Don't Miss!
- Automobiles
ನಮ್ಮ ಬೆಂಗಳೂರಿನಲ್ಲಿ ಬಳಕೆ ಮಾಡಿದ ಕಾರುಗಳ ಮಾರಾಟ ಮಳಿಗೆಗೆ ಚಾಲನೆ ನೀಡಿದ ಟೊಯೊಟಾ
- News
Biography: 'ಬಾಹುಬಲಿ'ಗೆ ಶಕ್ತಿ ತುಂಬಿದ ಕಥೆಗಾರನಿಗೆ ತೆರೆಯಿತು ರಾಜ್ಯಸಭೆ ಬಾಗಿಲು!
- Lifestyle
ಮನೆಯಲ್ಲಿ ಮಾಡುವ ಇಂಥಾ ಸಣ್ಣಪುಟ್ಟ ತಪ್ಪುಗಳಿಂದಲೇ ಬೆಂಕಿ ಅವಘಡಗಳು ಸಂಭವಿಸೋದು!
- Sports
ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಈ 2 ತಂಡಗಳು ಇಷ್ಟು ಪಂದ್ಯ ಸೋಲಲೇಬೇಕು!
- Education
KSSIDC Recruitment 2022 : 7 ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ಸಹಾಯಕ ಅಭಿಯಂತರರು ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒಪ್ಪೋ ರೆನೋ 8 ಫೋನ್ ಎಂಟ್ರಿಗೆ ದಿನಾಂಕ ನಿಗದಿ!..ಸ್ಟೋರೇಜ್ ಆಯ್ಕೆ ಎಷ್ಟು?
- Finance
ಜಿಯೋ ಗ್ರಾಹಕರಿಗೆ ಉಚಿತ ನೆಟ್ಫ್ಲಿಕ್ಸ್ ಆಫರ್: ಇಲ್ಲಿದೆ ವಿವರ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
'RRR' ಸಲಿಂಗ ಕಾಮಿಗಳ ಪ್ರೇಮಕತೆಯುಳ್ಳ ಸಿನಿಮಾ!
ರಾಜಮೌಳಿ ನಿರ್ದೇಶಿಸಿ ಜೂ ಎನ್‌ಟಿಆರ್-ರಾಮ್ ಚರಣ್ ತೇಜ ಅಂಥಹಾ ದೊಡ್ಡ ಸ್ಟಾರ್ ನಟರು ನಟಿಸಿರುವ 'RRR' ಸಿನಿಮಾ ಬಿಡುಗಡೆ ಆಗಿ ಬಾಕ್ಸ್‌ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳು ಬರೆದಿದೆ.
ಚಿತ್ರಮಂದಿರಗಳಲ್ಲಿ ದಾಖಲೆ ಬರೆದ ಬಳಿಕ ಒಟಿಟಿಯಲ್ಲಿ ಬಿಡುಗಡೆ ಆದ 'RRR' ಸಿನಿಮಾ ಅಲ್ಲಿಯೂ ಸೂಪರ್ ಹಿಟ್ ಎನಿಸಿಕೊಂಡಿದೆ. ಪ್ರಾದೇಶಿಕ ಭಾಷೆಗಳಲ್ಲಿ ಜೀ5 ನಲ್ಲಿ ಬಿಡುಗಡೆ ಆಗಿರುವ 'RRR' ಸಿನಿಮಾ ಹಿಂದಿ ಭಾಷೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ.
ಕರಣ್
ಬರ್ತ್‌ಡೇ
ಪಾರ್ಟಿಗೆ
ರಾಜಮೌಳಿ,
ಪ್ರಭಾಸ್,
ರಾಣಾ,
ಯಶ್
ಯಾಕೆ
ಹೋಗಿಲ್ಲ?
ಸ್ನೇಹಿತರ ಸ್ನೇಹ, ತ್ಯಾಗ, ಸ್ವಾತಂತ್ರ್ಯದ ತುಡಿತ, ಹೋರಾಟ, ದೇಶಭಕ್ತಿ ಅಡಕವಾಗಿರುವ 'RRR' ಸಿನಿಮಾವನ್ನು ಒಟಿಟಿಯ ಮೂಲಕ ವಿದೇಶಗಳಲ್ಲೂ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಭಾರತದ ಸಂಸ್ಕೃತಿಯ, ಇತಿಹಾಸದ ಪರಿಚಯವಿಲ್ಲದ ಅನೇಕ ವಿದೇಶಿಗರು, 'RRR' ಸಿನಿಮಾವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ.

ಸಲಿಂಗ ಕಾಮಿಗಳ ಪ್ರೇಮ ಕತೆ
ಕೆಲವು ಪಾಶ್ಚಿಮಾತ್ಯರು 'RRR' ಸಿನಿಮಾವನ್ನು ಸಲಿಂಗ ಕಾಮಿಗಳ ಪ್ರೇಮ ಕತೆ ಎಂದು ಭಾವಿಸಿಕೊಂಡಿದ್ದಾರೆ. ಈ ಬಗ್ಗೆ ಹಲವು ವಿದೇಶಿಗರು ಸಾಮಾಜಿಕ ಜಾಲತಾಣದಲ್ಲಿ ಗಂಭೀರವಾಗಿ ಅಭಿಪ್ರಾಯ ಸಹ ಹಂಚಿಕೊಂಡಿದ್ದಾರೆ. ಹಲವರು ನಿಜಕ್ಕೂ 'RRR' ಸಲಿಂಗಿಗಳ ಪ್ರೇಮಕತೆ ಎಂದೇ ಭಾವಿಸಿದ್ದಾರೆ. ಇನ್ನು ಕೆಲವರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಸಿನಿಮಾ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದಾರೆ
ಆದರೆ ಪಾಶ್ಚಿಮಾತ್ಯರು 'RRR' ಸಿನಿಮಾವನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದ್ದಾರೆ ಎಂದು ಪ್ರತಿಕ್ರಿಯಿಸಿರುವ ಕೆಲವು ಭಾರತೀಯ ಸಿನಿಮಾ ಪ್ರೇಮಿಗಳು. ಗೇ ಪ್ರೇಮಕ್ಕೂ, 'ಬ್ರೋಮ್ಯಾನ್ಸ್' (ಸಹೋದರ ಪ್ರೇಮ)ಕ್ಕೂ ತೆಳುವಾದ ಗೆರೆ ಇದೆ, ಅದನ್ನು ಅರ್ಥ ಮಾಡಿಕೊಳ್ಳಿ ಎಂದು ಬುದ್ಧಿ ಹೇಳಿದ್ದಾರೆ. ಅಲ್ಲದೆ, ಎಲ್ಲ ಸಂಬಂಧವನ್ನೂ ಲೈಂಗಿಕತೆಯ ಮೂಲಕವೇ ನೋಡುವ ಪಾಶ್ಚಿಮಾತ್ಯರಿಗೆ ಸ್ನೇಹ, ಸಹೋದರತೆಯ ಸಂಬಂಧಗಳು ಅರ್ಥವಾಗುವುದಿಲ್ಲ ಎಂದು ಸಹ ಕೆಲವರು ಪ್ರತಿಕ್ರಿಯಿಸಿದ್ದಾರೆ.

ಕೋಮರಂ ಭೀಮ್-ಅಲ್ಲೂರಿ ಸೀತಾರಾಮ ರಾಜು ಕತೆ
'RRR' ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಅವರ ಕುರಿತ ಕಲ್ಪಿತ ಕತೆಯಾಗಿದೆ. ಒಂದೊಮ್ಮೆ ಈ ಇಬ್ಬರು ಧೀಮಂತ ಹೋರಾಟಗಾರರು ಇತಿಹಾಸದಲ್ಲಿ ಭೇಟಿ ಆಗಿದ್ದರೆ ಹೇಗಿದ್ದಿರಬಹುದು ಎಂಬ ಕತೆಯನ್ನು 'RRR' ನಲ್ಲಿ ಹೇಳಲಾಗಿದೆ. ಮಾರ್ಚ್ 24 ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಒಟಿಟಿಯಲ್ಲಿಯೂ ದೊಡ್ಡ ಸಂಖ್ಯೆಯ ವೀಕ್ಷಕರು ಸಿನಿಮಾವನ್ನು ನೋಡಿದ್ದಾರೆ.

ಇಬ್ಬರು ಆತ್ಮೀಯ ಸ್ನೇಹಿತರ ಕತೆ
ರಾಜಮೌಳಿ ನಿರ್ದೇಶನದ 'RRR' ಸಿನಿಮಾದಲ್ಲಿ ರಾಮ್ ಚರಣ್ ತೇಜ ಹಾಗೂ ಜೂ ಎನ್‌ಟಿಆರ್ ನಟಿಸಿದ್ದಾರೆ. ಇವರಿಬ್ಬರ ನಡುವಿನ ಸ್ನೇಹ ಬಂಧ ಸಿನಿಮಾದ ಹೈಲೆಟ್. ಪರಸ್ಪರ ಆತ್ಮೀಯ ಸ್ನೇಹಿತರಾದ ಇವರು ತಮ್ಮ-ತಮ್ಮ ಕರ್ತವ್ಯ ನಿಭಾಯಿಸುವ ಕಾರಣಕ್ಕೆ ಪರಸ್ಪರ ವಿರೋಧಿಗಳಾಗುತ್ತಾರೆ. ಕೊನೆಯಲ್ಲಿ ಸತ್ಯ ತಿಳಿದುಬಂದು ಮತ್ತೆ ಒಂದಾಗುತ್ತಾರೆ. ಬ್ರಿಟೀಷ್ ಅಧಿಕಾರಿಯೊಬ್ಬನನ್ನು ಕೊಲ್ಲುತ್ತಾರೆ. ಸಿನಿಮಾದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಶಿರಿನ್, ಸಮುದ್ರಕಿಣಿ, ಮಕರಂದ್ ದೇಶಪಾಂಡೆ ಇನ್ನೂ ಹಲವರು ನಟಿಸಿದ್ದಾರೆ.