ನಟ, ನಿರ್ದೇಶಕ, ಬರಹಗಾರರಾಗಬೇಕು ಎಂದುಕೊಂಡವರಿಗೆ ಅವಕಾಶ ಕೊಡ್ತಾರಂತೆ ಈ ನಿರ್ದೇಶಕ

ಸಿನಿಮಾ ನಿರ್ದೇಶಕ ಆಗಬೇಕು, ನಟರಾಗಬೇಕು, ಬರಹಗಾರರಾಗಬೇಕು, ಸಿನಿಮಾಗಳ ಬೇರೆ-ಬೇರೆ ವಿಭಾಗಗಳಲ್ಲಿ ಕೆಲಸ ಮಾಡಬೇಕು ಎಂದು ಸಾವಿರಾರು ಮಂದಿ ಗಾಂಧಿ ನಗರಕ್ಕೆ ಬರುತ್ತಾರೆ.

ಹೀಗೆ ಸಿನಿಮಾ ಕನಸು ಹೊತ್ತು ಗಾಂಧಿ ನಗರಕ್ಕೆ ಬರುವ ಎಷ್ಟೋ ಮಂದಿಗೆ ಇಲ್ಲಿಗೆ ಬಂದು ಯಾರನ್ನು ಸಂಪರ್ಕ ಮಾಡಬೇಕು, ಹೇಗೆ ಅಪ್ರೋಚ್ ಮಾಡಬೇಕು, ನಿರ್ದೇಶಕರುಗಳ, ನಿರ್ಮಾಪಕರುಗಳ ಕಚೇರಿಗಳು ಎಲ್ಲಿವೆ ಹೀಗೆ ಎಷ್ಟೋ ವಿಷಯಗಳು ಗೊತ್ತೇ ಇರುವುದಿಲ್ಲ.

ಮೊದಲಿಗಂತೂ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಲು ವರ್ಷಾನುಗಟ್ಟಲೆ ಕಾದವರೂ ಇದ್ದಾರೆ. ಆದರೆ ಇಲ್ಲೊಬ್ಬ ಕನ್ನಡದ ಯುವ ಮತ್ತು ಖ್ಯಾತ ನಿರ್ದೇಶಕರೊಬ್ಬರು. ಹೀಗೆ ಸಿನಿಮಾ ರಂಗಕ್ಕೆ ಬರಬೇಕೆಂದುಕೊಳ್ಳುವ ಹೊಸಬರಿಗೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಯಾರವರು ಮುಂದೆ ಓದಿ...

ಪವನ್ ಒಡೆಯರ್ ಅವಕಾಶ ಕೊಡುವುದಾಗಿ ಹೇಳಿದ್ದಾರೆ

ಪವನ್ ಒಡೆಯರ್ ಅವಕಾಶ ಕೊಡುವುದಾಗಿ ಹೇಳಿದ್ದಾರೆ

ಗೂಗ್ಲಿ, ನಟಸಾರ್ವಭೌಮ, ರಣವಿಕ್ರಮ, ಗೋವಿಂದಾಯ ನಮಃ ಹೀಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಖ್ಯಾತ, ಭರವಸೆಯ ನಿರ್ದೇಶಕ ಪವನ್ ಒಡೆಯರ್ ಅವರು ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡುವ ಆಸೆಹೊಂದಿರುವ ಹೊಸಬರಿಗೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ.

ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಘೋಷಿಸಿದ ನಿರ್ದೇಶಕ

ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಘೋಷಿಸಿದ ನಿರ್ದೇಶಕ

ನಿನ್ನೆ ಕನ್ನಡ ಫಿಲ್ಮಿಬೀಟ್ ಫೇಸ್‌ಬುಕ್ ಪೇಜ್‌ನಲ್ಲಿ ಲೈವ್ ಬಂದಿದ್ದ ಅವರು, ಸಿನಿಮಾ ನಿರ್ದೇಶಕರಾಗಬೇಕು ಎಂದುಕೊಂಡವರು, ನಟ, ಸಿನಿಮಾ ಬರಹಗಾರರಾಗಬೇಕು ಎಂದು ಕೊಂಡವರು, ಒಟ್ಟಾರೆ ಸಿನಿಮಾದ ಬೇರೆ-ಬೇರೆ ವಿಭಾಗಗಳಲ್ಲಿ ದುಡಿಯಬೇಕು ಎಂದುಕೊಂಡವರು ನಿಮ್ಮ ಮಾಹಿತಿಯನ್ನು ನನಗೆ ಇ-ಮೇಲ್ ಮಾಡಿ ಎಂದು ಹೇಳಿದ್ದಾರೆ.

ಪವನ್ ಒಡೆಯರ್ ಗೆ ಮೇಲ್ ಮಾಡಿ

ಪವನ್ ಒಡೆಯರ್ ಗೆ ಮೇಲ್ ಮಾಡಿ

[email protected] ಗೆ ಮಾಹಿತಿ, ನಟರಾಗಬೇಕೆಂದವರು, ಚಿತ್ರಗಳು, ಬರಹಗಾರರಾಗಬೇಕು ಎಂದುಕೊಂಡವರು ತಮ್ಮ ಬರಹಗಳನ್ನು ಮೇಲ್ ಮಾಡಿ, ನಾನು ನಮ್ಮ ತಂಡ ಅದನ್ನು ಪರಿಶೀಲಿಸಿ ಆಸಕ್ತಿಕರ ಎನಿಸಿದವರನ್ನು ಪುನಃ ಸಂಪರ್ಕಿಸುತ್ತೇವೆ ಎಂದು ಪವನ್ ಹೇಳಿದ್ದಾರೆ.

ಯೋಗರಾಜ್‌ ಭಟ್ ಬಳಿ ಅಸಿಸ್ಟೆಂಟ್ ಆಗಿದ್ದರು ಪವನ್

ಯೋಗರಾಜ್‌ ಭಟ್ ಬಳಿ ಅಸಿಸ್ಟೆಂಟ್ ಆಗಿದ್ದರು ಪವನ್

ಪವನ್ ಒಡೆಯರ್ ಅವರು ಯೋಗರಾಜ್ ಭಟ್ ಅವರ ಬಳಿ ಸಹ ನಿರ್ದೇಶಕರಾಗಿ ದುಡಿದಿದ್ದರು. ನಂತರ ಗೋವಿಂದಾಯ ನಮಃ ಸಿನಿಮಾ ಅವರ ಮೊದಲ ಸಿನಿಮಾ ಆಯಿತು. ಅದು ಹಿಟ್ ಸಹ ಆಯಿತು. ನಂತರ ಬಂದ ಗೂಗ್ಲಿ ಅವರಿಗೆ ಇನ್ನೂ ದೊಡ್ಡ ಹೆಸರು ಗಳಿಸಿಕೊಟ್ಟಿತು. ಈಗ ರೆಮೊ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

More from Filmibeat

English summary
Director Pawan Wadeyar announce he will give chance to new comers in his movie. He said who want to work in movies send profiles to him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X