Maadeva OTT: ಅಂತೂ ಇಂತೂ ಓಟಿಟಿಗೆ 'ಮಾದೇವ'; ಎಲ್ಲಿ ನೋಡಬಹುದು ಅಂದ್ರೆ?

ಈ ವರ್ಷದ ಆರಂಭದಲ್ಲಿ ಕನ್ನಡದ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಮೊದಲ ಏಳೆಂಟು ತಿಂಗಳ ಒಂದೇ ಒಂದು ಹಿಟ್ ಸಿನಿಮಾ ಇಲ್ಲದೇ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ 'ಯುದ್ಧಕಾಂಡ'-2 ಹಾಗೂ 'ಮಾದೇವ' ಸಿನಿಮಾಗಳು ಕೊಂಚ ಸದ್ದು ಮಾಡಿದ್ದವು. ಇದೀಗ 'ಮಾದೇವ' ಸಿನಿಮಾ ಓಟಿಟಿ ಎಂಟ್ರಿಗೆ ಸಜ್ಜಾಗಿದೆ.

ನವೀನ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದ 'ಮಾದೇವ' ಸಿನಿಮಾ ಯಶಸ್ವಿಯಾಗಿ 50 ದಿನ ಪೂರೈಸಿತ್ತು. ವಿನೋದ್ ಪ್ರಭಾಕರ್‌ಗೆ ಒಂದೊಳ್ಳೆ ಬ್ರೇಕ್ ಕೊಟ್ಟಿದೆ. ಸೋನಲ್ ಮಂಥೆರೋ ನಾಯಕಿಯಾಗಿ ಮಿಂಚಿದ್ರೆ ಶ್ರೀನಗರ ಕಿಟ್ಟಿ ಹಾಗೂ ಶ್ರುತಿ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಮಾಲಾಶ್ರೀ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Vinod Prabhakar Starrer Maadeva movie Ott Release date locked

ವಿನೋದ್ ಪ್ರಭಾಕರ್ ನಟನೆ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಜಯದೇವ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಕೇಶವ ದೇವಸಂದ್ರ ಎಂಬುವವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಪ್ರದ್ಯೋತನ್ ಸಂಗೀತ, ಬಾಲಕೃಷ್ಣ ತೋಟ ಛಾಯಾಗ್ರಹಣ 'ಮಾದೇವ' ಚಿತ್ರಕ್ಕಿದೆ. ಮದ್ದೂರು, ಕನಕಪುರ, ಚನ್ನಪಟ್ಟಣ, ಹೈದರಾಬಾದ್‌ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. 70-80ರ ದಶಕದ ಕಥೆಯನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿತ್ತು. ಅವತ್ತಿನ ಕಾಲಘಟ್ಟ ತೆರೆಗೆ ತರುವಲ್ಲಿ ತಂಡ ಸಕ್ಸಸ್ ಕಂಡಿತ್ತು.

ಈ ಹಿಂದೆ 'ರಾಬರ್ಟ್' ಚಿತ್ರದಲ್ಲಿ ವಿನೋದ್ ಪ್ರಭಾಕರ್- ಸೋನಲ್ ಮಂಥೆರೋ ಜೋಡಿಯಾಗಿ ಮಿಂಚಿದ್ದರು. ಮತ್ತೆ 'ಮಾದೇವ' ಚಿತ್ರಕ್ಕಾಗಿ ಇಬ್ಬರೂ ಜೊತೆಯಾಗಿದ್ದರು. ಇನ್ನು ಆಕ್ಷನ್ ಸನ್ನಿವೇಶಗಳಲ್ಲಿ ವಿನೋದ್ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಮಾಸ್ ಪ್ರಿಯರಿಗಂತೂ ಇದು ಹೇಳಿಮಾಡಿಸಿದ ಸಿನಿಮಾ.

'ಮಾದೇವ' ಕಥೆ

ಒಬ್ಬ ಹ್ಯಾಂಗ್‌ಮ್ಯಾನ್ ಕಥೆ ಮಾದೇವ ಚಿತ್ರದಲ್ಲಿದೆ. ಕಾರಾಗೃಹದಲ್ಲಿ ಮರಣದಂಡನೆಗೆ ಗುರಿಯಾದವರನ್ನು ನೇಣುಗಂಬಕ್ಕೆ ಏರಿಸುವ 'ಮಾದೇವ'(ವಿನೋದ್ ಪ್ರಭಾಕರ್). ಮೃಗದಂತಾದ ಆತನ ಬದುಕಿಗೆ ಪಾರ್ವತಿ(ಸೋನಲ್)ಯ ಎಂಟ್ರಿ ಆಗುತ್ತದೆ. ನಿಧಾನವಾಗಿ ಆಕೆ ಅವನನ್ನು ಬದಲಿಸುತ್ತಾಳೆ. ಆದರೆ ಮತ್ತೆ ಆತ ರಾಕ್ಷಸನಂತಾಗಿ ಅಬ್ಬರಿಸುವಂತಾಗುತ್ತದೆ. ಅದಕ್ಕೆ ಕಾರಣ ಏನು? ಮುಂದೇ ಏನೆಲ್ಲಾ ಆಗುತ್ತದೆ? ಎನ್ನುವುದು ಚಿತ್ರದ ಇನ್ನುಳಿದ ಕಥೆ.

'ಮಾದೇವ' ಬಾಕ್ಸಾಫೀಸ್

ಅಂದಾಜು 5 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದ 'ಮಾದೇವ' ಸಿನಿಮಾ ನಿರ್ಮಾಪಕರಿಗೆ 2 ಕೋಟಿ ರೂ. ಶೇರ್ ತಂದುಕೊಟ್ಟಿದೆ ಎನ್ನಲಾಗಿತ್ತು. ಪ್ರೇಕ್ಷಕರಿಂದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮಲ್ಟಿಪ್ಲೆಕ್ಸ್‌ಗಳಲ್ಲಿ ಸರಿಯಾಗಿ ಶೋಗಳನ್ನು ಕೊಡದೇ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಚಿತ್ರತಂಡ ಬೇಸರ ವ್ಯಕ್ತಪಡಿಸಿತ್ತು. ಆದರೂ ಬಹಳ ದಿನಗಳ ಬಳಿಕ 'ಮಾದೇವ'ನಾಗಿ ವಿನೋದ್ ಪ್ರಭಾಕರ್ ಗೆದ್ದು ಬೀಗಿದ್ದು ಸುಳ್ಳಲ್ಲ.

ಮಾದೇವ 'ಓಟಿಟಿ'

ಜೀ ಸಂಸ್ಥೆಗೆ 'ಮಾದೇವ' ಚಿತ್ರದ ಓಟಿಟಿ ಹಾಗೂ ಡಿಜಿಟಲ್ ರೈಟ್ಸ್ ಮಾರಾಟವಾಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಅದು ಸುಳ್ಳಾಗಿದೆ. ಸೆಪ್ಟೆಂಬರ್ 12ರಿಂದ ಸಿನಿ ಜಜಾರ್ ಓಟಿಟಿ ವೇದಿಕೆಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಆರಂಭದಲ್ಲಿ ಹಣ ಪಾವತಿಸಿ ಸಿನಿಮಾ ನೋಡಬೇಕಾಗುತ್ತದೆ. ಬಳಿಕ ಉಚಿತವಾಗಿ ವೀಕ್ಷಿಸಬಹುದು. ಸಾಕಷ್ಟು ಜನ 'ಮಾದೇವ' ಚಿತ್ರವನ್ನು ಓಟಿಟಿಯಲ್ಲಿ ನೋಡಲು ಕಾಯುತ್ತಿದ್ದಾರೆ.

'ಮಾದೇವ' ಸಿನಿಮಾ ಆಗಿದ್ದರು ಪ್ರಮುಖ ಓಟಿಟಿ ಸಂಸ್ಥೆಗಳು ಯಾಕೆ ರೈಟ್ಸ್ ಖರೀದಿಸಲಿಲ್ಲ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಸಣ್ಣ ಪುಟ್ಟ ಸಿನಿಮಾಗಳನ್ನು ಕೂಡ ಪ್ರೈಂ ವೀಡಿಯೋ ಕೊಂಡುಕೊಳ್ಳುತ್ತದೆ. ಆದರೆ 'ಮಾದೇವ' ಸಿನಿಮಾ ಬಗ್ಗೆ ಆಸಕ್ತಿ ತೋರಿದಂತೆ ಇಲ್ಲ. ಸಿನಿ ಬಜಾರ್ ಆಪ್ ಕುರಿತು ಬಹಳಷ್ಟು ಜನರಿಗೆ ಗೊತ್ತಿಲ್ಲ.

More from Filmibeat

English summary
Kannada movie Maadeva Ott Release date confirm
Read more about: vinod prabhakar sonal monteiro
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X