ಅರ್ಜೆಂಟ್ ಆಗಿ 25 ಲಕ್ಷ ಬೇಕು ಎಂದು ಬಿಗ್‌ ಬಾಸ್‌ ಮನೆಗೆ ಹೋಗಿದ್ದ ಈ ನಟನಿಗೆ ಕೊನೆಗೆ ಸಿಕ್ಕಿದ್ದೆಷ್ಟು..?

ಒಂದು ಕಾಲದಲ್ಲಿ ತಮ್ಮ ಅಭಿನಯದಿಂದ ಜನ ಮನ ಗೆದ್ದವರು ರಣ್‌ವೀರ್ ಶೋರೆ. ''ಖೋಸ್ಲಾ ಕಾ ಘೋಸ್ಲಾ''.. ''ಭೇಜಾ ಫ್ರೈ''.. "ಹನಿಮೂನ್ ಎಕ್ಸ್‌ಪ್ರೆಸ್''.. ''ಟ್ರಾಫಿಕ್ ಸಿಗ್ನಲ್''.. ಹೀಗೆ ಒಂದಕ್ಕಿಂತೊಂದು ಚೆಂದದ ಚಿತ್ರಗಳ ಮೂಲಕ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾದ ರಣ್ ವೀರ್ ಶೋರೆ ಅವರಿಂದ ಬಾಲಿವುಡ್‌ ಅಷ್ಟೇ ಬೇಗ ಅಂತರವನ್ನೂ ಕಾಪಾಡಿಕೊಳ್ಳಲು ಶುರು ಮಾಡಿತ್ತು.

ಇದರ ನಡುವೆ ಕೊಂಕಣಾ ಸೇನ್ ಶರ್ಮಾ ಅವರ ಜೊತೆ ಮದುವೆ ಆ ನಂತರ ವಿಚ್ಛೇದನ ರಣ್‌ವೀರ್ ಶೋರೆಯನ್ನೂ ಇನ್ನಷ್ಟು ಘಾಸಿಗೊಳಿಸಿತ್ತು. ವ್ಯೆಯಕ್ತಿಕ ಬದುಕಿನಲ್ಲಿ ನೆಮ್ಮದಿಯನ್ನೂ ಹಾಳು ಮಾಡಿಕೊಳ್ಳುವುದರ ಜೊತೆ ಚಿತ್ರರಂಗದಲ್ಲಿ ಅವಕಾಶಗಳಿಂದ ವಂಚಿತರಾದ ರಣ್‌ವೀರ್ ಶೋರೆ, 25 ಲಕ್ಷ ಸಂಪಾದಿಸಬೇಕೆಂಬ ಗುರಿಯೊಂದಿಗೆ ಬಿಗ್ ಬಾಸ್ ಮನೆಗೆ ತೆರಳಿದ್ದರು.

what-did-ranveer-shorey-receive-from-bigg-boss-ott-season-3-and-how-much-did-sana-makbul-win

ಬಿಗ್ ಬಾಸ್ ಮನೆಯಲ್ಲಿ ಕಾಲಿಟ್ಟ ನಂತರ ನನಗೆ ಟ್ರೋಫಿಗಿಂತ ಮೊದಲ ಸ್ಥಾನ ಪಡೆದವರಿಗೆ ಸಿಗುವ 25 ಲಕ್ಷ ಮುಖ್ಯವೆಂದಿದ್ದರು ರಣ್‌ವೀರ್ ಶೋರೆ. ಇಷ್ಟೇ ಅಲ್ಲ ಈ ಬಾರಿಯ ಬಿಗ್ ಬಾಸ್ ಓಟಿಟಿಯಲ್ಲಿ ಗೆಲುವಿನ ಬಾವುಟ ಹಾರಿಸುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು. ಆದರೆ, ದುರಾದೃಷ್ಟವಶಾತ್.. ರಣ್‌ವೀರ್ ಶೋರೆ ತಮ್ಮ ಈ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಟ್ರೋಫಿಯನ್ನೂ ಪಡೆಯದೇ, 25 ಲಕ್ಷ ಹಣದ ಗುರಿಯನ್ನೂ ತಲುಪದೇ ಮನೆಗೆ ಮರಳಿದ್ದಾರೆ.

ಹೌದು, ಬಿಗ್ ಬಾಸ್‌ ಮನೆಯಲ್ಲಿ ಈ ಬಾರಿ ಮಾನಿಪ್ಯುಲೇಟಿವ್, ಅಹಂಕಾರಿ, ಸ್ವಾರ್ಥಿ ಎಂದೆಲ್ಲ ಕರೆಸಿಕೊಂಡ ಸನಾ ಮಕ್ಭೂಲ್, ಇಡೀ ಸೀಸನ್‌ನಲ್ಲಿ ಪ್ರತಿ ವಾರ ನಾಮಿನೇಟ್ ಆಗಿದ್ದರು. 'ಇಡೀ ಮನೆಯ ವಿಲನ್‌' ಎಂದೇ ಸನಾ ಮಕ್ಬೂಲ್‌ ಬ್ರ್ಯಾಂಡ್ ಆಗಿದ್ದರು.ಆದರೂ ಈ ಸಲದ ಬಿಗ್ ಬಾಸ್ ಟ್ರೋಫಿಯನ್ನೂ ಸನಾ ಗೆದ್ದಿದ್ದಾರೆ. ರಣ್‌ವೀರ್ ಶೋರೆ ಅವರನ್ನು ಹಿಂದಿಕ್ಕಿ ಟ್ರೋಫಿ ಜೊತೆ 25 ಲಕ್ಷ ಹಣವನ್ನೂ ಗಳಿಸಿದ್ದಾರೆ.

what-did-ranveer-shorey-receive-from-bigg-boss-ott-season-3-and-how-much-did-sana-makbul-win

ಹೀಗಾಗಿಯೇ ತಮ್ಮ ಅಸಮಾಧಾನ ಹೊರ ಹಾಕುತ್ತಿರುವ ಹಿಂದಿ ಪ್ರೇಕ್ಷಕರು ಗೆಲುವಿನ ಅರ್ಹತೆ ಮತ್ತು ಯೋಗ್ಯತೆ ರಣ್‌ವೀರ್ ಶೋರೆ ಅವರಿಗಿತ್ತು. ಆದರೆ ಬಿಗ್ ಬಾಸ್‌ನಲ್ಲಿ ಮತ್ತೊಮ್ಮೆ ಗೋಲ್‌ ಮಾಲ್ ಆಗಿದೆ ಎನ್ನುತ್ತಿದ್ದಾರೆ. ಮ್ಯಾಚ್ ಫಿಕ್ಸಿಂಗ್ ಆರೋಪವನ್ನೂ ಮಾಡುತ್ತಿದ್ಧಾರೆ. ಇನ್ನೂ ಕೆಲವರು 25 ಲಕ್ಷ ಗಳಿಸುವ ಗುರಿಯೊಂದಿಗೆ ಬಿಗ್ ಬಾಸ್ ಮನೆಗೆ ಹೋಗಿದ್ದ ರಣ್‌ವೀರ್ ಶೋರೆ ಕೊನೆಯದಾಗಿ ಈ ಕಾರ್ಯಕ್ರಮದಿಂದ ಗಳಿಸಿದ ಹಣ ಎಷ್ಟು ಅನ್ನುವ ಚರ್ಚೆಯನ್ನು ಶುರು ಮಾಡಿದ್ದಾರೆ.

ಈ ಚರ್ಚೆಯ ಮುಂದುವರೆದ ಭಾಗ ಎಂಬಂತೆ, ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟ ರಣ್‌ವೀರ್ ಶೋರೆ ಬಿಗ್ ಬಾಸ್ ಮನೆಯಲ್ಲಿ 42 ದಿನ ಇರುವುದಕ್ಕೆ ಹತ್ ಹತ್ರ ಹತ್ತು ಲಕ್ಷ ರೂಪಾಯಿಯ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತು ಸದ್ಯಕ್ಕೆ ಮುಂಬೈ ಕಿರುತೆರೆ ಜಗತ್ತಿನಲ್ಲಿ ಕೇಳಿ ಬರುತ್ತಿದೆ. ನೆನಪಿರಲಿ.. ಎರಡನೇ ರನ್ನರ್ ಅಪ್‌ ಆಗಿ ಹೊರ ಹೊಮ್ಮಿದರೂ ಕೂಡ ರಣ್‌ವೀರ್ ಶೋರೆಗೆ ಯಾವುದೇ ಹಣವನ್ನೂ ಬಿಗ್ ಬಾಸ್ ನೀಡಿಲ್ಲ. ಹೀಗಾಗಿ 25 ಲಕ್ಷ ಗಳಿಸಲು ಬಂದ ರಣ್‌ವೀರ್ 09 ಲಕ್ಷದ ಜೊತೆ ಸದ್ಯ ಮನೆಗೆ ಮರಳಿದಂತಾಗಿದೆ.

what-did-ranveer-shorey-receive-from-bigg-boss-ott-season-3-and-how-much-did-sana-makbul-win

ಉಳಿದಂತೆ ಈ ಬಾರಿ ಫಿನಾಲೆಯಲ್ಲಿ ಸನಾ ಮಕ್ಭೂಲ್‌ಗೆ ರ್ಯಾಫರ್ ನವೇದ್ ಶೇಖ್ ತೀವೃ ಸ್ಪರ್ಧೆಯನ್ನೊಡ್ಡಿದ್ದರು. ಆದರೆ ಪ್ರೇಕ್ಷಕರ ಒಲವು ಸನಾ ಅವರನ್ನು ವಿಜೇತರನ್ನಾಗಿಸಿತು. ಹೀಗಾಗಿ
ರಾಪರ್ ನವೇದ್ ಶೇಖ್ ಎರಡನೇ ಸ್ಥಾನಕ್ಕೆ ತೃಪ್ತಿಯಾದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X