For Quick Alerts
  ALLOW NOTIFICATIONS  
  For Daily Alerts

  'ರಾರಾ ರಕ್ಕಮ್ಮ' ಡ್ಯಾನ್ಸ್ ಮಾಡಿ ಗೆದ್ದವರಿಗೆ 25 ಸಾವಿರ ರೂ. ಬಹುಮಾನ: ಕಿಚ್ಚನ ಕಡೆಯಿಂದ ಇನ್ನೊಂದು ಸರ್‌ಪ್ರೈಸ್!

  |

  ಬಾಕ್ಸಾಫೀಸ್‌ ಶೇಕ್ ಮಾಡಿದ 'ವಿಕ್ರಾಂತ್ ರೋಣ' ಸಿನಿಮಾ ಓಟಿಟಿಯಲ್ಲೂ ಸಖತ್ ಸದ್ದು ಮಾಡ್ತಿದೆ. ಸುದೀಪ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸ್ಮಾಲ್‌ ಸ್ಕ್ರೀನ್‌ಗೆ ಬಂದ ಸಿನಿಮಾ ಸಿನಿರಸಿಕರ ಮನಗೆದ್ದಿದೆ. ಇದೀಗ ಜೀ5 ಸಂಸ್ಥೆ ಡ್ಯಾನ್ಸ್ ಲವರ್ಸ್‌ಗೆ ಹೊಸ ಸ್ಪರ್ಧೆ ಏರ್ಪಡಿಸಿದೆ. ಗೆದ್ದ 10 ಜನರಿಗೆ ಭರ್ಜರಿ ಬಹುಮಾನ ಕೂಡ ಸಿಗಲಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು 'ರಾರಾ ರಕ್ಕಮ್ಮ' ಎಂದು ಕುಣಿಬೇಕು ಅಷ್ಟೆ.

  'ವಿಕ್ರಾಂತ್ ರೋಣ' ವೀಕ್ಷಿಸಿ ಸುದೀಪ್ ನಟನೆ ಹೊಗಳಿದ ಅನಿಲ್ ಕುಂಬ್ಳೆ'ವಿಕ್ರಾಂತ್ ರೋಣ' ವೀಕ್ಷಿಸಿ ಸುದೀಪ್ ನಟನೆ ಹೊಗಳಿದ ಅನಿಲ್ ಕುಂಬ್ಳೆ

  'ವಿಕ್ರಾಂತ್ ರೋಣ' ಚಿತ್ರದ 'ರಾರಾ ರಕ್ಕಮ್ಮ' ಸಾಂಗ್ ಎಲ್ಲರನ್ನು ಕುಣಿಸಿದ್ದು ಗೊತ್ತೆಯಿದೆ. ಅದರಲ್ಲೂ ಸುದೀಪ್ ಹಾಗೂ ಜಾಕ್ವೆಲಿನ್ ಮಾಡಿದ್ದ ಹುಕ್ ಸ್ಟೆಪ್ ಸೂಪರ್ ಹಿಟ್ ಆಗಿತ್ತು. 'ರಾರಾ ರಕ್ಕಮ್ಮ' ಎಂದು ಕುಣಿದವರಿಗೆ ಲೆಕ್ಕವಿಲ್ಲ. ಇದೀಗ ಮತ್ತೆ ಎಕ್ಕಸಕ್ಕ ಅಂತ ಕುಣಿಯುವ ಸಮಯ ಬಂದಿದೆ. ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ ಸಿನಿಮಾ ಬಗ್ಗೆ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಲು ಹೊಸ ಸ್ಪರ್ಧೆ ಆಯೋಜಿಸಲಾಗಿದೆ. 'ರಾರಾ ರಕ್ಕಮ್ಮ' ಡ್ಯಾನ್ಸ್ ರೀಲ್ ಮಾಡಿ ಶೇರ್ ಮಾಡಿದರೆ ಸಾಕು. ಚೆನ್ನಾಗಿ ಡ್ಯಾನ್ಸ್ ಮಾಡಿ ಆಯ್ಕೆ ಆದವರಿಗೆ 25 ಸಾವಿರ ರೂ. ನಗದು ಬಹುಮಾನದ ಜೊತೆಗೆ ಭರ್ಜರಿ ಗಿಫ್ಟ್‌ ಸಿಗಲಿದೆ. ಅದಕ್ಕಿಂತ ಮುಖ್ಯವಾಗಿ ಸುದೀಪ್ ಅವರಿಂದ ವಿಶೇಷ ಪತ್ರವೂ ಸಿಗಲಿದೆ.

  ನೀವು ಡ್ಯಾನ್ಸ್ ರೀಲ್ ಮಾಡಿ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಫ್ಲಾಟ್‌ಫಾರ್ಮ್‌ಗಳಲ್ಲಿ #vikrantronaonzee5 ಹ್ಯಾಷ್‌ಟ್ಯಾಗ್‌ ಬಳಸಿ ಜೀ5 ಪೇಜ್‌ಗೆ ಟ್ಯಾಗ್‌ ಮಾಡಿ ಶೇರ್ ಮಾಡಿ. ನಿಮಗೆ ಸೆಪ್ಟೆಂಬರ್ 20ರವರೆಗೆ ಸಮಯ ಇದೆ. ನಂತರ ವಿಜೇತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶುರುವಾಗಲಿದೆ. ಈಗಾಗಲೇ ಸಾಕಷ್ಟು ಜನ ಈ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡಿರೋ ವಿಡಿಯೋಗಳು ವೈರಲ್ ಆಗಿತ್ತು. ಇದೀಗ ಮತ್ತೆ ಕುಣಿಯಲು ಒಂದು ವಿಶೇಷ ಅವಕಾಶ ಸಿಕ್ಕಿದಂತಾಗಿದೆ.

  Vikrant Rona Ra Ra Rakkamma Dance contest Details

  ಅನೂಪ್ ಭಂಡಾರಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ವಿಕ್ರಾಂತ್ ರೋಣ' ಸಿನಿಮಾ ಜುಲೈ 28ಕ್ಕೆ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಜೀ5 ಸಂಸ್ಥೆ ಘೋಷಿಸಿದಂತೆ ಸಿನಿಮಾ ಅಂದಾಜು 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಅಜನೀಶ್ ಲೋಕನಾಥ್ ಮ್ಯೂಸಿಕ್‌ನಲ್ಲಿ ಆಲ್ಬಮ್ ಸೂಪರ್ ಹಿಟ್ ಆಗಿತ್ತು. ಅದರಲ್ಲೂ 'ರಾರಾ ರಕ್ಕಮ್ಮ' ಸಾಂಗ್ ಪರಭಾಷಿಕರನ್ನು ಕುಣಿಸಿತ್ತು. ಜಾನಿ ಮಾಸ್ಟರ್‌ ಈ ಸಾಂಗ್‌ಗೆ ಕೊರಿಯೋಗ್ರಫಿ ಮಾಡಿದ್ದರು. ಜಾಕ್ ಮಂಜು ಹಾಗು ಅಲಂಕಾರ್ ಪಾಂಡಿಯನ್ ಸಿನಿಮಾ ನಿರ್ಮಾಣ ಮಾಡಿದ್ದರು.

  English summary
  Kiccha Sudeep Starrer Vikrant Rona Ra Ra Rakkamma Dance contest Details. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X