ತನ್ನ ಇಬ್ಬರು ಪತ್ನಿಯರ ಜೊತೆ ಬಿಗ್ ಬಾಸ್‌ ಮನೆ ಪ್ರವೇಶಿಸಿದ ಯೂಟ್ಯೂಬರ್‌ ...!

ಬಿಗ್‌ಬಾಸ್ ಎಂಬ ಕಾರ್ಯಕ್ರಮದ ಪ್ರತಿಯೊಂದು ಸೀಸನ್‌ನಲ್ಲಿಯೂ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ. ಈ ಬಾರಿಯ ಹಿಂದಿ ಬಿಗ್ ಬಾಸ್‌ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಜನರಿಂದ ತುಂಬಿ ತುಳುಕುತ್ತಿರುವ ಈ ಬಾರಿಯ ಬಿಗ್ ಬಾಸ್‌ ಮನೆಗೆ ಒಬ್ಬ ವ್ಯಕ್ತಿ ತಮ್ಮ ಇಬ್ಬರು ಪತ್ನಿಯರ ಜೊತೆ ಪ್ರವೇಶಿಸಿದ್ದಾರೆ.

ಹೌದು. ಅರ್ಮಾನ್ ಮಲ್ಲಿಕ್.. ಈ ಹಿಂದೆ ತನ್ನ ಇಬ್ಬರು ಪತ್ನಿಯರು ಗರ್ಭಿಣಿ ಆಗಿದ್ದಾರೆ ಎಂಬ ಸುದ್ದಿಯನ್ನ ಹಂಚಿಕೊಂಡು ಟ್ರೋಲ್ ಆಗಿದ್ದ ಯುಟ್ಯೂಬರ್. ಯೂಟ್ಯೂಬ್ ಮೂಲಕವೇ ಬದುಕು ಕಟ್ಟಿಕೊಂಡ ಹೈದರಾಬಾದ್‌ ಮೂಲದ ಅರ್ಮಾನ್ ಮಲಿಕ್ ತನ್ನ ಇಬ್ಬರು ಪತ್ನಿಯರಾದ ಪಾಯಲ್ ಮತ್ತು ಕೃತಿಕಾ ಜೊತೆ ಉಳಿದ 14ಜನಕ್ಕೆ ಸವಾಲು ಹಾಕುತ್ತಿದ್ದಾರೆ.

youtuber-armaan-malik-has-entered-bigg-boss-ott-3-with-his-two-wives-devoleena-slams-trio

ಆದರೆ.. ಅನೇಕರಿಗೆ ಬಿಗ್ ಬಾಸ್‌ನ ಈ ನಡೆ ಇಷ್ಟವಾಗಿಲ್ಲ. ಯಾಕೆಂದರೆ.. ಏಕ ಪತ್ನಿ ವೃತಸ್ತ ಅಲ್ಲ. ಇನ್ನೂ.. ಬಿಗ್‌ಬಾಸ್ ಶೋ ಎಂಬ ಹುಚ್ಚರ ಸಂತೆಯನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇನ್ನೂ ಕೆಲವೊಂದು ಸಾರಿ ಬಿಗ್ ಬಾಸ್ ಮನೆಯ ಕಾರ್ಯಕ್ರಮವನ್ನು ವಿಧಿಯಿಲ್ಲದೆ ನೋಡುವ ಸಂದರ್ಭ ಒದಗಿ ಬಿಡುತ್ತೆ. ಆಗ ಆ ದೊಡ್ಡ ಮನೆಯ ಸಣ್ಣ ಸಂಗತಿಗಳು ಸಮಾಜಕ್ಕೆ ಎಂತಹ ಮೆಸೇಜ್ ಕೊಡುತ್ತಿದೆ ಎಂಬ ಪ್ರಶ್ನೆಯೂ ಮೂಡುತ್ತೆ. ಆದರೂ ಬಿಗ್ ಬಾಸ್ ಜನಪ್ರಿಯ ಕಾರ್ಯಕ್ರಮ. ಚಿಕ್ಕವರಿಂದ ಹಿಡಿದು ದೊಡ್ಡವರು ಈ ದೊಡ್ಮನೆಯ ತಳ್ಳಾಟ, ಚೀರಾಟ, ಸಣ್ಣಾಟ, ದೊಡ್ಡಾಟ, ಬಯಲಾಟವನ್ನ ನೋಡುತ್ತಾರೆ.

ಹೀಗಾಗಿಯೇ ಅರ್ಮಾನ್ ಮಲ್ಲಿಕ್ ಮತ್ತು ಅವರ ಇಬ್ಬರು ಪತ್ನಿಯರ ಮೇಲೆ ಕೆಂಡ ಕಾರುತ್ತಿರುವ ಅನೇಕರು ಬಿಗ್ ಬಾಸ್‌ ಗೆ ಛೀಮಾರಿ ಹಾಕುತ್ತಿದ್ದಾರೆ. ಸಮಾಜಕ್ಕೆ ಬಹುಪತ್ನಿತ್ವದ ಸಂದೇಶವನ್ನ ಸಾರುವ ಕೆಲಸವನ್ನ ಬಿಗ್ ಬಾಸ್ ಮಾಡ್ತಿದೆ ಎಂಬ ಆರೋಪವನ್ನೂ ಮಾಡುತ್ತಿದ್ದಾರೆ.

youtuber-armaan-malik-has-entered-bigg-boss-ott-3-with-his-two-wives-devoleena-slams-trio

ಕೇವಲ ಜನಸಾಮಾನ್ಯರಷ್ಟೇ ಅಲ್ಲ ಕಿರುತೆರೆ ನಟಿ ಮತ್ತು ಈ ಹಿಂದೆ ಒಂದಲ್ಲ..ಎರಡಲ್ಲ.. ಮೂರು ಬಾರಿ ಬಿಗ್ ಬಾಸ್ ಮನೆಗೆ ಹೋಗಿದ್ದ ದೇವೋಲಿನಾ ಭಟ್ಟಾಚಾರ್ಜಿ ಕೂಡ ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಮನರಂಜನೆಯ ನೆಪದಲ್ಲಿ ಸಮಾಜದ ದಾರಿ ತಪ್ಪಿಸುವ ಕೆಲಸವನ್ನ ಬಿಗ್ ಬಾಸ್ ಮಾಡುತ್ತಿದೆ ಎಂದಿದ್ದಾರೆ.

ಅಂದ್ಹಾಗೇ ಫ್ಯಾಮಿಲಿ ಫಿಟ್ನೆಸ್ ಎಂಬ ಯೂಟ್ಯೂಬ್ ಮೂಲಕ ಜೀವನ ನಡೆಸುತ್ತಿರುವ ಅರ್ಮಾನ್ ಮಲ್ಲಿಕ್, 2011ರಲ್ಲಿ ಖಾಸಗಿ ಬ್ಯಾಂಕ್‌ ವೊಂದರಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಅದೇ ಬ್ಯಾಂಕ್‌ ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್‌ ಪರಿಚಯವಾಗಿ ಆ ನಂತರ ಇಬ್ಬರಲ್ಲಿ ಪ್ರೇಮಾಂಕುರವಾಗಿತ್ತು. ಇಬ್ಬರಿಗೆ ಚಿರಾಯ್ ಎಂಬ ಮಗ ಕೂಡ ಇದ್ದಾನೆ.

ಆದರೂ ಕೂಡ 2018ರಲ್ಲಿ ಅರ್ಮಾನ್ ಮಲ್ಲಿಕ್ ಮತ್ತೊಂದು ಮದುವೆ ಆದರು. ಮದುವೆಯಾದ ಹುಡುಗಿ ಕೃತಿಕಾ ಬೇರೆ ಯಾರು ಅಲ್ಲ ಬದಲಿಗೆ ಅರ್ಮಾನ್ ಮೊದಲ ಪತ್ನಿ ಪಾಯಲ್ ಅವರ ಸ್ನೇಹಿತೆ. ಕೃತಿಕಾ ಜೊತೆ ಆ ನಂತರ ಲವ್ವಲ್ಲಿ ಬಿದ್ದ ಅರ್ಮಾನ್, ಮೊದಲ ಪತ್ನಿ ಪಾಯಲ್ ಅವರ ಅಪ್ಪಣೆ ಪಡೆದು ಅವರ ಸಮ್ಮುಖದಲ್ಲಿಯೇ ಕೃತಿಕಾ ಅವರನ್ನು ಮದುವೆಯಾಗಿದ್ದರು.

More from Filmibeat

English summary
YouTuber Armaan Malik has entered Bigg Boss OTT 3 with his two wives, prompting Actress Devoleena Bhattacharjee to slam the trio.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X