RRR OTT Release Date : ಫಿಕ್ಸ್ ಆಯ್ತು RRR ಒಟಿಟಿ ರಿಲೀಸ್ ದಿನಾಂಕ: ನೆಟ್‌ಫ್ಲಿಕ್ಸ್ or ಅಮೇಜಾನ್ ಪ್ರೈಮ್?

ರಾಜಮೌಳಿ ನಿರ್ದೇಶನದ RRR ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಟಾಲಿವುಡ್ ನಟ ರಾಮ್‍ಚರಣ್ ತೇಜ ಹಾಗೂ ಜೂ.ಎನ್‌ಟಿಆರ್ ಅಭಿನಯದ ಬಹು ನಿರೀಕ್ಷಿತ RRR ಸಿನಿಮಾ ವಿಶ್ವಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದೆ.

ಬಾಹುಬಲಿ ನಿರ್ದೇಶಕ ರಾಜಮೌಳಿ ಇದೇ ಮೊದಲ ಬಾರಿಗೆ ತೆಲುಗಿನ ಇಬ್ಬರು ಸ್ಟಾರ್ ನಟರಿಗೆ ಒಂದೇ ಸಿನಿಮಾದಲ್ಲಿ ಆ್ಯಕ್ಷನ್ ಕಟ್ ಹೇಳಿದ್ದು, ಸಿನಿಮಾ ನೋಡಲು ಅಭಿಮಾನಿಗಳು ಥಿಯೇಟರ್‌ನತ್ತ ಮುಗಿಬೀಳುತ್ತಿದ್ದಾರೆ.

ಅಲ್ಲದೇ ರಾಮ್‍ಚರಣ್ ಹಾಗೂ ಜೂ.ಎನ್‍ಟಿಆರ್ ಅಭಿಮಾನಿಗಳಂತೂ ಸಿನಿಮಾವನ್ನು ಮುಗಿ ಬಿದ್ದು ನೋಡುತ್ತಿದ್ದಾರೆ. RRR ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗುತ್ತಿದ್ದಂತೆ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಚರ್ಚೆಗಳು ನಡೆಯುತ್ತಿದೆ.

ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಮಾತುಗಳು

ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಮಾತುಗಳು

ಚಿತ್ರರಂಗದಲ್ಲಿ ಇದೀಗ ಒಟಿಟಿಗಳ ಪಾತ್ರ ಹೆಚ್ಚಾಗಿದೆ. ರಿಲೀಸ್ ಆಗ ಸಿನಿಮಾಗಳು ಕೆಲ ದಿನಗಳ ನಂತರ ಒಟಿಟಿ ಪ್ರವೇಶ ಪಡೆಯುತ್ತೆ ಅನ್ನೋದು ಜನರ ಮನಸ್ಸಲ್ಲಿ ಕುಳಿತಿರುತ್ತದೆ. ಅಂತೆಯೇ RRR ಸಿನಿಮಾ ರಿಲೀಸ್ ಆಗಿ ಒಂದು ದಿನವಷ್ಟೆ ಆಗಿದೆ. ಅದಾಗಲೇ ಚಿತ್ರದ ಒಟಿಟಿ ರಿಲೀಸ್ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಅಷ್ಟಕ್ಕು RRR ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಾ? 'RRR' ಸಿನಿಮಾದ ಒಟಿಟಿ ರೈಟ್ಸ್ ಯಾರ ಬಳಿ ಇದೆ, ಅಮೇಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಹೀಗೆ ಹಲವು ಫ್ಲಾಟ್‌ಫಾರಂಗಳಿದ್ದು, 'RRR' ಸಿನಿಮಾ ಯಾವುದರಲ್ಲಿ ಬರಲಿದೆ ಅನ್ನೋದು ಈಗ ಜನರಲ್ಲಿ ಕಾಡುತ್ತಿರುವ ಪ್ರಶ್ನೆ.

ನೆಟ್‌ಫ್ಲಿಕ್ಸ್ ಗೆ 'RRR' ಸಿನಿಮಾದ ಒಟಿಟಿ ರೈಟ್ಸ್

ನೆಟ್‌ಫ್ಲಿಕ್ಸ್ ಗೆ 'RRR' ಸಿನಿಮಾದ ಒಟಿಟಿ ರೈಟ್ಸ್

ಸಧ್ಯ 'RRR' ಸಿನಿಮಾದ ಒಟಿಟಿ ರೈಟ್ಸ್ ಈ ಹಿಂದೇನೆ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ. ನೆಟ್‌ಫ್ಲಿಕ್ಸ್‌ ನವರು 'RRR' ಸಿನಿಮಾದ ಒಟಿಟಿ ರೈಟ್ಸ್ ಪಡೆದುಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ 'RRR' ಸಿನಿಮಾ ಬರೋದು ಪಕ್ಕಾ ಆಗಿದ್ದು, ಸದ್ಯಕ್ಕೆ ನೆಟ್‌ಫ್ಲಿಕ್ಸ್‌ನವರು 'RRR' ರಿಲೀಸ್ ದಿನಾಂಕವನ್ನು ನಿಗದಿ ಮಾಡಿಲ್ಲ. ಆದರೇ ಚಿತ್ರತಂಡ ಮತ್ತು ನೆಟ್‌ಫ್ಲಿಕ್ಸ್ ಒಪ್ಪಂದದ ಮೇಲೆ 'RRR' ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗಿ 90 ದಿನಗಳ ನಂತರ ಒಟಿಟಿಗೆ ಬರಲಿದೆ.

ಒಟಿಟಿ ರಿಲೀಸ್ ಬಗ್ಗೆ ಮಾತುಕತೆ

ಒಟಿಟಿ ರಿಲೀಸ್ ಬಗ್ಗೆ ಮಾತುಕತೆ

ಕೆಲವೊಂದು ಸಿನಿಮಾಗಳು ರಿಲೀಸ್ ಆದ ಒಂದೇ ತಿಂಗಳಿಗೆ ಒಟಿಟಿ ಪ್ರವೇಶ ಪಡೆಯುತ್ತೆ. ಆದರೇ 'RRR' ಸಿನಿಮಾ ಬಹುನಿರೀಕ್ಷೆಯ ಚಿತ್ರವಾಗಿದ್ದು, RRR ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡುವ ಕುರಿತು ರಾಜಮೌಳಿ ಕೆಲವು ನಿರ್ಬಂಧಗಳನ್ನು ಹೇರಿದ್ದಾರೆ. ಹೀಗಾಗಿ ಸಿನಿಮಾ ಬಿಡುಗಡೆ ಆಗಿ 90 ದಿನಗಳ ಬಳಿಕ ಈ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬರಲಿದೆ. ಅದರಲ್ಲಿಯೂ ಸಿನಿಮಾವು ಗುಣಮಟ್ಟದ ಒಟಿಟಿ ಎನಿಸಿಕೊಂಡಿರುವ ನೆಟ್ ಫ್ಲಿಕ್ಸ್ ನಲ್ಲಿ ತೆರೆಗೆ ಬರಲಿದೆ. ಒಟಿಟಿಯಲ್ಲಿ ಸಿನಿಮಾ ನೋಡುವವರ ವರ್ಗ ಕೂಡ ಪ್ರಪಂಚದಾದ್ಯಂತ ಹೆಚ್ಚಿದ್ದು, 'RRR' ರಿಲೀಸ್‌ಗಾಗಿ ಕೂಡ ಕಾದು ಕುಳಿತ್ತಿದ್ದಾರೆ.

260 ಕೋಟಿ ಆಗಿದೆ ಎಂದು ಅಂದಾಜಿಸಲಾಗಿದೆ

260 ಕೋಟಿ ಆಗಿದೆ ಎಂದು ಅಂದಾಜಿಸಲಾಗಿದೆ

'RRR' ಚಿತ್ರದ ರಿಲೀಸ್‌ಗೂ ಮುನ್ನವೇ ಚಿತ್ರ ಕಲೆಕ್ಷನ್ ಬಗ್ಗೆ ಹೆಚ್ಚಿನ ಲೆಕ್ಕಾಚಾರಗಳು ಹುಟ್ಟಿ ಕೊಂಡಿದ್ದವು. ಆದರೆ ಈಗ RRR ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಎನ್ನುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಬಾಕ್ಸ್ಆಫೀಸ್‌ನಲ್ಲಿ RRR ಮೊದಲ ದಿನ ದೊಡ್ಡ ಮಟ್ಟದ ದಾಖಲೆ ಬರೆದಿದೆ. ವರದಿಯ ಪ್ರಕಾರ RRR ಚಿತ್ರದ ಮೊದಲ ದಿನ ವಿಶ್ವದಾದ್ಯಂತ ಒಟ್ಟಾರೆ 260 ಕೋಟಿ. 'RRR' ಮೊದಲ ದಿನವೇ 200 ಕೋಟಿಯ ಗಡಿ ದಾಟಿದೆ. ಇದು ನಿರೀಕ್ಷೆಯನ್ನು ಮೀರಿಸಿದ ಕಲೆಕ್ಷನ್. ವಿಶ್ವಾದ್ಯಂತ RRR ಮೊದಲ ದಿನದ ಬಾಕ್ಸಾಫೀಸ್ ಗಳಿಕೆ 260 ಕೋಟಿ ಆಗಿದೆ ಎಂದು ಅಂದಾಜಿಸಲಾಗಿದೆ.

More from Filmibeat

English summary
Here you will find out information regarding RRR's OTT release date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X