For Quick Alerts
  ALLOW NOTIFICATIONS  
  For Daily Alerts

  ಬಿಗ್‌ ಬಾಸ್‌ನಲ್ಲಿ ವಿನ್ನರ್ ಆಗಲು ಸಂಗೀತ ಬರಲೇಬೇಕಾ? ಯಾಕಿಂಗೆ?

  |

  ಇಲ್ಲಿಯವರೆಗೂ ಕನ್ನಡ ಬಿಗ್ ಬಾಸ್‌ ಎಂಟು ಆವೃತ್ತಿಗಳನ್ನು ಮುಗಿದಿವೆ. ಈ ಬಾರಿ ತೆಲುಗು ಮಾದರಿಯಲ್ಲಿ ಓಟಿಟಿ ಬಿಗ್ ಬಾಸ್ ಆಯೋಜಿಸಿ ಒಂಬತ್ತನೇ ಸೀಸನ್‌ಗೆ ಹೈಪ್ ಸೃಷ್ಟಿಸಲು ಯತ್ನಿಸಲಾಯಿತಾದರೂ ಈ ಉಪಾಯ ಹೆಚ್ಚೇನೂ ಯಶಸ್ವಿಯಾದಂತಿಲ್ಲ. ಓಟಿಟಿಯಿಂದ ಆಯ್ಕೆಯಾಗಿರುವ ನಾಲ್ವರು ಸ್ಪರ್ಧಿಗಳ ಜತೆ ಮತ್ತೊಂದಷ್ಟು ಹಳೆಯ ಬಿಗ್ ಬಾಸ್ ಆವೃತ್ತಿಗಳ ಸ್ಪರ್ಧಿಗಳು ಟಿವಿ ಸೀಸನ್‌ನಲ್ಲಿ ಸೇರಿಕೊಳ್ಳಲಿದ್ದಾರೆ. ಇದೂ ಸಹ ತೆಲುಗು ಮಾದರಿಯೇ.

  ಹೀಗೆ ತೆಲುಗು ಮಾದರಿಯಲ್ಲಿ ಆಯೋಜನೆಯಾಗುತ್ತಿರುವ ಕನ್ನಡ ಬಿಗ್ ಬಾಸ್ ತನ್ನ ಸ್ವಂತಿಕೆಯ ಅಂಶವನ್ನೂ ಸಹ ಹೊಂದಿದೆ, ಆದರೆ ಅದನ್ನು ಇತರರು ಮಾದರಿಯನ್ನಾಗಿ ಸ್ವೀಕರಿಸಿಲ್ಲ ಅಷ್ಟೇ. ಅದುವೇ ಬಿಗ್ ಬಾಸ್ ಗೆಲ್ಲಲು ಅಥವಾ ರನ್ನರ್ ಅಪ್ ಆಗಲು ಸಂಗೀತ ಬರಬೇಕೆಂಬುದು. ಹೌದು, ಬಿಗ್ ಬಾಸ್ ಕನ್ನಡದಲ್ಲಿ ಮನೆಯಲ್ಲಿನ ವಸ್ತುಗಳನ್ನು ಬಳಸಿ ತಾಳ ಹಾಕುತ್ತಾ ಹಾಡು ಗುನುಗಿದವರು ವಿನ್ನರ್ ಆಗಿ ಹೊರಹೊಮ್ಮಿದ ಸಾಕಷ್ಟು ಉದಾಹರಣೆಗಳಿವೆ.

  ಅಯ್ಯೋ, ಇದೇನು ಹೀಗೆ ಹೇಳ್ತಿದ್ದಾರೆ ಮೊದಲ ಆವೃತ್ತಿಯಲ್ಲಿ ಗೆದ್ದ ಸ್ಪರ್ಧಿ ನಟರಲ್ಲವೇ ಅವರು ಯಾವ ಸಿಂಗರ್ ಎಂದು ಕಾಮೆಂಟ್ ಮಾಡುವ ಮುನ್ನ ಕೆಲವೊಂದಷ್ಟು ಸಂಚಿಕೆಯಲ್ಲಿ ವಿಜಯ ರಾಘವೇಂದ್ರ ಅವರು ತಮ್ಮ ಹಾಡು ಹಾಡಿದ್ದನ್ನು ಒಮ್ಮೆ ನೆನಪಿಸಿಕೊಳ್ಳಿ. ಇನ್ನು ಇಲ್ಲಿಯವರೆಗೂ ವಿನ್ನರ್‌ಗಳಾಗಿರುವ ಶೃತಿ, ಚಂದನ್ ಶೆಟ್ಟಿ, ಶಶಿಕುಮಾರ್ ಹಾಗೂ ಶೈನ್ ಶೆಟ್ಟಿ ಸಹ ಮನೆಯಲ್ಲಿ ಹಾಡು ಹಾಡಿ ರಂಜಿಸಿದವರೇ. ಹೀಗೆ ಇಲ್ಲಿಯರೆಗೂ ನಡೆದಿರುವ ಬಿಗ್ ಬಾಸ್ ಆವೃತ್ತಿಗಳಲ್ಲಿ ಗೆದ್ದಿರುವ ಬಹುತೇಕರು 'ದೊಡ್ಮನೆಯ ಗಾಯಕರೇ'.

  ವಿಜೇತರು ಮಾತ್ರವಲ್ಲ, ರನ್ನರ್ ಅಪ್‌ ಆದವರು ಹಾಗೂ ಹೆಚ್ಚು ದಿನ ಮನೆಯಲ್ಲಿ ಉಳಿದುಕೊಂಡವರೂ ಸಹ ಮನೆಯ ಟೇಬಲ್ಲೋ, ಚೇರನ್ನೋ ಬಳಸಿ ಸಂಗೀತ ಸಂಯೋಜಿಸಿ ಕ್ಯಾಮೆರಾ ಮುಂದೆ ಹಾಡು ಹಾಡಿದವರೇ. ಇದನ್ನೆಲ್ಲಾ ಗಮನಿಸುವಾಗ ಬಿಗ್ ಬಾಸ್ ಮನೆಗೆ ಪ್ರವೇಶಿಸಬೇಕೆಂದರೆ ಹಾಗೂ ಅಲ್ಲಿ ಹೆಚ್ಚು ದಿನ ಉಳಿಯಬೇಕೆಂದರೆ ಸಂಗೀತ ಬರಲೇಬೇಕಾ ಎಂಬ ಪ್ರಶ್ನೆ ಮೂಡದೇ ಇರದು.

  ಬಿಗ್ ಬಾಸ್‌ನ ಆಯೋಜಕರು ಹೀಗೆ ಹಾಡು ಹಾಡಿ ರಂಜಿಸುವವರ ಹಿಂದೆ ಬಿದ್ದಿರುವುದಾದರೂ ಯಾಕೆ, ನೇರವಾಗಿ ಹಾಡು ಬರುವವರಿಗೆ ಮಾತ್ರ ಪ್ರವೇಶ ಎಂಬ ನಿಯಮವನ್ನೇಕೆ ಜಾರಿಗೆ ತರಬಾರದು ಅಲ್ವೇ?

  English summary
  Why contestants who know singing are always get preference in Bigg Boss Kannada? Read on.
  Thursday, September 22, 2022, 19:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X