For Quick Alerts
  ALLOW NOTIFICATIONS  
  For Daily Alerts

  ವಿಕ್ರಂ- ಶ್ರೀನಿಧಿ ಶೆಟ್ಟಿ ಜೋಡಿಯ 'ಕೋಬ್ರಾ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಫಿಕ್ಸ್: ಎಲ್ಲಿ.. ಯಾವಾಗ?

  |

  ಚಿಯಾನ್ ವಿಕ್ರಂ ನಟನೆಯ ಸೈಕಲಾಜಿಕಲ್ ಆಕ್ಷನ್ ಥ್ರಿಲ್ಲರ್ 'ಕೋಬ್ರಾ' ಇತ್ತೀಚೆಗೆ ರಿಲೀಸ್ ಆಗಿತ್ತು. ಅಜಯ್ ಜ್ಞಾನಮುತ್ತು ನಿರ್ದೇಶನದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ವಿಕ್ರಂ ಚಿತ್ರ ವಿಚಿತ್ರ ಅವತಾರಗಳಲ್ಲಿ ದರ್ಶನ ಕೊಟ್ಟಿದ್ದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತಿತ್ತು. ತಿಂಗಳಿಗೂ ಮೊದಲೇ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗ್ತಿದೆ.

  ಆಗಸ್ಟ್ 31ರಂದು 'ಕೋಬ್ರಾ' ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಿತ್ತು. ಪ್ರಯೋಗಾತ್ಮಕ ಸಿನಿಮಾಗಳಿಂದ ಸದ್ದು ಮಾಡುವ ವಿಕ್ರಂ ಈ ಚಿತ್ರದಲ್ಲೂ ವಿಭಿನ್ನ ಪ್ರಯತ್ನ ಮಾಡಿದ್ದರು. ನಾಯಕಿಯಾಗಿ 'KGF' ಸಿನಿಮಾ ಖ್ಯಾತಿಯ ಕನ್ನಡ ನಟಿ ಶ್ರೀನಿಧಿ ಶೆಟ್ಟಿ ನಟಿಸಿದ್ದರು. 'KGF' ನಂತರ ಮತ್ಯಾವುದೇ ಸಿನಿಮಾ ಒಪ್ಪಿಕೊಳ್ಳದ ಚೆಲುವೆ ಅಳೆದು ತೂಗಿ ಈ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿತ್ತು. ಮೊದಲ ದಿನದಿಂದಲೇ ಸಿನಿಮಾ ಬಗ್ಗೆ ನೆಗೆಟಿವ್ ಟಾಕ್ ಕೇಳಿ ಬಂದಿತ್ತು.

  'ಕೆಜಿಎಫ್' ಬಳಿಕ ನಟಿಸಿದ 'ಕೋಬ್ರಾ'ದಲ್ಲಿ ನಿರಾಸೆ ಮೂಡಿಸಿದ ಶ್ರೀನಿಧಿ ಶೆಟ್ಟಿ: ಮುಂದೇನು?'ಕೆಜಿಎಫ್' ಬಳಿಕ ನಟಿಸಿದ 'ಕೋಬ್ರಾ'ದಲ್ಲಿ ನಿರಾಸೆ ಮೂಡಿಸಿದ ಶ್ರೀನಿಧಿ ಶೆಟ್ಟಿ: ಮುಂದೇನು?

  ಬರೋಬ್ಬರಿ 3 ಗಂಟೆ 3 ನಿಮಿಷ ಕಾಲಾವಧಿಯ 'ಕೋಬ್ರಾ' ಸಿನಿಮಾ ನೋಡಿದವರು ಸುಸ್ತಾಗಿದ್ದರು. ಇದರಿಂದ ಎಚ್ಚೆತ್ತುಕೊಂಡ ಚಿತ್ರತಂಡ ಮರುದಿನವೇ 20 ನಿಮಿಷ ಸನ್ನಿವೇಶಗಳನ್ನು ಕತ್ತರಿಸಿ ಸಿನಿಮಾ ಪ್ರದರ್ಶನ ಮಾಡಿತ್ತು. ಆದರೂ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಸಾಮಾನ್ಯವಾಗಿ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಆದರೂ 7 ವಾರಗಳ ನಂತರ ಓಟಿಟಿ ರಿಲೀಸ್‌ಗೆ ಒಪ್ಪಂದ ಆಗಿರುತ್ತದೆ. ಆದರೆ 'ಕೋಬ್ರಾ' ಸಿನಿಮಾ ತಿಂಗಳಿಗೂ ಮುನ್ನ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಬರ್ತಿದೆ. ಸೋನಿ ಲಿವ್‌ನಲ್ಲಿ ಸೆಪ್ಟೆಂಬರ್ 28ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

  ಇನ್ನು 'ಕೋಬ್ರಾ' ಚಿತ್ರದಲ್ಲಿ ಮಾಜಿ ಕ್ರಿಕೆಟ್ ಆಟಗಾರ ಇರ್ಫಾನ್ ಪಠಾಣ್ ಟರ್ಕಿಷ್ ಇಂಟರ್‌ಪೋಲ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಮೊದಲಿನಿಂದಲೂ ಭಿನ್ನ ವಿಭಿನ್ನ ಗೆಟಪ್‌ಗಳನ್ನು ಹಾಕುವುದರಲ್ಲಿ ವಿಕ್ರಂ ಮುಂದಿರುತ್ತಾರೆ. ಈ ಚಿತ್ರದಲ್ಲೂ 10ಕ್ಕೂ ಅಧಿಕ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಕೆ. ಎಸ್ ರವಿಕುಮಾರ್, ರೋಷನ್ ಮ್ಯಾಥ್ಯೂ, ರೋಬೊ ಶಂಕರ್, ಮೃಣಾಲಿಣಿ ರವಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ದೇಶ ವಿದೇಶಗಳಲ್ಲಿ ಬಗಹ ಸೊಗಸಾಗಿ ಸಿನಿಮಾ ಸೆರೆಹಿಡಿಯಲಾಗಿದೆ. ಹರೀಶ್ ಕಣನ್ ಸಿನಿಮಾಟೋಗ್ರಫಿ, ಎ. ಆರ್ ರೆಹಮಾನ್ ಮ್ಯೂಸಿಕ್ ಚಿತ್ರಕ್ಕಿದೆ.

  Vikram And srinidhi shetty Starrer Cobra OTT release date announced Here are details

  ವಿಕ್ರಂ ಅಭಿನಯಕ್ಕೆ ದೊಡ್ಡ ಅಭಿಮಾನಿ ಬಳಗ ಇದೆ. 'ಕೋಬ್ರಾ' ಚಿತ್ರವನ್ನು ಕೆಲವರು ಥಿಯೇಟರ್‌ನಲ್ಲಿ ನೋಡಲು ಮಿಸ್ ಮಾಡಿಕೊಂಡಿದ್ದರು. ಇದೀಗ ಓಟಿಟಿಯಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಚಿಯಾನ್ ವಿಕ್ರಮ್ ನಟನೆಯ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಕೂಡ ಸೆಪ್ಟೆಂಬರ್ 30ಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತಿದೆ.

  English summary
  Vikram And srinidhi shetty Starrer Cobra OTT release date announced. Cobra will be Available for streaming on sonyliv from 28th september. know more.
  Friday, September 23, 2022, 23:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X