Year Ender 2023: ಈ ವರ್ಷ ನೆಟ್‌ಫ್ಲಿಕ್ಸ್ ಇಂಡಿಯಾ ಸಾಧನೆ ಹೇಗಿದೆ?
ವಿಶ್ವದಾದ್ಯಂತ ನೆಟ್‌ಫ್ಲಿಕ್ಸ್ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು, ನೆಟ್‌ಫ್ಲಿಕ್ಸ್ ಭಾರತ ಕೂಡ ವೇಗವಾಗಿ ಬೆಳೆಯುತ್ತಲೇ ಇದೆ. ಹಲವಾರು ಸಿನಿಮಾಗಳು, ವೆಬ್ ಸಿರೀಸ್‌ಗಳು, ಡಾಕ್ಯೂಮೆಂಟರಿ ಮತ್ತು ಕಾಮಿಡಿ ಶೋಗಳ ಮೂಲಕ ಎಲ್ಲಾ ಭಾಷೆಯ ಜನರ ಮನೆ ಮನೆಗೂ ತಲುಪಿದೆ. ಈ ಮೂಲಕ ನೆಟ್‌ಫ್ಲಿಕ್ಸ್ 2023ರ ವರ್ಷವನ್ನು ಸಂಭ್ರಮಿಸಿದೆ.
ಈ ವರ್ಷದ ಜಾಗತಿಕವಾಗಿ ಹಲವು ಪ್ರಶಸ್ತಿಗಳನ್ನು ಗೆದ್ದ ನೆಟ್‌ಫ್ಲಿಕ್ಸ್ ದೇಶಿಯ ಸಿನಿಮಾಗಳನ್ನು ಜನರ ಮನೆಗೆ ತಲುಪಿಸಿದೆ. ಪ್ರೇಕ್ಷಕರು ದೇಶದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಉತ್ತಮ ಕಥೆಗಳನ್ನು ಆನಂದಿಸಿದ್ದಾರೆ. 35 ಭಾಷೆಗಳಲ್ಲಿ ಸಬ್‌ಟೈಟಲ್ಸ್ ಮತ್ತು ಡಬ್ಬಿಂಗ್ ಮಾಡಿ ಪ್ರೇಕ್ಷಕರಿಗಾಗಿ ನೀಡಲಾಗಿದೆ.

ಸ್ಥಳೀಯ ಕಥೆಗಳಾದ ಕಾಲಾ ಪಾನಿ (ಹಿಂದಿ), ತುಣಿವು (ತಮಿಳು), ಲಿಯೋ (ತಮಿಳು), ಖುಷಿ (ತೆಲುಗು) ಮತ್ತು ಪದ್ಮಿನಿ (ಮಲಯಾಳಂ) ಪ್ಯಾನ್-ಇಂಡಿಯನ್ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ (ಹಿಂದಿ) ಸಿನಿಮಾಗಳು ಈ ವರ್ಷ 25 ವಾರಗಳವರೆಗೆ ಟಾಪ್ 10 ಸ್ಥಾನಗಳಲ್ಲಿದ್ದವು. ಜವಾನ್ (ಎಲ್ಲಾ ಭಾಷೆಗಳಲ್ಲಿ) ನವೆಂಬರ್ 2 ರಂದು ಬಿಡುಗಡೆಯಾಗಿ ಕೇವಲ ಎರಡು ವಾರಗಳಲ್ಲಿ ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಚಲನಚಿತ್ರವಾಯಿತು.
ಇತರ ಭಾಷೆಗಳಿಗೂ ಮಣೆ ಹಾಕಿದ ಭಾರತೀಯರು
ಇತರ ಭಾಷೆಯ ಜನಪ್ರಿಯ ಚಲನಚಿತ್ರಗಳು ಮತ್ತು ವೆಬ್ ಸೀರಿಸ್ ಆದ ಎಕ್ಸ್‌ಟ್ರಾಕ್ಷನ್ 2 ಮತ್ತು ಸ್ಟ್ರೇಂಜರ್ ಥಿಂಗ್ಸ್ S4, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಲಭ್ಯವಿದೆ. ವಾರಗಟ್ಟಲೆ ಭಾರತದಲ್ಲಿ ಟ್ರೆಂಡ್ ಆಗಿದೆ. ಇದರ ಜೊತೆಗೆ ಭಾರತೀಯ ಪ್ರೇಕ್ಷಕರು ಫ್ರೆಂಚ್, ಜಪಾನೀಸ್ ಮತ್ತು ಕೊರಿಯನ್ ಕಥೆಗಳನ್ನು ಹೆಚ್ಚಾಗಿ ನೋಡಿದ್ದು, ಭಾರತದ ಟಾಪ್ 10 ರಲ್ಲಿ ಇವೂ ಕಾಣಿಸಿಕೊಂಡಿವೆ.

2023 ರಲ್ಲಿ ಮೊದಲ ಬಾರಿಗೆ ನಟಿ ಕರೀನಾ ಕಪೂರ್ ಖಾನ್, ಜಾನೆ ಜಾನ್ ಸಿನಿಮಾ ಮೂಲಕ ಓಟಿಟಿಗೆ ಕಾಲಿಟ್ಟರು. ನಟ ರಾಣಾ ದಗ್ಗುಬಾಟಿ, ರಾಣಾ ನಾಯ್ಡು ಮೂಲಕ, ಕೊಹ್ರಾದಲ್ಲಿ ಸುವೀಂದರ್ ವಿಕ್ಕಿ, ಕ್ಲಾಸ್ ಮತ್ತು ದಿ ಆರ್ಚಿಸ್‌ನಲ್ಲಿ 15 ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದಿದೆ.
ಜಾಗತಿಕವಾಗಿ ನೆಲೆ ಕಂಡ ಭಾರತಿಯ ಸಿನಿಮಾಗಳು!
2023 ರಲ್ಲಿ 50 ಕ್ಕೂ ಹೆಚ್ಚು ಭಾರತೀಯ ಕಥೆಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ಜಾಗತಿಕ ವೀಕ್ಷಕರನ್ನು ತಲುಪುತ್ತವೆ. ಭಾರತೀಯ ಚಲನಚಿತ್ರಗಳು ಮತ್ತು ಸರಣಿಗಳು 50 ವಾರಗಳಲ್ಲಿ ಜಾಗತಿಕ ಟಾಪ್ 10 ರಲ್ಲಿ ಸ್ಥಿರವಾಗಿ ಕಾಣಿಸಿಕೊಂಡಿವೆ. ಚೋರ್ ನಿಕಲ್ ಕೆ, ಕೊಹ್ರಾ, ಜಾನೆ ಜಾನ್, ಕಥಲ್ , ಶೆಹಜಾದಾ, ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ, ತೂ ಝೂತಿ ಮೈನ್ ಮಕ್ಕರ್, ಜವಾನ್, ಗಟ್ಟಾ ಕುಸ್ತಿ, ವಾತಿ ಮತ್ತು ವಾಲ್ಟೇರ್ ವೀರಯ್ಯ ಮುಂತಾದ ಚಲನಚಿತ್ರಗಳು ಜಾಗತಿಕವಾಗಿ ಹೊಸ ಪ್ರೇಕ್ಷಕರನ್ನು ತಲುಪಿವೆ.
ನೆಟ್‌ಫ್ಲಿಕ್ಸ್ ಇಂಡಿಯಾ ರಾಷ್ಟ್ರೀಯ ಮತ್ತು ಜಾಗತಿಕ ಹಂತಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇದರಲ್ಲಿ 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರು ವಿಭಾಗದಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ಪ್ರಶಸ್ತಿ ಪಡೆದಿದೆ. ದೆಹಲಿ ಕ್ರೈಮ್ S2 ಮತ್ತು ವೀರ್ ದಾಸ್: ಲ್ಯಾಂಡಿಂಗ್ ನಮ್ಮ ಸತತ ನಾಲ್ಕನೇ ಅಂತರರಾಷ್ಟ್ರೀಯ ಎಮ್ಮಿಗೆ ನಾಮಿನೇಟ್ ಆಗಿತ್ತು. ವೀರ್ ದಾಸ್ ಪ್ರಶಸ್ತಿ ಮುಡುಗೇರಿಸಿಕೊಂಡರು. ಸ್ಕೂಪ್ ಬುಸಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಎರಡು ಪ್ರತಿಷ್ಠಿತ ಏಷ್ಯಾ ಕಂಟೆಂಟ್ ಪ್ರಶಸ್ತಿಗಳನ್ನು ಪಡೆದಿದೆ.


Click it and Unblock the Notifications











