಾ ಶೆಟ್ಟಿ ಮತ್ತು ರಾಕೇಶ್ ಮುತ್ತಿನ ಕಥೆ

  ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಕೆಲವು ನಟರು ಟಿವಿಯಲ್ಲೇ ಎಕ್ಸ್‌ಕ್ಲೂಸಿವ್ ಆಗಿ ರಿಲೀಸ್ ಮಾಡುತ್ತಿರುವ ಬಹಳ ಅಪರೂಪ ಎನಿಸುತ್ತಿದೆ. ಹೌದು, ಇಂತಹದೊಂದು ಬೆಳವಣಿಗೆ ಈಗ ತಮಿಳು ಚಿತ್ರರಂಗದಲ್ಲಿ ನಡೆಯುತ್ತಿದೆ. ತಮಿಳು ಸ್ಟಾರ್ ನಟ ವಿಜಯ್ ಸೇತುಪತಿ ತನ್ನ ಹೊಸ ಚಿತ್ರವನ್ನು ನೇರವಾಗಿ ಟಿವಿಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

  ವಿಜಯ್ ಸೇತುಪತಿ ಅಭಿನಯದ ತುಘಲಕ್ ದರ್ಬಾರ್ ಸಿನಿಮಾ ಎಕ್ಸ್‌ಕ್ಲೂಸಿವ್ ಆಗಿ ನೆಟ್‌ಪ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ ಎಂದು ಶುಕ್ರವಾರ ಅಧಿಕೃತವಾಗಿ ಪ್ರಕಟವಾಗಿದೆ. ಈ ಚಿತ್ರದ ಟ್ರೈಲರ್ ಆಗಸ್ಟ್ 31 ರಂದು ರಿಲೀಸ್ ಆಗಲಿದೆ. ಇನ್ನು ನೆಟ್‌ಪ್ಲಿಕ್ಸ್‌ಗೂ ಮುಂಚೆ ತುಘಲಕ್ ದರ್ಬಾರ್ ಸಿನಿಮಾ ಸನ್ ಟಿವಿಯಲ್ಲಿ ಪ್ರೀಮಿಯರ್ ಆಗಲಿದೆ. ಸೆಪ್ಟೆಂಬರ್ 10ರಂದು ಸಂಜೆ 6.30ಕ್ಕೆ ಸನ್ ಟಿವಿಯಲ್ಲಿ ತುಘಲಕ್ ದರ್ಬಾರ್ ಸಿನಿಮಾ ಪ್ರೀಮಿಯರ್ ಕಾಣ್ತಿದೆ. ಇದಕ್ಕೂ ಮುಂಚೆ ಭೂಮಿಕಾ ಎಂಬ ಸಿನಿಮಾ ನೇರವಾಗಿ ಟಿವಿಯಲ್ಲಿ ರಿಲೀಸ್ ಅಗಿತ್ತು.

  ದೆಹಲಿಪ್ರಸಾದ್ ದೀನದಯಾಳನ್ ತುಘಲಕ್ ದರ್ಬಾರ್ ಚಿತ್ರಕ್ಕೆ ಅಕ್ಷನ್ ಕಟ್ ಹೇಳಿದ್ದಾರೆ. ಸೇತುಪತಿ ಜೊತೆ ಮಂಜಿಮಾ ಮೋಹನ್ ಮತ್ತು ರಾಶಿ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ತೆಲುಗು ನಟ ನಿತೀನ್, ನಭಾ ನಟೇಶ್, ತಮನ್ನಾ ನಟನೆಯ ಮೇಸ್ಟ್ರೋ ಸಿನಿಮಾ ಸಹ ಒಟಿಟಿಯಲ್ಲಿ ರಿಲೀಸ್ ಅಗುತ್ತಿದೆ. ಹಿಂದಿಯ ಹಿಟ್ ಸಿನಿಮಾ ಅಂಧಾದುನ್ ತೆಲುಗು ರಿಮೇಕ್ ಆಗಿರುವ ಮೇಸ್ಟ್ರೋ ಸಿನಿಮಾ ಸೆಪ್ಟೆಂಬರ್ 17 ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುತ್ತಿದೆ.

  ಇದಕ್ಕೂ ಮುಂಚೆ ಕನ್ನಡದಲ್ಲಿಯೂ ಆಮ್ಲೆಟ್ ಎನ್ನುವ ಚಿತ್ರ ಕಿರುತೆರೆಯಲ್ಲಿ ಎಕ್ಸ್‌ಕ್ಲೂಸಿವ್ ಆಗಿ ಪ್ರದರ್ಶನ ಕಂಡಿತ್ತು.

  English summary
  Tamil actor Vijay Sethupathi's Thuglaq Darbar movie to be premiered directly on Sun TV. For OTT they have opted Netflix. Both to release on the same day Ganesh Chathurthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X