For Quick Alerts
  ALLOW NOTIFICATIONS  
  For Daily Alerts

  ಹುಡುಗಿ ತಂಟೆಗೆ ಬಂದಿದ್ದಕ್ಕೆ ನೇರ ನಾಮಿನೇಟ್ ಮಾಡಿದ ಜಶ್: ಸೋಮಣ್ಣಫುಲ್ ರಾಂಗ್!

  By ಎಸ್ ಸುಮಂತ್
  |

  ಬಿಗ್ ಬಾಸ್ ಆರಂಭವಾದ ಪ್ರತಿ ಸೀಸನ್‌ನಲ್ಲಿಯೂ ಜೋಡಿಗಳಾಗುವುದು. ಆ ಜೋಡಿಗಳ ಬಗ್ಗೆ ಗಾಸಿಪ್ ಕ್ರಿಯೇಟ್ ಆಗುವುದು ಸಾಮಾನ್ಯ. ಮನೆಯ ಒಳಗೂ ಕೂಡ ಜೋಡಿಗಳ ಬಗ್ಗೆ‌ ಒಂದಷ್ಟು ಮಾತುಕತೆಗಳ ಚರ್ಚೆ ಆರಂಭವಾಗುತ್ತದೆ. ಈ ಬಾರಿಯ ಓಟಿಟಿ ಸೀಸನ್‌ನಲ್ಲಿಯೂ ಎರಡು ಜೋಡಿಗಳ ಸದ್ದು ಬಹಳ ಜೋರಾಗಿದೆ. ಒಂದು ನಂದಿನಿ ಹಾಗೂ ಜಶ್ವಂತ್ ಮತ್ತೊಂದು ರೂಪೇಶ್ ಹಾಗೂ ಸಾನ್ಯಾ.

  ಈ ಮಧ್ಯೆ ಎರಡು ಜೋಡಿಗಳಿಗೂ ದುಶ್ಮನ್ ಆಗಿರುವುದು ಮಾತ್ರ ಸೋಮಣ್ಣ ಮಾಚಿಮಾಡ. ಸಾನ್ಯಾ, ರೂಪೇಶ್ ಈಗಾಗಲೇ ಸೋಮಣ್ಣ ಮಾಚಿಮಾಡಗೆ ಸ್ಪಷ್ಟನೆ ಕೊಡಲು ಯತ್ನಿಸಿದ್ದಾರೆ. ಆದರೆ ಜಶ್ವಂತ್ ಮಾತ್ರ ನನ್ನ ಹುಡುಗಿ ಬಗ್ಗೆ ಹೆಚ್ಚು ಮಾತಾಡಿದರು ಎಂಬ ಕಾರಣವಾಗಿ ನೇರವಾಗಿ ನಾಮಿನೇಷನ್ ಮಾಡಿದ್ದಾರೆ. ಇದು ಸೋಮಣ್ಣನ ಅತಿಯಾದ ಕೋಪಕ್ಕೆ ಕಾರಣವಾಗಿದೆ.

  Bigg Boss Kannada OTT: ಗಾಯಗೊಂಡ ಅರ್ಜುನ್ ರಮೇಶ್ ಬಿಗ್ ಬಾಸ್ ಮನೆಯಿಂದ ಔಟ್!Bigg Boss Kannada OTT: ಗಾಯಗೊಂಡ ಅರ್ಜುನ್ ರಮೇಶ್ ಬಿಗ್ ಬಾಸ್ ಮನೆಯಿಂದ ಔಟ್!

  ಜಶ್ವಂತ್ ಕೊಟ್ಟ ಕಾರಣ ನಂದಿನಿ

  ಜಶ್ವಂತ್ ಕೊಟ್ಟ ಕಾರಣ ನಂದಿನಿ

  ಸೋಮಣ್ಣ ಅಂತಾನೆ ಅಲ್ಲ ಮನೆಯಲ್ಲಿರುವ ಎಲ್ಲರ ಅಭಿಪ್ರಾಯ ಅಂದು ಒಂದೇ ಆಗಿತ್ತು. ಜಶ್ವಂತ್ ಯಾವಾಗಲೂ ನಂದಿನಿಯ ಜೊತೆಗೆ ಓಡಾಡುತ್ತಾನೆ. ನಂದಿನಿ ಬಳಿಯೇ ಸಲಹೆಗಳನ್ನು ಕೇಳುತ್ತಾನೆ. ಹೀಗಾಗಿ ನಂದಿನಿಯಿಂದ ದೂರ ಇದ್ದರೆ ಎಲ್ಲರ ಜೊತೆಗೂ ಫ್ರೆಂಡ್‌ಶಿಪ್ ಬೆಳೆಯಬಹುದು ಎಂದು ಬಯಸಿಯೇ ಕ್ಯಾಪ್ಟನ್ ಮಾಡಿದರು. ಕ್ಯಾಪ್ಟನ್ ಆದ ಜಶ್ವಂತ್‌ಗೆ ಬಿಗ್ ಬಾಸ್ ನೇರ ನಾಮಿನೇಟ್ ಮಾಡುವ ಅವಕಾಶ ನೀಡಿದ್ದರು. ಕಾರಣದ ಜೊತೆಗೆ ನಾಮಿಮೇಷನ್ ಮಾಡಬೇಕಿತ್ತು. ಸೋಮಣ್ಣನನ್ನು ನಾಮಿನೇಶನ್ ಮಾಡಿದ ಜಶ್ವಂತ್, ನನ್ನ ಮತ್ತು ನಂದಿನಿ ಬಗ್ಗೆ ಯಾವಾಗಲೂ ಮಾತಾಡುತ್ತಾರೆ ಅದಕ್ಕೆ ನಾಮಿನೇಷನ್ ಮಾಡುತ್ತೇನೆ ಎಂದರು.

  ಉದಯ್ ಹಿಂದಿನಿಂದ ತಬ್ಬಿಕೊಂದು ಮುತ್ತು ಕೊಡ್ತಾನೆ: ಬಿಗ್‌ಬಾಸ್ ಮನೆಯ ಹೆಣ್ಮಕ್ಳ ದೂರುಉದಯ್ ಹಿಂದಿನಿಂದ ತಬ್ಬಿಕೊಂದು ಮುತ್ತು ಕೊಡ್ತಾನೆ: ಬಿಗ್‌ಬಾಸ್ ಮನೆಯ ಹೆಣ್ಮಕ್ಳ ದೂರು

  ನಾಮಿನೇಷನ್ ಆಗಿದ್ದಕ್ಕೆ ಕೋಪ

  ನಾಮಿನೇಷನ್ ಆಗಿದ್ದಕ್ಕೆ ಕೋಪ

  ಜಶ್ವಂತ್ ನೇರ ನಾಮಿನೇಷನ್ ಮಾಡಿದ್ದಕ್ಕೆ ಸೋಮಣ್ಣ ತುಂಬಾನೇ ಕೋಪ ಮಾಡಿಕೊಂಡಿದ್ದರು. ಅದು ಎಷ್ಟರ ಮಟ್ಟಿಗೆ ಎಂದರೆ ಕುಂತಲ್ಲಿ ನಿಂತಲ್ಲಿ ಆ ಕೋಪವನ್ನು ಹೊರಗೆ ಹಾಕುತ್ತಿದ್ದರು. ಅಷ್ಟೇ ಅಲ್ಲ ಅವರ ಅಪ್ಪ ಅಮ್ಮನನ್ನು ಎಳೆದು ತಂದಿದ್ದಾರೆ. ಅದೇನು ಕಲಿಸಿಕೊಟ್ಟಿದ್ದಾರೋ ಮನೆಯಲ್ಲಿ ಅಂತ ಕೋಪವನ್ನು ಹೊರ ಹಾಕಿದ್ದಾರೆ.

  ಸೋಮಣ್ಣನ ಕೋಪಕ್ಕೆ ತುಪ್ಪ ಸುರಿದ ಇಬ್ಬರು

  ಸೋಮಣ್ಣನ ಕೋಪಕ್ಕೆ ತುಪ್ಪ ಸುರಿದ ಇಬ್ಬರು

  ಸೋಮಣ್ಣನಿಗೆ ಕೆಂಡದಂತ ಕೋಪ ಜಶ್ವಂತ್ ಮೇಲೆ ಬಂದಿದೆ. ನಾಮಿನೇಷನ್ ಎಲ್ಲಾ ಮುಗಿದ ಮೇಲೆ ಸೋಮಣ್ಣ, ಉದಯ್, ಆರ್ಯವರ್ಧನ್ ಕುಳಿತು ಮಾತನಾಡುತ್ತಿದ್ದರು. ಒಬ್ಬ ಸ್ಪೋರ್ಟ್ಸ್ ಪರ್ಸನ್ ಗೆ ಇರುವ ಕ್ವಾಲಿಟಿನಾ? ಬೆಸ್ಟ್ ಫಿಟ್ನೆಸ್ ಇರಬಹುದು, ಬೆಸ್ಟ್ ಡ್ಯಾನ್ಸರ್ ಇರಬಹುದು ಎಂದಾಗ ಆರ್ಯವರ್ಧನ್ ನಡುವೆ ಸಪೋರ್ಟ್ ಮಾಡುತ್ತಾ ಏನ್ ಫಿಟ್ನೆಸ್ ಇದೆ ಅವ್ನಿಗೆ ನಾವ್ ನೋಡಿಲ್ವಾ ಅವನನ್ನು ಎಂದು ತುಪ್ಪ ಸುರಿದಿದ್ದಾರೆ. ಮುಂದುವರೆದು ಮಾತನಾಡಿದ ಸೋಮಣ್ಣ, ಜಶು ತೆಗೆದುಕೊಂಡ ಹೆಸರುಗಳಲ್ಲಿ ಒಂದು ಸರಿಯಾದ ಕಾರಣವೇ ಇರಲಿಲಲ್ಲ. ಸಣ್ಣ ಮಕ್ಕಳ ಕೈನಲ್ಲೆಲ್ಲಾ ದೇಶ ಕೊಟ್ಟರೆ ಹೀಗೆ ಆಗೋದು ಎಂದು ಕೋಪ ಹೊರ ಹಾಕಿದ್ದಾರೆ.

  ನಾಮಿನೇಷನ್ ಮಾಡಿದ್ದಕ್ಕೆ ಕೋಪ

  ನಾಮಿನೇಷನ್ ಮಾಡಿದ್ದಕ್ಕೆ ಕೋಪ

  ಸೋಮಣ್ಣನ ಕೋಪ ಇಷ್ಟಕ್ಕೆ ಮುಗಿಯಲೇ ಇಲ್ಲ. ನಿಂತಲ್ಲಿ, ಕುಂತಲ್ಲಿ, ಹೋದಲ್ಲಿ ಬಂದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದರು. ಬಿಗ್ ಬಾಸ್ ಗೇಮ್ ಒಂದನ್ನು ನೀಡಿದ್ದರು. ಅಲ್ಲಿಯೂ ಸುಮ್ಮನೆ ಕೂರದ ಸೋಮಣ್ಣ, ಕ್ಯಾಪ್ಟನ್ ನನ್ನು ಕರೆದು, ಬಿಗ್ ಬಾಸ್ ನೀಡಿದ ರೂಲ್ಸ್ ಬ್ರೇಕ್ ಮಾಡಿ ನಾನು ಎಲ್ಲಿಗೂ ಹೋಗಲ್ಲ. ಅಷ್ಟು ಫೂಲ್ ನಾನಲ್ಲ. ಅನೌನ್ಸ್ ಆದಮೇಲೂ ನಾನು ಸ್ಮೋಕಿಂಗ್ ಝೋನ್‌ಗೆ ಹೋಗುತ್ತೀನಿ ಅಂದರಲ್ಲ ನೀವೂ ನೋಡಿದ್ರಾ? ಎಂದು ಸೋಮಣ್ಣ ಪ್ರಶ್ನೆ ಮಾಡಿದ್ದರು. ಹೋಗಿದ್ದೀರಿ, ನಾನು ಅಲ್ಲಿ ಕೂತುಕೊಂಡು ನೋಡಿದ್ದೀನಿ ಎಂದಾಗ ಸೋಮಣ್ಣ ಸ್ವಲ್ಪ ಜೋರು ಧ್ವನಿಯಲ್ಲಿಯೇ ಉತ್ತರಿಸಿದ್ದಾರೆ. ನಾನು ಯಾವತ್ತಿಗೂ ರೂಲ್ಸ್ ಬ್ರೇಕ್ ಮಾಡಲ್ಲ ಎಂದಿದ್ದಕ್ಕೆ ಜಶ್ವಂತ್ ಮುಗ್ಧತೆಯಿಂದಾನೆ ಓಕೆ ಫೈನ್ ಎಂದು ಸುಮ್ಮನಾಗಿದ್ದಾರೆ.

  English summary
  Voot Select Reality Show Bigg Boss August 22nd Episode Written Update. Here is the details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X