Ott Releases This week ; ಕನ್ನಡದ ಈ ಸಿನಿಮಾ ಜೊತೆ ಈ ವಾರ ಓಟಿಟಿಯಲ್ಲಿ ನೋಡಬಹುದಾದ ಚಿತ್ರಗಳು ಯಾವುವು?
ಕೊರೊನಾ ನಂತರ ಅಸಂಖ್ಯಾತ ಜನ ಓಟಿಟಿಗೆ ಶರಣಾಗಿದ್ದಾರೆ. ಪ್ರೇಕ್ಷಕರ ಈ ಬದಲಾದ ಅಭಿರುಚಿಗೆ ಅನುಗುಣವಾಗಿ ಚಿತ್ರರಂಗದವರು ಕೂಡ ಕೇವಲ ಓಟಿಟಿಯನ್ನೇ ಗಮನದಲ್ಲಿಟ್ಟಕೊಂಡು ಚಿತ್ರವನ್ನು ಮಾಡುತ್ತಿದ್ದಾರೆ. ಇನ್ನು ಇದರ ನಡುವೆ ಚಿತ್ರಮಂದಿರಗಳ ಸಮಸ್ಯೆ.. ಪ್ರದರ್ಶನದ ಸಂಖ್ಯೆ ಮತ್ತು ಸಮಯದಲ್ಲಿ ಮಾಡಲಾಗುವ ತಾರತಮ್ಯದಿಂದ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣಬೇಕಿದ್ದ ಚಿತ್ರಗಳು ಕೂಡ ಸೋಲುತ್ತಿವೆ. ಅಲ್ಲೊಂದು.. ಇಲ್ಲೊಂದು ಸಿನಿಮಾಗಳು ಮಾತ್ರ ಗೆಲ್ಲುತ್ತಿವೆ.
ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ. ಎಲ್ಲ ಭಾಷೆಗಳಲ್ಲಿ ಕೂಡ ಇದೇ ತರಹದ ವಾತಾವರಣ ಇದೆ. ಹೀಗಾಗಿಯೇ ಹಲವಾರು ಜನ ಚಿತ್ರಮಂದಿರದ ಬದಲು ನೇರವಾಗಿ ಓಟಿಟಿಯಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸರಣಿಗಳ ಬೆನ್ನತ್ತಿದ್ದಾರೆ. ಹೀಗೆ ಬಿಡುಗಡೆ ಮಾಡಲಾದ ಕೆಲ ಚಿತ್ರಗಳಲ್ಲಿ ಅಥವಾ ವೆಬ್ ಸರಣಿಗಳಲ್ಲಿ ಕೆಲವು ಪ್ರೇಕ್ಷಕರ ಗಮನವನ್ನು ಸೆಳೆಯುತ್ತವೆ. ಗೆಲ್ಲುತ್ತವೆ. ಮತ್ತೂ ಕೆಲವು ಇಲ್ಲಿಯೂ ಕೂಡ ಸೋಲುತ್ತವೆ.

ಈ ವಾರ ಕೂಡ ಇದೇ ತರಹದ ಅದೃಷ್ಟ ಪರೀಕ್ಷೆಗೆ ಹಲವರು ಮುಂದಾಗಿದ್ದಾರೆ. ಹಾಗಿದ್ದರೆ ಈ ವಾರ ಬಿಡುಗಡೆಯಾದ ಚಿತ್ರಗಳು/ವೆಬ್ ಸರಣಿಗಳು ಯಾವುವು ? ಎಲ್ಲಿ ನೋಡಬಹುದು ? ಕನ್ನಡದ ಯಾವ ಚಿತ್ರ ಈ ವಾರ ಬಂದಿದೆ ? ಎಂದು ತಿಳಿಯಲು ಮುಂದೆ ಓದಿ
1. ಸಾರೆ ಜಹಾನ್ ಸೆ ಅಚ್ಚಾ: ದಿ ಸೈಲೆಂಟ್ ಗಾರ್ಡಿಯನ್ಸ್ - ನೆಟ್‌ಫ್ಲಿಕ್ಸ್
ಸ್ವಾತಂತ್ರ್ಯೋತ್ಸವದ ಈ ಸುಸಂದರ್ಭದಲ್ಲಿ ದೇಶ ಪ್ರೇಮವನ್ನು ಬಡಿದೆಬ್ಬಿಸಲು ''ಸಾರೆ ಜಹಾನ್ ಸೇ ಅಚ್ಚಾ'' ಚಿತ್ರ ಬಿಡುಗಡೆಯಾಗಿದೆ. ''ನೆಟ್‌ಫ್ಲಿಕ್ಸ್''ನಲ್ಲಿ ಪ್ರಸಾರವಾಗುತ್ತಿರುವ ಆರು ಎಪಿಸೋಡ್‌ಗಳನ್ನು ಹೊಂದಿರುವ ಈ ಚಿತ್ರ 1970ರ ದಶಕದಲ್ಲಿ ತೀವೃವಾಗಿದ್ದ ಪರಮಾಣು ಬೆದರಿಕೆಯ ಕಥೆಯನ್ನು ಹೊಂದಿದೆ. ಗೌರವ್ ಶುಕ್ಲಾ ಸಾರಥ್ಯದ ಸುಮಿತ್ ಪುರೋಹಿತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರತೀಕ್ ಗಾಂಧಿ.. ಸನ್ನಿ ಹಿಂದುಜಾ.. ತಿಲೋತ್ತಮಾ ಶೋಮೆ.. ಕೃತಿಕಾ ಕಾಮ್ರಾ ಸೇರಿ ಹಲವರು ಇದ್ದಾರೆ.
2. ತೆಹ್ರಾನ್ - ಜೀ 5
ಕೇವಲ ''ಸಾರೆ ಜಹಾನ್ ಸೆ ಅಚ್ಚಾ'' ಮಾತ್ರವಲ್ಲ. ಸತ್ಯ ಕಥೆಗಳಿಂದ ಪ್ರೇರಿತಗೊಂಡ ''ತೆಹ್ರಾನ್'' ಕೂಡ ಈ ವಾರ ಬಿಡುಗಡೆಯಾಗಿದೆ. 2012ರಲ್ಲಿ ನವದೆಹಲಿಯಲ್ಲಿ ಇಸ್ರೇಲ್ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿಯ ಸುತ್ತ ಸುತ್ತುವ ಈ ಚಿತ್ರದಲ್ಲಿ ಜಾನ್ ಅಬ್ರಾಹಿಂ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.ಹಾಜಿ ಖಂಜನ್‌ಪೋರ್, ಮಾನುಷಿ ಛಿಲ್ಲರ್, ನೀರು ಬಾಜ್ವಾ, ಅಲಿ ಖಾನ್, ಕೌಶಿಕ್ ಮುಖರ್ಜಿ ಮುಂತಾದವರು ಚಿತ್ರದಲ್ಲಿದ್ದಾರೆ. 115 ನಿಮಿಷಗಳ ಅವಧಿಯನ್ನೊಂದಿರುವ ಈ ಚಿತ್ರವನ್ನು ಅರುಣ್ ಗೋಪಾಲನ್ ನಿರ್ದೇಶನ ಮಾಡಿದ್ದಾರೆ. ''ಜೀ5''ನಲ್ಲಿ ಈ ಚಿತ್ರವನ್ನು ನೀವು ನೋಡಬಹುದು.
3. ಅಂಧೇರಾ - ಅಮೆಜಾನ್ ಪ್ರೈಮ್ ವಿಡಿಯೋ
ಹಾರರ್ ಥ್ರಿಲ್ಲರ್ ಸರಣಿ ''ಅಂಧೇರಾ'' ಕೂಡ ಈ ವಾರದಿಂದ ಪ್ರಸಾರವಾಗುತ್ತಿದೆ. ಕಾಣೆಯಾದ ವ್ಯಕ್ತಿಯ ತನಿಖೆಯ ಸುತ್ತ ಸುತ್ತುವ ಈ ಚಿತ್ರದಲ್ಲಿ ಪ್ರಿಯಾ ಬಾಪತ್ ಪ್ರಮುಖವಾದ ಪಾತ್ರವನ್ನು ನಿರ್ವಹಿಸಿದ್ದಾರೆ. 8 ಎಪಿಸೋಡ್‌ಗಳಿರುವ ಈ ಸರಣಿಯನ್ನು ರಾಘವ್ ದರ್ ನಿರ್ದೇಶನ ಮಾಡಿದ್ದು ಪ್ರಜಕ್ತಾ ಕೊಹ್ಲಿ ಮತ್ತು ಸುರ್ವಿನ್ ಚಾವ್ಲಾ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ''ಅಮೆಜಾನ್ ಪ್ರೈಮ್''ನಲ್ಲಿ ಈ ಸರಣಿ ಪ್ರಸಾರವಾಗುತ್ತಿದೆ.
4. ಕೋರ್ಟ್ ಕಚೇರಿ - ಸೋನಿ ಲೈವ್
ಹಾಸ್ಯ ಕಥಾಹಂದರವನ್ನು ಹೊಂದಿರುವ ಕೋರ್ಟ್ ಕಚೇರಿ ಚಿತ್ರ ಕೂಡ ಈ ವಾರದಿಂದ ಪ್ರಸಾರವಾಗುತ್ತಿದೆ. ರುಚಿರ್ ಅರುಣ್ ನಿರ್ದೇಶನದ ಈ ಚಿತ್ರದಲ್ಲಿ ಪವನ್ ಮಲ್ಹೋತ್ರಾ, ಆಶಿಶ್ ವರ್ಮಾ, ಪುನೀತ್ ಭಾತ್ರಾ ಮುಂತಾದವರು ಇದ್ದಾರೆ. 5 ಎಪಿಸೋಡ್‌ಗಳನ್ನು ಹೊಂದಿರುವ ಈ ಸರಣಿ ಹಿಂದಿ, ಮರಾಠಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಪ್ರಸಾರವಾಗುತ್ತಿದ್ದು ಸೋನಿ ಲೈವ್‌ನಲ್ಲಿ ವೀಕ್ಷಣೆಗೆ ಲಭ್ಯ ಇದೆ.

5.ಜೂನಿಯರ್ - ಅಮೆಜಾನ್ ಪ್ರೈಮ್
ಗಣಿ ಧಣಿ ಗಾಲಿ ಜನಾರ್ಧನ್ ರೆಡ್ಡಿ ಅವರ ಮಗ ಕಿರೀಟಿ ಅಭಿನಯದ ಚೊಚ್ಚಲ ಚಿತ್ರ ''ಜೂನಿಯರ್'' ಚಿತ್ರವನ್ನು ನಿನ್ನೆ ಸ್ವಾತಂತ್ರ್ಯೋತ್ಸವದ ಹಿನ್ನೆಲೆ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ''ಅಮೆಜಾನ್ ಪ್ರೈಮ್''ನಲ್ಲಿ ಈ ಚಿತ್ರ ಪ್ರಸಾರವಾಗುತ್ತಿದ್ದು ಚಿತ್ರದಲ್ಲಿ ವಿ.ರವಿಚಂದ್ರನ್, ಜೆನಿಲಿಯಾ ದೇಶಮುಖ್, ಕೂಡ ಇದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ''ರಾಧಾ ಕೃಷ್ಣ ರೆಡ್ಡಿ'' ನಿರ್ದೇಶನ ಇದೆ.
ಇನ್ನುಳಿದ ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ
6. ಜಾನಕಿ vs ಸ್ಟೇಟ್ ಆಫ್ ಕೇರಳ (ಮಲಯಾಳಂ) (ಜೀ 5 ) ಆಗಸ್ಟ್ 15
7. ಗುಡ್ ಡೇ (ತಮಿಳು ) (SunNxt ) ಆಗಸ್ಟ್ 15
8. ವರ್ಜಿನ್ ಬಾಯ್ಸ್ (ತೆಲುಗು) (ಆಹಾ) ಆಗಸ್ಟ್ 15
9. ಸೇನಾ (ಹಿಂದಿ ) (ಅಮೆಜಾನ್ MX ಪ್ಲೇಯರ್) ಆಗಸ್ಟ್ 13
10. ಕಾನ್‌ಸ್ಟೆಬಲ್ ಕನಕಂ (ತೆಲುಗು ) (ಈಟಿವಿ ವಿನ್) ಆಗಸ್ಟ್ 14
11. ಅಕ್ಕೆನಂ -(ತಮಿಳು) (ಸನ್ NXT) ಆಗಸ್ಟ್ 16


Click it and Unblock the Notifications











