12th Fail Kannada OTT: ದಿಢೀರ್ ಕನ್ನಡದಲ್ಲಿ ಓಟಿಟಿಗೆ ಬಂತು '12th ಫೇಲ್'; ಮಿಸ್ ಮಾಡ್ಬೇಡಿ
ಬಾಲಿವುಡ್ ಸೂಪರ್ ಹಿಟ್ '12th ಫೇಲ್' ಕನ್ನಡ ವರ್ಷನ್ ಓಟಿಟಿಗೆ ಬಂದಿದೆ. ಕಳೆದ ವರ್ಷ ಅಕ್ಟೋಬರ್ 27ಕ್ಕೆ ತೆರೆಕಂಡಿದ್ದ ಈ ಬಯೋಪಿಕ್ ಸಿನಿಮಾ ಸಂಚಲನ ಸೃಷ್ಟಿಸಿತ್ತು. ನೋಡ ನೋಡುತ್ತಲೇ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿತ್ತು. ವಿದು ವಿನೋದ್ ಚೋಪ್ರಾ ನಿರ್ದೇಶನದ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ.
ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ '12th ಫೇಲ್' ಸಿನಿಮಾ ಬ್ಲಾಕ್‌ಬಸ್ಟರ್ ಆಯಿತು. ಕಲಾವಿದರ ಅಭಿನಯ, ತಂತ್ರಜ್ಞರ ಶ್ರಮಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಸಾಮಾನ್ಯ ಪ್ರೇಕ್ಷಕರಿಂದ ಬಹಳ ಮಂದಿ ಪ್ರಮುಖರು ಕೂಡ ಈ ಸಿನಿಮಾವನ್ನು ತುಂಬಾ ಮೆಚ್ಚಿಕೊಂಡರು. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮ ಜೀವನವನ್ನು ಆಧರಿಸಿ ಈ ಚಿತ್ರವನ್ನು ತೆರೆಗೆ ತರಲಾಗಿತ್ತು. ಮನೋಜ್ ಕುಮಾರ್ ಶರ್ಮ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸೆ ಬಣ್ಣ ಹಚ್ಚಿದ್ದಾರೆ.

ಚಿತ್ರಮಂದಿರಕ್ಕಿಂತ ಓಟಿಟಿಗೆ ಬಂದ ಮೇಲೆ ಸಿನಿಮಾ ಹೆಚ್ಚು ಜನಪ್ರಿಯತೆ ಪಡೆಯಿತು. ಬಾಲಿವುಡ್ ಪ್ರೇಕ್ಷಕರು ಮಾತ್ರವಲ್ಲ ಬೇರೆ ಭಾಷಿಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಕೆಲವರು ಪ್ರಾದೇಶಿಕ ಭಾಷೆಯಲ್ಲಿ ಯಾವಾಗ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎಂದು ಕಾಯುತ್ತಿದ್ದರು. ಕನ್ನಡಿಗರು ಕೂಡ '12th ಫೇಲ್' ಕನ್ನಡ ವರ್ಷನ್ ಟ್ರೈಲರ್ ನೋಡಿ ಓಟಿಟಿಗೆ ಯಾವಾಗ ಬರುತ್ತದೆ ಎಂದು ಕೇಳುತ್ತಿದ್ದರು. ಇದೀಗ ದಿಢೀರನೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆಗುತ್ತಿದೆ.
ಡಿಸೆಂಬರ್ 29ಕ್ಕೆ ಡಿಸ್ನಿ ಹಾಟ್‌ಸ್ಟರ್‌ನಲ್ಲಿ '12th ಫೇಲ್' ಹಿಂದಿ ವರ್ಷನ್ ಓಟಿಟಿಗೆ ಬಂದಿತ್ತು. ಇದೀಗ ಡಿಸ್ನಿ ಹಾಟ್‌ಸ್ಟರ್‌ನಲ್ಲೇ ದಕ್ಷಿಣದ ಭಾಷೆಗಳಲ್ಲಿ ಸಿನಿಮಾ ವೀಕ್ಷಣೆಗೆ ಸಿಗುತ್ತಿದೆ. ಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಜೀವನವನ್ನಾಧರಿಸಿ ಅನುರಾಗ್ ಪಾಠಕ್ ಪುಸ್ತಕ ಬರೆದಿದ್ದರು. ಆ ಪುಸ್ತಕ ಆಧರಿಸಿ ಸಿನಿಮಾ ಮೂಡಿ ಬಂದಿದೆ. ಹಿಂದುಳಿದ ಭಾಗದಲ್ಲಿ ಬಡ ಕುಟುಂಬಕ್ಕೆ ಸೇರಿದ ಮನೋಜ್ ಕುಮಾರ್ ಶರ್ಮಾ ಸಾಕಷ್ಟು ಕಷ್ಟಗಳನ್ನು ದಾಟಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಸ್ಫೂರ್ತಿದಾಯಕ ಕಥೆ ಚಿತ್ರದಲ್ಲಿದೆ. ಬಹಳ ಭಾವನಾತ್ಮಕವಾಗಿ ಈ ಕಥೆಯನ್ನು ಕಟ್ಟಿಕೊಟ್ಟು ವಿದು ವಿನೋದ್ ಚೋಪ್ರಾ ಗೆದ್ದಿದ್ದಾರೆ.

ಒಂದು ಹಂತದಲ್ಲಿ ದ್ವಿತೀಯ ಪಿಯುಸಿಯಲ್ಲಿ(12ನೇ ತರಗತಿ) ಫೇಲ್ ಆಗಿದ್ದ ಮನೋಜ್ ನಂತರ ಕಠಿಣ ಪರಿಶ್ರಮದಿಂದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸ್ ಆಗಿ ಐಪಿಎಸ್ ಆಗಿದ್ದರು. ಈ ನಿಜ ಜೀವನದ ಕಥೆಯನ್ನು ಬಹಳ ಸೊಗಸಾಗಿ ದೃಶ್ಯರೂಪಕ್ಕೆ ಇಳಿಸಲಾಗಿದೆ. '12th ಫೇಲ್' ಸಿನಿಮಾ ಹಲವು ವಿಭಾಗಗಳಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ ಬಾಚಿಕೊಂಡಿತ್ತು.
'12th ಫೇಲ್' ಚಿತ್ರದಲ್ಲಿ ನಾಯಕ, ನಾಯಕಿ ಅಂತ ಯಾರು ಇಲ್ಲ. ಪಾತ್ರಗಳು ಮಾತ್ರ ಕಾಣಿಸಿತ್ತವೆ. ವಿಕ್ರಾಂತ್ ಮಾಸ್ಸೆ ಜೊತೆಗೆ ಮೇಧಾ ಶಂಕರ್, ಅನಂತ್ ವಿ ಜೋಶಿ, ಆಯುಷ್ಮಾನ್ ಪುಷ್ಕರ್, ಪ್ರಿಯಾಂಶು ಚೆಟರ್ಜಿ, ಗೀತಾ ಅಗರ್ವಾಲ್ ಶರ್ಮಾ, ಹರೀಶ್ ಖನ್ನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಧು ವಿನೋದ್ ಚೋಪ್ರಾ ಈ ಚಿತ್ರವನ್ನು ನಿರ್ದೇಶನ ಮಾಡುವುದರ ಜೊತೆಗೆ ಬಂಡವಾಳ ಸಹ ಹೂಡಿದ್ದಾರೆ. ಶಂತನು ಮೊಯಿತ್ರಾ ಸಂಗೀತ, ರಂದರಾಜನ್ ರಾಮಾದ್ರನ್ ಛಾಯಾಗ್ರಹಣ ಚಿತ್ರಕ್ಕಿದೆ.
ಕನ್ನಡ ವರ್ಷನ್‌ಗೆ ಕಾಯುತ್ತಿದ್ದವರು, ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರು ಓಟಿಟಿಯಲ್ಲಿ '12th ಫೇಲ್' ಸಿನಿಮಾ ನೋಡಿ. ಈ ಸ್ಫೂರ್ತಿದಾಯಕ ಸಿನಿಮಾ ನಿಮ್ಮ ಜೀವನಕ್ಕೆ ಮತ್ತಷ್ಟು ಸ್ಫೂರ್ತಿ ತುಂಬುತ್ತದೆ.


Click it and Unblock the Notifications











