For Quick Alerts
  ALLOW NOTIFICATIONS  
  For Daily Alerts

  ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ (42) ಇನ್ನೂ ಏಕೆ ಮದ್ವೆ ಆಗಿಲ್ಲ?

  |

  ರಾಜ್ ಕುಂದ್ರಾ ಬಂಧನದ ನಂತರ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ ಬಿಗ್ ಬಾಸ್ ಒಟಿಟಿ ಪ್ರವೇಶಿಸಿ ಅಚ್ಚರಿ ಉಂಟು ಮಾಡಿದ್ದರು. ಅಕ್ಕನ ಪತಿ ಜೈಲು ಸೇರಿರುವ ಈ ಸಂದರ್ಭದಲ್ಲಿ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದು ಏಕೆ ಎಂಬ ಚರ್ಚೆಯೂ ನಡೆಯಿತು. ಇದೀಗ, ಶಮಿತಾ ಶೆಟ್ಟಿ ಬಿಗ್ ಬಾಸ್ ಒಟಿಟಿಯ ಪ್ರಮುಖ ಆಕರ್ಷಣೆಯಾಗಿ ರೂಪುಗೊಂಡಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡ್ತಿರುವ ಶಮಿತಾ ಶೆಟ್ಟಿ ಈಗ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿಗಳು ವರದಿಯಾಗಿದೆ.

  ಬಿಗ್ ಬಾಸ್ ಮನೆಯಲ್ಲಿರುವ ರಾಕೇಶ್ ಬಾಪತ್ ಜೊತೆ ಶಮಿತಾ ಲವ್ವಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಜೋಡಿಯಂತೆ ಬಿಂಬಿಸಿಕೊಳ್ಳುತ್ತಿದ್ದು, ಒಬ್ಬರಿಗೊಬ್ಬರು ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಎಪಿಸೋಡ್‌ವೊಂದರಲ್ಲಿ ಶಮಿತಾ ಶೆಟ್ಟಿ ಮಲಗಿದ್ದಾಗ ಆಕೆಯನ್ನು ಎಬ್ಬಿಸಲು ಹೋದ ರಾಕೇಶ್ ಕೈಗೆ ಕಿಸ್ ಮಾಡಿದ್ದು ಸಖತ್ ವೈರಲ್ ಆಗಿತ್ತು. ಆಮೇಲೆ ಇಬ್ಬರು ಒಟ್ಟಿಗೆ ಡ್ಯಾನ್ಸ್ ಮಾಡಿದರು.

  ಪ್ರೀತಿಯಲ್ಲಿ ಬಿದ್ದರೇ ಶಮಿತಾ ಶೆಟ್ಟಿ? ಒಂದು ಮುತ್ತಿನ ಕಥೆಪ್ರೀತಿಯಲ್ಲಿ ಬಿದ್ದರೇ ಶಮಿತಾ ಶೆಟ್ಟಿ? ಒಂದು ಮುತ್ತಿನ ಕಥೆ

  ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಶಮಿತಾ ಶೆಟ್ಟಿ ಮತ್ತು ರಾಕೇಶ್ ಬಾಪತ್ ನಡುವಿನ ಪ್ರೇಮ ಹುಟ್ಟಿದೆ ಎನ್ನುವುದು ಪಕ್ಕಾ ಆಗಿದೆ. ಶಮಿತಾ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ರಾಕೇಶ್, ''ಮೊದಲಿಗೆ ನಾವಿಬ್ಬರೂ ತುಸು ಜಗಳ ಮಾಡಿದೆವು. ನಂತರ ದಿವ್ಯಾರ ಮಾತಿನಂತೆ ಶಮಿತಾ ಜೊತೆ ಮಾತನಾಡಲು ಆರಂಭಿಸಿದೆ. ಆ ಬಳಿಕವೇ ಶಮಿತಾಳ ವ್ಯಕ್ತಿತ್ವ ಅರ್ಥವಾಗಿ ನಾವು ಹೆಚ್ಚು ಕ್ಲೋಸ್ ಆದೆವು'' ಎಂದಿದ್ದಾರೆ. ಮುಂದೆ ಓದಿ...

  ಶಮಿತಾ ನನ್ನವಳು ಎಂಬ ಭಾವನೆ

  ಶಮಿತಾ ನನ್ನವಳು ಎಂಬ ಭಾವನೆ

  ''ನಾನು ಯಾರೊಂದಿಗೆ ಹತ್ತಿರವಾಗುತ್ತೇನೊ ಅವರೊಂದಿಗೆ ಬಹಳ ನಿಷ್ಠೆಯಿಂದ ಇರುತ್ತೇನೆ. ಇಲ್ಲಿಯೂ ಅಷ್ಟೆ ಶಮಿತಾ ಜೊತೆ ನಾನು ನಿಷ್ಠೆಯಿಂದ ಇರುತ್ತೇನೆ. ಶಮಿತಾ ಒಂದು ರೀತಿ ನನಗೆ ಸೇರಿದವಳು ಎಂಬ ಭಾವ ನನಗೆ ಉಲ್ಬಣವಾಗಿದೆ'' ಎಂದು ರಾಕೇಶ್ ಹೇಳಿಕೊಂಡರು. ಬಿಗ್ ಬಾಸ್ ಒಟಿಟಿಯಲ್ಲಿ ಇಷ್ಟೆಲ್ಲ ನೋಡಿದ್ಮೇಲೆ ಶಮಿತಾ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಕಾಡುವುದು ಸಹಜ.

  ನನ್ನ ಕುಟುಂಬದ ಕಾರಣಕ್ಕೆ ನನ್ನನ್ನು ದೂರ ಇಡಲಾಗಿದೆ: ಬಿಗ್‌ಬಾಸ್‌ನಲ್ಲಿ ಶಮಿತಾ ಕಣ್ಣೀರುನನ್ನ ಕುಟುಂಬದ ಕಾರಣಕ್ಕೆ ನನ್ನನ್ನು ದೂರ ಇಡಲಾಗಿದೆ: ಬಿಗ್‌ಬಾಸ್‌ನಲ್ಲಿ ಶಮಿತಾ ಕಣ್ಣೀರು

  ಶಮಿತಾ ಇನ್ನು ಮದುವೆ ಆಗಿಲ್ಲ

  ಶಮಿತಾ ಇನ್ನು ಮದುವೆ ಆಗಿಲ್ಲ

  ಅಂದ್ಹಾಗೆ, 42 ವರ್ಷದ ಶಮಿತಾ ಶೆಟ್ಟಿ ಇನ್ನು ಮದುವೆ ಆಗಿಲ್ಲ. ಹಾಗಂತ ಯಾರನ್ನು ಲವ್ ಮಾಡ್ತಿಲ್ಲ. ಸದ್ಯಕ್ಕೆ ಶಮಿತಾ ಸ್ಟೇಟಸ್ ನೋಡಿದ್ರೆ ಸಿಂಗಲ್. ಶಿಲ್ಪಾ ಶೆಟ್ಟಿ ಸಹೋದರಿ ಒಂಟಿಯಾಗಿದ್ದಾರೆ. 42 ವರ್ಷವಾದರೂ ಇನ್ನು ಏಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ಈ ಬಗ್ಗೆ ಶಮಿತಾ ಶೆಟ್ಟಿ ಖಾಸಗಿ ವೆಬ್‌ಸೈಟ್‌ವೊಂದರ ಜೊತೆ ಈ ಹಿಂದೆಯೊಮ್ಮೆ ಮಾತನಾಡಿದ್ದರು.

  ಸರಿಯಾದ ವ್ಯಕ್ತಿಗಾಗಿ ಕಾಯುವೆ

  ಸರಿಯಾದ ವ್ಯಕ್ತಿಗಾಗಿ ಕಾಯುವೆ

  ಶಮಿತಾ ಶೆಟ್ಟಿ ಮದುವೆಯೇ ಆಗಲ್ಲ ಎಂದು ಹೇಳಿಲ್ಲ. ನನ್ನ ಜೀವನಕ್ಕೆ ಸರಿಯಾದ ವ್ಯಕ್ತಿ ಸಿಕ್ಕಾಗ ವಿವಾಹ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ. ವಾಸ್ತವವಾಗಿ ಸಮಾಜವನ್ನು ನೋಡಿದ ಬಳಿಕ ಒಂಟಿಯಾಗಿರುವುದು ಲೇಸು ಎಂದೆನಿಸುತ್ತದೆ. ನಾನು ಸಿಂಗಲ್ ಆಗಿ ಆರಾಮಾಗಿದ್ದೇನೆ. ಮದುವೆಯಾದಾಗ ಜೊತೆಗಾರರು ಸರಿಯಾದ ಗೌರವ ಕೊಡಲ್ಲ ಎಂದು ಶಮಿತಾ ಸಂದರ್ಶನದಲ್ಲಿ ಹೇಳಿದ್ದರು.

  ಪ್ರೀತಿ, ಮದುವೆ ಮೇಲೆ ನಂಬಿಕೆಯಿಲ್ಲ

  ಪ್ರೀತಿ, ಮದುವೆ ಮೇಲೆ ನಂಬಿಕೆಯಿಲ್ಲ

  ''ಜನರು ಮದುವೆಯಾಗಿದ್ದರೂ, ಮತ್ತೊಂದೆಡೆ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ. ಮದುವೆ ನಂತರ ತನ್ನ ಜೊತೆಗಾರರನ್ನು ಸರಿಯಾಗಿ ಗೌರವಿಸಲ್ಲ. ಮದುವೆಗೆ ಮುಂಚೆ ಇದ್ದ ರೀತಿ ನಡೆಸಿಕೊಳ್ಳುವುದಿಲ್ಲ. ಈಗಿನ ಸಮಾಜದಲ್ಲಿ ಪ್ರೀತಿಯಲ್ಲಿ ಬೀಳುವುದು, ಮದುವೆಯಾಗುವುದನ್ನು ನಾನು ನಂಬುವುದಿಲ್ಲ. ಇದೆಲ್ಲ ನನಗೆ ಸಂಬಂಧಿಸಿದ್ದಲ್ಲ'' ಎಂದು ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

  English summary
  Why Shamita Shetty did not marry till? shilpa shetty sister has opened up on being a bachelorette.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X