twitter
    For Quick Alerts
    ALLOW NOTIFICATIONS  
    For Daily Alerts

    ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಏನೆಲ್ಲಾ ಬದಲಾವಣೆ ಆಗಬೇಕು..?

    |

    'ಬಿಗ್‌ಬಾಸ್‌' ಈ ಪದ ಕಿವಿ ಮೇಲೆ ಬೀಳ್ತಿದಂತೆ ಎಲ್ಲರೂ ಅಲರ್ಟ್ ಆಗುತ್ತಾರೆ. ಈ ಶೋ
    ಹುಟ್ಟಾಕ್ಕಿರೋ ಕ್ರೇಜೇ ಅಂತಾದ್ದು. ಕೆಲವರು ಕಾದು ಕೂತು ಪ್ರತಿದಿನ ಈ ಶೋ ನೋಡಿದ್ರೆ,
    ಮತ್ತೆ ಕೆಲವರು ಇದೆಂಥ ಶೋ ಅಂತ ಕೊಂಕು ಆಡುತ್ತಲೇ ದಿನ ಸಂಜೆಯಾದರೆ ಕಾರ್ಯಕ್ರಮಕ್ಕೆ
    ಅಂಟಿ ಕೂರುತ್ತಾರೆ. ಬಿಗ್‌ಬಾಸ್ ಶೋಗೆ ವೀಕ್ಷಕರ ರಾಗ ದ್ವೇಷಗಳೇ ಬಂಡವಾಳ. ಕಿರುತೆರೆಯ
    ಅತಿದೊಡ್ಡ ಹಾಗೂ ಜನಪ್ರಿಯ ಶೋ ಅನ್ನುವ ಪಟ್ಟ ಬಿಗ್‌ಬಾಸ್‌ ಶೋಗಿದೆ. ಹಿಂದಿಯಲ್ಲಿ 15
    ಸೀಸನ್‌ಗಳು ಕಂಪ್ಲೀಟ್ ಆಗಿದ್ರೆ, ಕನ್ನಡದಲ್ಲಿ 8 ಸೀಸನ್‌ ಜೊತೆಗೆ ಒಂದು ಮಿನಿ ಸೀಸನ್
    ಬಂದು ವೀಕ್ಷಕರನ್ನು ರಂಜಿಸಿದೆ.

    ಬಿಗ್‌ಬಾಸ್ ಕಾನ್ಸೆಪ್ಟ್ ಬಹಳ ವಿಚಿತ್ರ. ಒಂದು ಮನೆಯಲ್ಲಿ 15 ಜನರ ಥರಾವರಿ ಭಾವನೆಗಳಿವೆ. ಕ್ಷಣ ಕ್ಷಣಕ್ಕೂ ಅದನ್ನು ಸೆರೆಹಿಡಿಯಲು ಮನೆಯ ತುಂಬಾ ಕ್ಯಾಮರಾಗಳು, ಪ್ರಪಂಚದ ಆಗುಹೋಗುಗಳನ್ನೆಲ್ಲಾ ಮರೆತು, 100 ದಿನಗಳ ಕಾಲ ಅಲ್ಲೇ ಜೀವನ. ವಾರಕ್ಕೊಬ್ಬರಂತೆ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬರೋದು. ಎಲ್ಲರೊಂದಿಗೂ ಏಗುತ್ತಾ, ಟಾಸ್ಕ್‌ಗಳಲ್ಲಿ ಚೆನ್ನಾಗಿ ಆಡುತ್ತಾ, ಎಂಟರ್‌ಟೈನ್ ಮಾಡ್ತಾ ಕೊನೆಗೆ ಯಾರು ಉಳಿದುಕೊಳ್ಳುತ್ತಾರೋ ಅವರೇ ವಿಜೇತರು. ಇದು ಶೋ ನಿಮಯ.

    ಕೆಲವೊಮ್ಮೆ ಇಂತಹ ಶೋಗಳು ಬೇಕಾ, ಬೇಡ್ವಾ ಸಮಾಜಕ್ಕೆ ಇದರಿಂದ ಏನು ಪ್ರಯೋಜನ, ಮನೆ ಮಂದಿ
    ಎಲ್ಲರೂ ಕೂತು ಈ ಶೋ ನೋಡಬಹುದಾ? ಅನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಆದರೆ
    ಅದನ್ನೆಲ್ಲಾ ಮೀರಿ ಪ್ರತಿ ವರ್ಷ ಶೋ ಪ್ರಸಾರವಾಗುತ್ತಲೇ ಇದೆ. ವೀಕ್ಷಕರು ನೋಡುತ್ತಾ
    ಬರುತ್ತಿದ್ದಾರೆ. ಅದರೆ ಬರಬರುತ್ತಾ ಯಾಕೋ ಏಕತಾನತೆಯ ನಡುವೆ ಶೋ ಪ್ರೇಕ್ಷಕರನ್ನು
    ಕಳೆದುಕೊಳ್ಳುತ್ತಿದೆ. ಆದರೆ ಇದನ್ನೂ ಮೀರಿಸುವಂತಹ ಶೋ ಮಾಡೋಕೆ ಸಾಧ್ಯವಾಗದೇ ಇದನ್ನೇ
    ಮತ್ತೆ ಮತ್ತೆ ಉಜ್ಜುವ ಪ್ರಯತ್ನ ನಡೆಯುತ್ತಿದೆ. ಒಂದಷ್ಟು ಅಭಿಮಾನಿಗಳು ಈ ಶೋಗೆ
    ಹುಟ್ಟಿಕೊಂಡಿರೋದ್ರಿಂದ ಮಿನಿಮಮ್ ಗ್ಯಾರೆಂಟಿ ಅಂತೂ ಇದೆ. ಆದರೆ ಒಂದಷ್ಟು ಬದಲಾವಣೆಯಾಗದ
    ಹೊರತು ಬಿಗ್‌ಬಾಸ್ ಶೋ ಫ್ಲಾಪ್ ಶೋ ಆಗುವ ಆತಂಕವಿದೆ.

     ಮತ್ತೆ ಮತ್ತೆ ಅದೇ ಟಾಸ್ಕ್ ಬೇಡ

    ಮತ್ತೆ ಮತ್ತೆ ಅದೇ ಟಾಸ್ಕ್ ಬೇಡ

    ಬಿಗ್‌ಬಾಸ್‌ ಸೀಸನ್‌ಗಳನ್ನು ಫಾಲೋ ಮಾಡುತ್ತಿರುವವರಿಗೆ ಅಲ್ಲಿ ಟಾಸ್ಕ್‌ಗಳು ಪುನರಾವರ್ತನೆ ಆಗ್ತಿರೋದು ಗೊತ್ತಾಗುತ್ತಿದೆ. ಹೊಸ ಹೊಸ ಟಾಸ್ಕ್‌ಗಳನ್ನು ಕ್ರಿಯೇಟ್ಮಾಡುವಲ್ಲಿ ಆಯೋಜಕರು ಸೋಲುತ್ತಿದ್ದಾರೆ. ಕ್ರಿಯೇಟಿವ್ ಆಗಿ ಹೊಸ ಹೊಸ ಟಾಸ್ಕ್‌ಗಳನ್ನು ಡಿಸೈನ್ ಮಾಡುವ ಪ್ರತಿಭೆಗಳನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕಿದೆ. ಬೇರೆ ಭಾಷೆಯ ಬಿಗ್‌ಬಾಸ್‌ ಶೋನಲ್ಲಿ ಇದ್ದ ಟಾಸ್ಕ್‌ ಅನ್ನು ಅಥವಾ ಈ ಹಿಂದಿನ ಸೀಸನ್‌ನಲ್ಲಿ ಕೊಟ್ಟಿದ್ದ ಟಾಸ್ಕ್‌ ಅನ್ನು ಹೊಸ ರೂಪದಲ್ಲಿ ಸ್ಪರ್ಧಿಗಳಿಗೆ ನೀಡಲಾಗುತ್ತಿದೆ. ಅದಾಗಲೇ ಆ ಟಾಸ್ಕ್ ನೋಡಿದವರಿಗೆ ಮತ್ತೆ ಅದು ಮಜಾ ಕೊಡೋದಿಲ್ಲ. ಆಗ ಸಹಜವಾಗಿಯೇ ರಿಮೋಟ್‌ ಕಡೆ ನೋಡುವಂತಾಗುತ್ತದೆ.

     ಕಸಿವಿಸಿ ಉಂಟು ಮಾಡುವ ಅಫೇರ್‌ಗಳು

    ಕಸಿವಿಸಿ ಉಂಟು ಮಾಡುವ ಅಫೇರ್‌ಗಳು

    ಪ್ರೀತಿ ಪ್ರೇಮದ ವಿಷಯಗಳನ್ನಿಟ್ಟುಕೊಂಡು ಶೋನ ಎಳೆದಾಡುವುದನ್ನು ಮೊದಲು ಬಿಡಬೇಕು. ಯಾಕಂದ್ರೆ, ಬಿಗ್‌ಬಾಸ್ ಮನೆಯಲ್ಲಿ ಪ್ರೇಮಿಗಳಾಗಿ ಇದ್ದವರು, ಹೊರ ಬಂದ ಮೇಲೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಮನೆಯೊಳಗೆ ಅಣ್ಣ ತಂಗಿ ರೀತಿ ಇದ್ದವರು ಶೋ ಮುಗಿದ ಮೇಲೆ ಹಸೆಮಣೆ ಏರಿದ್ದಾರೆ. ಅಫೇರ್ ಹೆಸರಿನಲ್ಲಿ ಕೃತಕವಾಗಿ ಪ್ರಪೋಸ್ ಮಾಡೋದು, ರೊಮ್ಯಾನ್ಸ್ ಮಾಡೋದು ಕೆಲವೊಮ್ಮೆ ಪ್ರೇಕ್ಷಕರಿಗೆ ಕಸಿವಿಸಿ ಉಂಟು ಮಾಡುತ್ತಿದೆ.

     ಹೊಸ ಪ್ರತಿಭೆಗಳ ಕೊರತೆ

    ಹೊಸ ಪ್ರತಿಭೆಗಳ ಕೊರತೆ

    ಸಾಮಾನ್ಯರನ್ನು ಸ್ಟಾರ್‌ಗಳನ್ನಾಗಿ ಮಾಡಿದ ಶೋ ಬಿಗ್‌ಬಾಸ್. ಆದರೆ ಆ ಮ್ಯಾಜಿಕ್ ಪದೇ ಪದೇ ರಿಪೀಟ್ ಆಗುತ್ತಿಲ್ಲ. ಬಿಗ್‌ಬಾಸ್‌ ಮನೆ ಎಷ್ಟೋ ಜನಕ್ಕೆ ಪ್ರತಿಭೆ ಪ್ರದರ್ಶನಕ್ಕೆ ಚಿಮ್ಮು ಹಲಗೆ ಆಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಸಾಧ್ಯವಾಗದೇ ಇರೋದಕ್ಕೆ ಏನು ಕಾರಣ ಅನ್ನೋದನ್ನು ಆಯೋಜಕರು ಅರಿತುಕೊಳ್ಳಬೇಕಿದೆ.

     ಸ್ಪರ್ಧಿಗಳಲ್ಲಿ ಪಕ್ಷಪಾತ ಬೇಡ

    ಸ್ಪರ್ಧಿಗಳಲ್ಲಿ ಪಕ್ಷಪಾತ ಬೇಡ

    ನಿಜವಾಗಿಯೂ ಪ್ರತಿಭೆ ಇದ್ದವರು, ಚೆನ್ನಾಗಿ ಆಟ ಆಡುವವರು, ನಿಜವಾದ ವಿಜೇತರಿಗೆ ಗೆಲುವಿನ ಮಾಲೆ ಸಿಗಬೇಕು. ಆದರೆ ಪಕ್ಷಪಾತ ಮಾಡಿ ಮತ್ಯಾರಿಗೋ ಬಿಗ್‌ಬಾಸ್‌ ಟ್ರೋಫಿ ನೀಡುವುದು ಸರಿಯಲ್ಲ. ಶೋ ನಿಮಯಗಳನ್ನು ಪಾಲಿಸಿ ಆಡಿ ಗೆದ್ದವರು ವಿಜೇತರಾಗಬೇಕು. ಪಕ್ಷಪಾತ ಮಾಡುವುದರಿಂದ ವೀಕ್ಷಕರಿಗೆ ಶೋ ಬಗ್ಗೆ ನಂಬಿಕೆ ಹೊರಟು ಹೋಗುತ್ತದೆ.

    Recommended Video

    ನಿವೇದಿತಾ ಗೌಡ ಇನ್ಮುಂದೆ ಸಿನಿಮಾ ನಾಯಕಿ | Filmibeat Kannada

    English summary
    What Are The Changes We Want To See In Bigg Boss Reality Show, Know More.
    Tuesday, August 2, 2022, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X