OTT Releases: 'ತೀರ್ಥರೂಪ ತಂದೆಯವರಿಗೆ' ಜೊತೆ ಈ ವಾರ ಓಟಿಟಿಗೆ ಬಂದ ಚಿತ್ರಗಳ ಪಟ್ಟಿ ; ನಿಮ್ಮ ಆಯ್ಕೆ ಯಾವುದು ?

ಕೊರೊನಾ ನಂತರ ಅಸಂಖ್ಯಾತ ಜನ ಓಟಿಟಿಗೆ ಶರಣಾಗಿದ್ದಾರೆ. ಪ್ರೇಕ್ಷಕರ ಈ ಬದಲಾದ ಅಭಿರುಚಿಗೆ ಅನುಗುಣವಾಗಿ ಚಿತ್ರರಂಗದವರು ಕೂಡ ಕೇವಲ ಓಟಿಟಿಯನ್ನೇ ಗಮನದಲ್ಲಿಟ್ಟಕೊಂಡು ಚಿತ್ರವನ್ನು ಮಾಡುತ್ತಿದ್ದಾರೆ. ಇನ್ನು ಇದರ ನಡುವೆ ಚಿತ್ರಮಂದಿರಗಳ ಸಮಸ್ಯೆ.. ಪ್ರದರ್ಶನದ ಸಂಖ್ಯೆ ಮತ್ತು ಸಮಯದಲ್ಲಿ ಮಾಡಲಾಗುವ ತಾರತಮ್ಯದಿಂದ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣಬೇಕಿದ್ದ ಚಿತ್ರಗಳು ಕೂಡ ಸೋಲುತ್ತಿವೆ. ಅಲ್ಲೊಂದು.. ಇಲ್ಲೊಂದು ಸಿನಿಮಾಗಳು ಮಾತ್ರ ಗೆಲ್ಲುತ್ತಿವೆ.

ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ. ಎಲ್ಲ ಭಾಷೆಗಳಲ್ಲಿ ಕೂಡ ಇದೇ ತರಹದ ವಾತಾವರಣ ಇದೆ. ಹೀಗಾಗಿಯೇ ಹಲವಾರು ಜನ ಚಿತ್ರಮಂದಿರದ ಬದಲು ನೇರವಾಗಿ ಓಟಿಟಿಯಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಸರಣಿಗಳ ಬೆನ್ನತ್ತಿದ್ದಾರೆ. ಹೀಗೆ ಬಿಡುಗಡೆ ಮಾಡಲಾದ ಕೆಲ ಚಿತ್ರಗಳಲ್ಲಿ ಅಥವಾ ವೆಬ್ ಸರಣಿಗಳಲ್ಲಿ ಕೆಲವು ಪ್ರೇಕ್ಷಕರ ಗಮನವನ್ನು ಸೆಳೆಯುತ್ತವೆ. ಗೆಲ್ಲುತ್ತವೆ. ಮತ್ತೂ ಕೆಲವು ಇಲ್ಲಿಯೂ ಕೂಡ ಸೋಲುತ್ತವೆ.

Your OTT Watchlist is Here Catch Theertharoopa Thandeyavarige and More New Titles Streaming This We

ಈ ವಾರ ಕೂಡ ಇದೇ ತರಹದ ಅದೃಷ್ಟ ಪರೀಕ್ಷೆಗೆ ಹಲವರು ಮುಂದಾಗಿದ್ದಾರೆ. ಹಾಗಿದ್ದರೆ ಈ ವಾರ ಬಿಡುಗಡೆಯಾದ ಚಿತ್ರಗಳು/ವೆಬ್ ಸರಣಿಗಳು ಯಾವುವು ? ಎಲ್ಲಿ ನೋಡಬಹುದು ? ಕನ್ನಡದ ಯಾವ ಚಿತ್ರ ಈ ವಾರ ಬಂದಿದೆ ? ಎಂದು ತಿಳಿಯಲು ಮುಂದೆ ಓದಿ.


1. ತೀರ್ಥರೂಪ ತಂದೆಯವರಿಗೆ

ಹೊಂದಿಸಿ ಬರೆಯಿರಿ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಚಿತ್ರ ತೀರ್ಥರೂಪ ತಂದೆಯವರಿಗೆ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿತ್ತು. ಅಬ್ಬರದ ಪ್ರಚಾರ ಇಲ್ಲದೇ ತೆರೆಗೆ ಬಂದ ಈ ಚಿತ್ರ ವಿಮರ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಅಂದುಕೊಂಡಂತೆ ಪ್ರೇಕ್ಷಕರಿಗೆ ಈ ಚಿತ್ರ ತಲುಪಲಿಲ್ಲ. ಆದರೂ ಕೂಡ ಚಿತ್ರಮಂದಿರಗಳಲ್ಲಿ ಈ ಚಿತ್ರ 25 ದಿನಗಳನ್ನು ಪೂರೈಸಿದ್ದು ಗಮನಿಸಬೇಕಾದ ಅಂಶ.

ಕನ್ನಡದವರಾದರೂ ಕೂಡ, ತೆಲುಗು ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಮನೆ ಮಾತಾದ ನಿಹಾರ್ ಮುಕೇಶ್ ಈ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದು ರಚನಾ ಇಂದರ್ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ವರ್ಷಗಳ ನಂತರ ಸಿತಾರ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದು ವಿಶೇಷ. ರಾಜೇಶ್ ನಟರಂಗ, ಸಿತಾರಾ, ರವೀಂದ್ರ ವಿಜಯ್, ಅಜಿತ್ ಹಂಡೆ ಸೇರಿದಂತೆ ಅನುಭವಿ ತಾರಾಬಳಗ ಚಿತ್ರದಲ್ಲಿದ್ದು ಈ ಚಿತ್ರ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಈ ಫೆಬ್ರವರಿ 20ರಿಂದ ಪ್ರಸಾರವಾಗುತ್ತಿದೆ.

2. ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ

ಕಳೆದ ವರ್ಷಾಂತ್ಯದಲ್ಲಿ ಮತ್ತು ಈ ವರ್ಷದ ಆರಂಭದಲ್ಲಿ ಹಲವು ಚಿತ್ರಗಳು ''ಧುರಂಧರ್'' ಅಲೆಯ ಎದುರು ಕೊಚ್ಚಿಕೊಂಡು ಹೋದವು. ಆ ಪೈಕಿ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಕೂಡ ಒಂದು. ಕರಣ್ ಜೋಹರ್ ನಿರ್ಮಾಣದ ಕಾರ್ತಿಕ್ ಆರ್ಯನ್ ಮತ್ತು ಅನನ್ಯ ಪಾಂಡೆ ಅಭಿನಯದ ಈ ಚಿತ್ರ ಕೂಡ ಓಟಿಟಿಯ ವೇದಿಕೆಗೆ ಬಂದಿದ್ದು ಫೆಬ್ರವರಿ 19ರಿಂದ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿದೆ.

3.ಕೆನಡಿ

ಪ್ರತಿಷ್ಟಿತ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದ ಅನುರಾಗ್ ಕಶ್ಯಪ್ ನಿರ್ದೇಶನದ ''ಕೆನಡಿ'' ಚಿತ್ರ ಕೂಡ ಓಟಿಟಿಗೆ ಬಂದಿದೆ. ರಾಹುಲ್ ಭಟ್, ಸನ್ನಿ ಲಿಯೋನ್ ಪ್ರಮುಖ ಪಾತ್ರದಲ್ಲಿದ್ದು ಭೂಗತ್ ಲೋಕ, ಮಾಜಿ ಪೊಲೀಸ್ ಅಧಿಕಾರಿ ಮತ್ತು ಕಾಂಟ್ರಾಕ್ಟ್ ಕಿಲ್ಲರ್ ಸುತ್ತ ಈ ಚಿತ್ರದ ಕಥಾನಕ ಸುತ್ತುತ್ತೆ. ಈ ಚಿತ್ರ ಜೀ5ನಲ್ಲಿ ಲಭ್ಯ ಇದ್ದು ಆಸಕ್ತ ಚಿತ್ರಪ್ರೇಮಿಗಳು ಮನೆಯಲ್ಲಿಯೇ ನೋಡಬಹುದು

ಇನ್ನುಳಿದ ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ

4.ಅಮೋಜ್ ಅಲೆಕ್ಸಾಂಡರ್ (ಮಲಯಾಳಂ) ಸನ್ ನೆಕ್ಸ್ಟ್

5.ಹಾಟ್‌ಸ್ಪಾಟ್ 2 ಮಚ್ (ತಮಿಳು) ಆಹಾ

6.ಶ್ರೀ ಚಿದಂಬರಂ ಗಾರು (ತೆಲುಗು) ETV ವಿನ್

7.ಲಕ್ಕಿ ದಿ ಸೂಪರ್‌ಸ್ಟಾರ್ (ತಮಿಳು) ಜಿಯೋ ಹಾಟ್ ಸ್ಟಾರ್

8.ಚಠಾ ಪಚಾ (ಮಲಯಾಳಂ)ನೆಟ್‌ಫ್ಲಿಕ್ಸ್

ಇಂಗ್ಲೀಷ್ ಸಿನಿಮಾಗಳ ಪಟ್ಟಿ

9.ಸೊಮ್ಮೋರ್: ಷ್ಯಾಂಡಲಿಯರ್ ಫ್ಲೈ (ನೆಟ್‌ಫ್ಲಿಕ್ಸ್)

10.28 ಇಯರ್ಸ್ ಲೇಟರ್: ದಿ ಬೋನ್ ಟೆಂಪಲ್ (ಅಮೆಜಾನ್ ಪ್ರೈಮ್)

11.ದಿ ಕೋರಲ್ (ಅಮೆಜಾನ್ ಪ್ರೈಮ್)

12.ಕಿಲ್ ಬಿಲ್: ದಿ ಹೋಲ್ ಬ್ಲಡಿ ಅಫೇರ್ (ಅಮೆಜಾನ್ ಪ್ರೈಮ್)

13. ಮರ್ಸಿ (ಅಮೆಜಾನ್ ಪ್ರೈಮ್)

14. ದಿ ಸ್ಪಾಂಜ್‌ಬಾಬ್ ಮೂವಿ: ಸರ್ಚ್ ಫಾರ್ ಸ್ಕ್ವೇರ್ ಪ್ಯಾಂಟ್ಸ್ (ಪ್ಯಾರಾಮೌಂಟ್+ )

15. ಅರ್ಚಿನ್ (ಹುಲು)

16. 56 ಡೇಸ್ (ಅಮೆಜಾನ್ ಪ್ರೈಮ್)

17. ಬೀಯಿಂಗ್ ಗಾರ್ಡನ್ ರಾಮ್ಸೆ (ನೆಟ್‌ಫ್ಲಿಕ್ಸ್)

18. ದಿ ನೈಟ್ ಏಜೆಂಟ್: ಸೀಸನ್ 3 (ನೆಟ್‌ಫ್ಲಿಕ್ಸ್)

19. ಡೆಡ್ ಆಫ್ ವಿಂಟರ್ (HBO ಮ್ಯಾಕ್ಸ್)

20. ಹೀಟೆಡ್ ರೈವಲ್ರಿ (ಲಯನ್ಸ್‌ಗೇಟ್ ಪ್ಲೇ )

21. ದಿ ಲಾಸ್ಟ್ ಥಿಂಗ್ ಹೀ ಟೋಲ್ಡ್ ಮೀ - ಸೀಸನ್ 2 ( ಆಪಲ್ ಟಿವಿ+)

More from Filmibeat

English summary
Weekend sorted! Watch the latest Kannada drama ‘Theertharoopa Thandeyavarige’ and more new movies on OTT. Your complete guide to this week's streaming hits is here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X