ವಾರೆವ್ಹಾ ಕ್ರೇಜಿ ಅಪ್‌ಡೇಟ್: ಸದ್ದಿಲ್ಲದೇ ಬಾಲಿವುಡ್‌ಗೆ 'ಯುವರಾಜ್' ಎಂಟ್ರಿ ಆಗೇಬಿಡ್ತು
ಯುವರಾಜ್ ಕುಮಾರ್ ನಟನೆಯ 'ಯುವ' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಓಟಿಟಿಗೆ ಬಂದಮೇಲೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು 25 ದಿನ ಪೂರೈಸಿತ್ತು.
ಸದ್ಯ ರಾಘಣ್ಣ ಕಿರಿಮಗನ 2ನೇ ಸಿನಿಮಾ ಬಗ್ಗೆ ಚರ್ಚೆ ನಡೀತಿದೆ. ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮದಲ್ಲೇ ಹೊಸ ಸಿನಿಮಾ ಘೋಷಣೆ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. 'ಯುವ' ಸಕ್ಸಸ್ ಬಳಿಕ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಯಾವುದೂ ಫೈನಲ್ ಆಗಲಿಲ್ಲ. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲೂ ಸಿನಿಮಾ ನಿರ್ಮಾಣಕ್ಕೂ ಪ್ರಯತ್ನಿಸಲಾಗುತ್ತಿದೆ.

ಕನ್ನಡದಲ್ಲಿ ಯಾವುದೇ ಹೊಸ ನಟನಿಗೆ ಸಿಗದ ಅದ್ದೂರಿ ಓಪನಿಂಗ್ 'ಯುವ' ರಾಜ್‌ಕುಮಾರ್‌ಗೆ ಸಿಕ್ಕಿತ್ತು. ಸಿನಿಮಾ ಘೋಷಣೆ ಆದಾಗಲೇ ನಿರೀಕ್ಷೆ ಮೂಡಿತ್ತು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿತ್ತು. ಕಾಲೇಜ್ ಗ್ಯಾಂಗ್‌ವಾರ್ ಜೊತೆಗೆ ಫ್ಯಾಮಿಲಿ ಕಥೆ ಹೇಳಿ ಚಿತ್ರತಂಡ ಗೆದ್ದಿತ್ತು.
ಆಕ್ಷನ್, ಡ್ಯಾನ್ಸ್‌ನಲ್ಲಿ ಯುವ ರಾಜ್‌ಕುಮಾರ್ ಪರ್ಫಾರ್ಮನ್ಸ್ ಪ್ರೇಕ್ಷಕರ ಮನಗೆದ್ದಿತ್ತು. ದೊಡ್ಮನೆ ಅಭಿಮಾನಿಗಳಿಗೆ ಸಿನಿಮಾ ತುಂಬಾ ಇಷ್ಟವಾಗಿತ್ತು. ಸಪ್ತಮಿ ಗೌಡ ಚಿತ್ರದಲ್ಲಿ 'ಯುವ'ಗೆ ನಾಯಕಿ ಆಗಿದ್ದರು. ಅಚ್ಯುತ್ ಕುಮಾರ್, ಗೋಪಾಲ ದೇಶ್‌ಪಾಂಡೆ, ಸುಧಾರಾಣಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬಂದಿತತು.
ಅಜನೀಶ್ ಲೋಕನಾಥ್ ಸಂಗೀತ 'ಯುವ' ಚಿತ್ರಕ್ಕೆ ಪ್ಲಸ್ ಆಗಿತ್ತು. ಕುಸ್ತಿಪಟು ಆಗಿದ್ದ ಯುವ, ತಂದೆ ಜೊತೆ ಕೆಲ ಭಿನ್ನಾಭಿಪ್ರಾಯಗಳ ನಡುವೆ ಮಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುತ್ತಾನೆ. ಅಲ್ಲಿ ಹಾಸ್ಟೆಲ್ ಹುಡುಗರು, ಲೋಕಲ್ ಹುಡುಗರ ನಡುವೆ ಪದೇ ಪದೆ ತಿಕ್ಕಾಟ. ಹಾಸ್ಟೆಲ್ ಹುಡುಗರ ಪರ ಯುವ ನಿಲ್ಲುತ್ತಾನೆ. ಅದಕ್ಕಾಗಿ ಲೋಕಲ್ ಹುಡುಗರ ವೈಷಮ್ಯ ಕಟ್ಟಿಕೊಳ್ಳುತ್ತಾನೆ.
ಇಂಟರ್‌ವಲ್ ವೇಳೆಗೆ ಓದು ಮುಗಿಸಿ ಬೆಂಗಳೂರಿಗೆ ಬರುವ ಆತನಿಗೆ ದೊಡ್ಡ ಸಮಸ್ಯೆ ಎದುರಾಗಿರುತ್ತದೆ. ಮಗಳ ಮದುವೆಗೆ ತಂದೆ ಸಾಲ ಮಾಡಿ ಬಳಿಕ ನಾಪತ್ತೆ ಆಗಿರುತ್ತಾರೆ. ಅಲ್ಲಿಂದ ಮುಂದೆ ಯುವ ತಂದೆ ಹುಡುಕಾಟ ಆರಂಭಿಸುತ್ತಾನೆ. ಮನೆಯ ಪೋಷಣೆಗೆ ಡೆಲಿವರಿ ಬಾಯ್ ಆಗುತ್ತಾನೆ. ಕ್ಲೈಮ್ಯಾಕ್ಸ್ ವೇಳೆಗೆ ಮತ್ತೆ ಕುಸ್ತಿಪಟು ಆಗಿ ಅಖಾಡಕ್ಕೆ ಇಳಿಯುತ್ತಾನೆ. ಈ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು.
'ಯುವ' ಸಿನಿಮಾ ತೆರೆಗೆ ಬಂದು 21 ದಿನಕ್ಕೆ ಓಟಿಟಿಗೆ ಬಂದಿತ್ತು. ಅಮೇಜಾನ್ ಪ್ರೈಂನಲ್ಲಿ ಮೊದಲಿಗೆ ಬಾಡಿಗೆ ಪದ್ದತಿಯಲ್ಲಿ ಸಿನಿಮಾ ವೀಕ್ಷಣೆಗೆ ಸಿಕ್ಕಿತ್ತು. ಬಳಿಕ ಸಿನಿಮಾ ಎಲ್ಲಾ ಚಂದಾದಾರರಿಗೆ ಲಭ್ಯವಾಗಿತ್ತು. ಇನ್ನು ಸಿನಿಮಾ ಶುರುವಾದಾಗಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುತ್ತಾ? ಎನ್ನುವ ಚರ್ಚೆ ಶುರುವಾಗಿತ್ತು.

ಕನ್ನಡಕ್ಕಾಗಿ ಮಾಡಿರುವ ಸಿನಿಮಾ. ಮೊದಲು ಕನ್ನಡ ಪ್ರೇಕ್ಷಕರು ನೋಡಬೇಕು. ಆ ಬಳಿಕ ಬೇರೆ ಭಾಷೆಗಳಿಗೆ ಡಬ್ ಮಾಡುವ ಬಗ್ಗೆ ಚಿಂತಿಸುತ್ತೇವೆ ಎಂದು ಚಿತ್ರತಂಡ ಹೇಳಿತ್ತು. ಇದೀಗ ಸಿನಿಮಾ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಆಗಿದೆ. ಅಮೇಜಾನ್ ಪ್ರೈಂನಲ್ಲಿ ಸದ್ದಿಲ್ಲದೇ ಸ್ಟ್ರೀಮಿಂಗ್ ಆಗುತ್ತಿದೆ.
ತಮಿಳು ಹಾಗೂ ಮಲಯಾಳಂನಲ್ಲಿ 'ಯುವ' ಟೈಟಲ್‌ನಲ್ಲೇ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಹಿಂದಿ ಮತ್ತು ತೆಲುಗಿನಲ್ಲಿ 'ಯುವರಾಜ್' ಆಗಿ ವೀಕ್ಷಣೆಗೆ ಸಿಗುತ್ತಿದೆ. ಆ ಮೂಲಕ ಯುವರಾಜ್ ಕುಮಾರ್ ಬಾಲಿವುಡ್ ಪ್ರೇಕ್ಷಕರ ಮುಂದೆ ಕೂಡ ಹೋಗಿದ್ದಾರೆ.


Click it and Unblock the Notifications











