Varisu OTT : ವಾರಿಸು ಓಟಿಟಿ ಬಿಡುಗಡೆ ದಿನಾಂಕ ಪ್ರಕಟ; ಈಗಾಗಲೇ ಮೊಬೈಲ್‌ಗಳಲ್ಲಿ ಹರಿದಾಡ್ತಿದೆ ಚಿತ್ರ!

ಈ ಬಾರಿಯ ಸಂಕ್ರಾಂತಿ ಹಬ್ಬದ ಪ್ರಯುಕ್ತ ರೇಸ್ ಗೆ ಇಳಿದಿದ್ದ ಸೌತ್ ಸ್ಟಾರ್ ಸಿನಿಮಾಗಳಲ್ಲಿ ತಮಿಳಿನ ದಳಪತಿ ವಿಜಯ್ ನಟನೆಯ ವಾರಿಸು ಸಹ ಒಂದು. ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡಿದ್ದ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ, ಬಾಲಕೃಷ್ಣ ನಟನೆಯ ವೀರ ಸಿಂಹ ರೆಡ್ಡಿ ಹಾಗೂ ತಮಿಳಿನ ಅಜಿತ್ ಕುಮಾರ್ ನಟನೆಯ ತುನಿವು ಈ ಎಲ್ಲಾ ಚಿತ್ರಗಳಿಗಿಂತ ಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿತು.

ಇನ್ನು ನಿರ್ಮಾಪಕರು ವಾರಿಸು ಚಿತ್ರ ಮುನ್ನೂರು ಕೋಟಿ ಕ್ಲಬ್ ಸೇರಿದೆ ಎಂದು ಅಧಿಕೃತವಾಗಿ ಪ್ರಕಟಿಸಿದರಾದರೂ ಈ ಚಿತ್ರವನ್ನು ವಿತರಿಸಿದ್ದ ವಿತರಕರು ಚಿತ್ರ ಅಷ್ಟು ಗಳಿಸಿಲ್ಲ, ನಿರ್ಮಾಪಕರು ತಪ್ಪು ಲೆಕ್ಕ ನೀಡಿದ್ದಾರೆ ಎಂದು ಆರೋಪಿಸಿದ್ದರು. ಹೀಗೆ ಗಳಿಕೆ ವಿಚಾರದಲ್ಲಿ ಗೊಂದಲ ಹುಟ್ಟಿಸಿದ್ದ ವಾರಿಸು ಸದ್ಯ ಚಿತ್ರಮಂದಿರಗಳಲ್ಲಿ ತನ್ನ ಓಟವನ್ನು ಮುಕ್ತಾಯಗೊಳಿಸಿದ್ದು, ಓಟಿಟಿಗೆ ಲಗ್ಗೆ ಇಡಲು ಸಜ್ಜಾಗಿದೆ.

ಹೌದು, ವಾರಿಸು ಚಿತ್ರದ ಓಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೊ ಖರೀದಿಸಿದ್ದು, ಇದೇ ತಿಂಗಳ 22ರಂದು ಬಿಡುಗಡೆಯಾಗಲಿದೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ವಾರಿಸು ಚಿತ್ರ ಓಟಿಟಿಯಲ್ಲಿ ವೀಕ್ಷಿಸಲು ಸಿಗಲಿದೆ.

Vijay starrer Varisu will be streaming on Amazon prime video from Feb 22nd

ಆದರೆ ಈಗಾಗಲೇ ಈ ಚಿತ್ರದ ಎಚ್‌ ಡಿ ಪ್ರಿಂಟ್ ವಿಡಿಯೊ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಹೌದು, ವಾರಿಸು ಚಿತ್ರದ ಪೈರಸಿ ಎಲ್ಲೆಡೆ ಹಬ್ಬಿದೆ. ಎರಡು ವಾರಗಳ ಹಿಂದೆಯೇ ಚಿತ್ರದ ಅಚ್ಚುಕಟ್ಟಾದ ಮಾಸ್ಟರ್ ಪ್ರಿಂಟ್ ಲೀಕ್ ಆಗಿತ್ತು ಹಾಗೂ ಈ ಸಂದರ್ಭದಲ್ಲಿ ಬೇಗನೇ ಓಟಿಟಿ ಬಿಡುಗಡೆಯನ್ನೂ ಸಹ ಮಾಡಬಿಡಿ ಎಂಬ ಕೂಗು ಕೇಳಿಬಂದಿತ್ತು. ಕೇವಲ ವಾರಿಸು ಮಾತ್ರವಲ್ಲದೇ ಅಜಿತ್ ಕುಮಾರ್ ನಟನೆಯ ತುನಿವು ಸಹ ಇದೇ ರೀತಿ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು.

ಇನ್ನು ಈ ಚಿತ್ರದ ಕುರಿತಾಗಿ ಮೊದಲಿನಂದಲೂ ಸಹ ಟ್ರೋಲ್ ದೊಡ್ಡ ಮಟ್ಟದಲ್ಲಿಯೇ ನಡೆಯುತ್ತಾ ಬಂದಿದೆ. ಚಿತ್ರವನ್ನು ತೆಲುಗಿನ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದು, ತೆಲುಗಿನ ಹಲವಾರು ಚಿತ್ರಗಳ ಮಿಶ್ರಣವಿದೆ ಎಂದೆಲ್ಲಾ ಟ್ರೋಲ್ ಆಗಿತ್ತು. ಅಲ್ಲದೇ ಚಿತ್ರದ ಪ್ರಿ ರಿಲೀಸ್ ಇವೆಂಟ್‌ನಲ್ಲಿ ನಿರ್ಮಾಪಕ ದಿಲ್ ರಾಜು ನೀಡಿದ್ದ ಹೇಳಿಕೆಗಳು ಮತ್ತು ಬಿಡುಗಡೆ ನಂತರ ನಿರ್ದೇಶಕ ವಂಶಿ ಪೈಡಿಪಲ್ಲಿ ಸೀರಿಯಲ್ ಅನ್ನು ಹೊಗಳಿದ್ದೂ ಸಹ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗಿದ್ದವು.

More from Filmibeat

English summary
Vijay starrer Varisu will be streaming on Amazon prime video from Feb 22nd. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X