Yuva OTT: 'ಯುವ' ಓಟಿಟಿ, ಸ್ಯಾಟಲೈಟ್ ಭಾರೀ ಮೊತ್ತಕ್ಕೆ ಮಾರಾಟ; ಎಲ್ಲಿ ಸ್ಟ್ರೀಮಿಂಗ್?

ಸ್ಯಾಂಡಲ್‌ವುಡ್‌ ಅಂಗಳದಲ್ಲಿ 'ಯುವ' ಆರ್ಭಟ ಶುರುವಾಗಿದೆ. ಚಾಮರಾಜನಗರದಲ್ಲಿ ಬಿಡುಗಡೆಯಾದ ಚಿತ್ರದ ಫಸ್ಟ್ ಸಾಂಗ್ ಸಖತ್ ಸದ್ದು ಮಾಡ್ತಿದೆ. ಯುವ ಡ್ಯಾನ್ಸ್ ಝಲಕ್ ಹಾಗೂ ಸಂತೋಷ್‌ ಆನಂದ್‌ರಾಮ್ ಲಿರಿಕ್ಸ್ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ. ಎರಡು ದಿನದಲ್ಲಿ 3 ಮಿಲಿಯನ್‌ಗೂ ಅಧಿಕ ವೀವ್ಸ್ ಸಾಧಿಸಿ ದಾಖಲೆ ಬರೆದಿದೆ.

ಅಣ್ಣಾವ್ರ ಮೊಮ್ಮಗ ಯುವ ರಾಜ್‌ಕುಮಾರ್ ಚೊಚ್ಚಲ ಚಿತ್ರಕ್ಕೆ ಅಭಿಮಾನಿ ಬಳಗ ಕಾಯುತ್ತಿದೆ. ಮಾರ್ಚ್ 28ಕ್ಕೆ ಸಿನಿಮಾ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ಇನ್ನುಳಿದ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಲಿದೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರೀ ರಿಲೀಸ್ ಈವೆಂಟ್ ಮಾಡುವ ಲೆಕ್ಕಾಚಾರವೂ ನಡೀತಿದೆ. ಬಹಳ ದೊಡ್ಡಮಟ್ಟದಲ್ಲೇ ಹೊಂಬಾಳೆ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಚಿತ್ರದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.

Yuva On OTT When And Where To Watch YuvaRajkumar Starrer

ಚಾಮರಾಜನಗರದಲ್ಲಿ ಮೊದಲ ಹಾಡು ಬಿಡುಗಡೆ ಮಾಡಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಇನ್ನುಳಿದ ಹಾಡುಗಳನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಇದೆಲ್ಲದರ ನಡುವೆ 'ಯುವ' ಸಿನಿಮಾ ಓಟಿಟಿ ಹಾಗೂ ಸ್ಯಾಟಲೈಟ್ಸ್ ರೈಟ್ಸ್ ಯಾರಾ ಪಾಲಾಯ್ತು? ಯಾವ ಸ್ಮಾಲ್‌ ಸ್ಕ್ರೀನ್‌ಗೆ ಬರುತ್ತದೆ? ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ಮೊದಲೆಲ್ಲಾ ಥ್ರಿಯೇಟ್ರಿಕಲ್ ರೈಟ್ಸ್, ಡಬ್ಬಿಂಗ್, ರೀಮೆಕ್ಸ್ ರೈಟ್ಸ್‌, ಆಡಿಯೋ ರೈಟ್ಸ್ ಇಂದ ಮಾತ್ರ ನಿರ್ಮಾಪಕರಿಗೆ ಹಣ ಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ದೊಡ್ಡಮಟ್ಟದಲ್ಲಿ ಬ್ಯುಸಿನೆಸ್ ಮಾಡುತ್ತಿದೆ. ಅದೇ ಕಾರಣಕ್ಕೆ ದೊಡ್ಡ ಸಿನಿಮಾಗಳ ರೈಟ್ಸ್‌ಗಾಗಿ ಓಟಿಟಿ ಫ್ಲಾಟ್‌ಫಾರ್ಮ್‌ಗಳು, ಮನರಂಜನನೆ ವಾಹಿನಿಗಳು ಮುಗಿಬೀಳುತ್ತವೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿರುವ 'ಯುವ' ಸಿನಿಮಾ ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಈಗಾಗಲೇ ಬಿಕರಿಯಾಗಿದೆ.

ಕನ್ನಡದ ದೊಡ್ಡ ಸಿನಿಮಾಗಳನ್ನು ಅಮೇಜಾನ್ ಪ್ರೈಂ ಹೆಚ್ಚು ಸ್ಟ್ರೀಮಿಂಗ್ ಮಾಡುತ್ತಾ ಬರ್ತಿದೆ. ಹೊಂಬಾಳೆ ಸಂಸ್ಥೆಯ ಬಹುತೇಕ ಎಲ್ಲಾ ಸಿನಿಮಾಗಳು ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಿತ್ತು. 'ಯುವ' ಸಿನಿಮಾ ರೈಟ್ಸ್ ಕೂಡ ಅಮೇಜಾನ್ ಪಾಲಾಗಿದೆ ಎನ್ನುವುದು ಕೆಲವರ ಲೆಕ್ಕಾಚಾರ. ಇನ್ನು ಸ್ಯಾಟಲೈಟ್ ರೈಟ್ಸ್ ಸ್ಟಾರ್ ಸುವರ್ಣ ವಾಹಿನಿ ಪಾಲಾಗಿದೆ.

Yuva On OTT When And Where To Watch YuvaRajkumar Starrer

ಆನಂದ್ ಆಡಿಯೋ ಸಂಸ್ಥೆ ಅಂದಾಜು 3 ಕೋಟಿ ರೂ.ಗೆ 'ಯುವ' ಆಡಿಯೋ ರೈಟ್ಸ್‌ ಖರೀದಿಸಿದೆ ಎನ್ನುವ ಗುಸುಗುಸು ಇತ್ತೀಚೆಗೆ ಕೇಳಿಬಂದಿತ್ತು. ಯುವ ನಟನ ಮೊದಲ ಚಿತ್ರಕ್ಕೆ ಈ ಪಾಟಿ ಕ್ರೇಜ್ ಇದೇ ಮೊದಲು ಎನ್ನಲಾಗ್ತಿದೆ. ಹಾಗಾಗಿ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್‌ ಕೂಡ ಭಾರೀ ಮೊತ್ತಕ್ಕೆ ಬಿಕರಿಯಾಗಿರುವ ಸಾಧ್ಯತೆಯಿದೆ.

ಸಾಮಾನ್ಯವಾಗಿ ಥಿಯೇಟರ್‌ಗಳಲ್ಲಿ ಸಿನಿಮಾ ತೆರೆಕಂಡ 7 ವಾರಗಳ ಬಳಿಕ ಓಟಿಟಿ ಸ್ಟ್ರೀಮಿಂಗ್‌ಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. 'ಯುವ' ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ವಿಚಾರದಲ್ಲೂ ಇದೇ ರೀತಿಯ ಒಪ್ಪಂದ ಆಗಿರುವ ಸಾಧ್ಯತೆಯಿದೆ. ಆ ಲೆಕ್ಕದಲ್ಲಿ ಮಾರ್ಚ್ 28ಕ್ಕೆ ತೆರೆಗೆ ಬರುವ ಸಿನಿಮಾ ಮೇ ಮಧ್ಯಭಾಗದಲ್ಲಿ ಓಟಿಟಿಗೆ ಬರುವ ನಿರೀಕ್ಷೆಯಿದೆ. ಇತ್ತೀಚೆಗೆ ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿವೆ. ಹಾಗಾಗಿ ತಿಂಗಳಿಗೂ ಮುನ್ನ ಸಿನಿಮಾ ಸ್ಮಾಲ್‌ ಸ್ಕ್ರೀನ್‌ಗೆ ಬಂದರೂ ಅಚ್ಚರಿ ಪಡಬೇಕಿಲ್ಲ.

ರಾಘಣ್ಣನ ಕಿರಿಮಗ ಹೀರೊ ಆಗಲು ಬೇಕಾದ ಎಲ್ಲಾ ತಯಾರಿ ನಡೆಸಿ ಬಣ್ಣ ಹಚ್ಚಿದ್ದಾರೆ. ಅದರಲ್ಲೂ ಮುಖ್ಯವಾಗಿ ಡ್ಯಾನ್ಸ್ ಹಾಗೂ ಸ್ಟಂಟ್ಸ್ ವಿಚಾರದಲ್ಲಿ ಅಭಿಮಾನಿಗಳಿಗೆ ಭಾರೀ ನಿರೀಕ್ಷೆಯಿದೆ. ಶ್ರೀಶ ಕುದುವಳ್ಳಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ 'ಯುವ' ಚಿತ್ರಕ್ಕಿದೆ. ಅಚ್ಯುತ್‌ ಕುಮಾರ್, ಕಿಶೋರ್, ಪ್ರಕಾಶ್ ರಾಜ್ ಚಿತ್ರದ ತಾರಾಗಣದಲ್ಲಿದ್ದಾರೆ.

More from Filmibeat

English summary
Yuva film satellite and OTT rights sold for a whopping price?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X