Ekka OTT: ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಓಟಿಟಿ ಸ್ಟ್ರೀಮಿಂಗ್‌ನಲ್ಲಿ ಭಾರೀ ಬದಲಾವಣೆ

ರೋಹಿತ್ ಪದಕಿ ನಿರ್ದೇಶನದ 'ಎಕ್ಕ' ಸಿನಿಮಾ ತೆರೆಕಂಡು ಒಂದೂವರೆ ತಿಂಗಳು ಕಳೀತು. ಆ ಬಳಿಕ ತೆರೆಕಂಡ ಸಿನಿಮಾಗಳು ಓಟಿಟಿಗೆ ಬಂದರೂ ಯುವ ನಟಿಸಿದ ಸಿನಿಮಾ ಯಾಕೋ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸಲಿಲ್ಲ. ಈಗ ಬಂತು ಆಗ ಬಂತು ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಯಿತು. ಆದರೆ ನಿಜವಾಗಲೇ ಇಲ್ಲ.

ವರ್ಷದ ಬಹುನಿರೀಕ್ಷಿತ ಸಿನಿಮಾ ಎಂದೇ ಬಿಂಬಿಸಲಾಗಿದ್ದ 'ಎಕ್ಕ' ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಫಸ್ಟ್‌ ಹಾಫ್ ಸೂಪರ್ ಅನ್ನಿಸಿದ್ರು, ಸೆಕೆಂಡ್ ಹಾಫ್ ಸುಮಾರು ಎನಿಸಿಬಿಟ್ಟಿತ್ತು. ವರ್ಷದ ಆರೇಳು ತಿಂಗಳು ಯಾವುದೇ ಸಿನಿಮಾ ಗೆಲ್ಲದೇ ಸ್ಯಾಂಡಲ್‌ವುಡ್ ಸೊರಗಿತ್ತು. 'ಎಕ್ಕ' ತೆರೆಕಂಡು ಕೊಂಚ ಭರವಸೆ ಮೂಡಿಸಿತ್ತು. ಆದರೆ ಮರುವಾರವೇ ಬಂದ 'ಸು ಫ್ರಮ್ ಸೋ' ಎಲ್ಲರ ನಿರೀಕ್ಷೆ ಮೀರಿ ಗೆದ್ದುಬಿಡ್ತು. ಈ ಕಾಮಿಡಿ ಸಿನಿಮಾ ಆರ್ಭಟದ ನಡುವೆ 'ಎಕ್ಕ' ಸೈಲೆಂಟ್ ಆಗಿಬಿಟ್ಟ.

Yuva Rajkumar s Ekka Yet to Stream on OTT Despite Box Office Run Talks Ongoing

ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಗಳು ಒಟ್ಟಾಗಿ 'ಎಕ್ಕ' ಚಿತ್ರ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಬಿಡುಗಡೆಗೂ ಮುನ್ನ ಇದೇ ಕಾಂಬಿನೇಷನ್‌ನಲ್ಲಿ ಸೂರಿ ನಿರ್ದೇಶನದ ಸಿನಿಮಾ ಸೆಟ್ಟೇರಿತ್ತು. ಪುನೀತ್ ರಾಜ್‌ಕುಮಾರ್ ಹಾಗೂ ಸೂರಿ ಜೋಡಿಯ 'ಜಾಕಿ' ಸಿನಿಮಾ ಛಾಯೆ 'ಎಕ್ಕ' ಚಿತ್ರದಲ್ಲಿ ಅಲ್ಲಲ್ಲಿ ಕಂಡು ಬಂದಿತ್ತು. ಅದನ್ನೆಲ್ಲಾ ಮೀರಿ ಸಿನಿಮಾ ಅಭಿಮಾನಿಗಳ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿತ್ತು. ಆದರೂ ದೊಡ್ಡದಾಗಿ ಸದ್ದು ಮಾಡಲು ಬೇಕಾದ ಬಲ ಇರಲಿಲ್ಲ.

ಯುವ ರಾಜ್‌ಕುಮಾರ್ ಜೊತೆ ಸಂಜನಾ ಆನಂದ್ ಹಾಗು ಸಂಪದಾ ನಾಯಕಿಯರಾಗಿ ಮಿಂಚಿದ್ದರು. ಶ್ರುತಿ, ಅತುಲ್ ಕುಲಕರ್ಣಿ, ಸಾಧುಕೋಕಿಲ ಸೇರಿ ಅನುಭವಿ ಕಲಾವಿದರು ಚಿತ್ರದಲ್ಲಿದ್ದರು. ಸತ್ಯಾ ಹೆಗಡೆ ಛಾಯಾಗ್ರಹಣ ಹಾಗೂ ಚರಣ್ ರಾಜ್ ಸಂಗೀತ ಚಿತ್ರಕ್ಕಿದೆ. ಬ್ಯಾಂಗಲ್ ಬಂಗಾರಿ ಸಾಂಗ್ ಹಿಟ್ ಆಗಿ ಚಿತ್ರಕ್ಕೆ ಪ್ಲಸ್ ಆಗಿತ್ತು. ಒಳ್ಳೆ ಓಪನಿಂಗ್ ಸಿಕ್ಕರೂ ಬಳಿಕ ಸಿನಿಮಾ ಹಿಡಿತ ಕಳೆದುಕೊಂಡಿತ್ತು. ಸಾಕಷ್ಟು ಜನ ಓಟಿಟಿಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ.

Yuva Rajkumar s Ekka Yet to Stream on OTT Despite Box Office Run Talks Ongoing

ಜೀ ಸಂಸ್ಥೆಗೆ 'ಎಕ್ಕ' ಚಿತ್ರದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾರಾಟ ಆಗಿದೆ ಎನ್ನುವ ಊಹಾಪೋಹ ಇತ್ತು. ಅದೆಲ್ಲಾ ಸುಳ್ಳು ಎಂದು ಚಿತ್ರತಂಡದ ಆಪ್ತ ಮೂಲಗಳಿಂದಲೇ ಮಾಹಿತಿ ಲಭ್ಯವಾಗಿದೆ. ಜೀ ಸಂಸ್ಥೆಗೆ ರೈಟ್ಸ್ ಮಾರಾಟವಾಗಿಲ್ಲ, ಬೇರೆ ಓಟಿಟಿ ಸಂಸ್ಥೆಗಳ ಜೊತೆ ಚರ್ಚೆ ನಡೀತಿದೆ. ಶೀಘ್ರದಲ್ಲೇ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭಿಸುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಮೇಜಾನ್ ಪ್ರೈಂ ವೀಡಿಯೋ ಅಥವಾ ಸನ್‌ ನೆಕ್ಸ್ಟ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆದರೂ ಅಚ್ಚರಿ ಪಡಬೇಕಿಲ್ಲ.

ದುನಿಯಾ ಸೂರಿ ಹಾಗೂ ಯುವ ರಾಜ್‌ಕುಮಾರ್ ಜೋಡಿಯ ಸಿನಿಮಾ ನಿಂತೇ ಹೋಯ್ತು ಎನ್ನುವ ಗುಸುಗುಸು ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೀತಿದೆ. ಅದು ಕೂಡ ಸುಳ್ಳು ಎನ್ನಲಾಗ್ತಿದೆ. ಸಿನಿಮಾ ಬಗ್ಗೆ ಮಾತುಕತೆ ನಡೀತಿದೆ. ಆದಷ್ಟು ಬೇಗ ಚಿತ್ರೀಕರಣ ಆರಂಭಿಸುತ್ತಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಪಾರ್ವತಿಪುರದ ಮುತ್ತು ಸಾಲ ತೀರಿಸಲು ಬೆಂಗಳೂರಿಗೆ ಬಂದು ಕ್ಯಾಬ್ ಡ್ರೈವರ್ ಕೆಲಸ ಮಾಡುವಂತಾಗುತ್ತದೆ. ಗ್ಯಾಂಗ್‌ಸ್ಟರ್ ಒಬ್ಬನ ಜೀವ ಉಳಿಸಲು ಹೋಗಿ ತಾನೇ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾನೆ. ನಿಧಾನವಾಗಿ ತನಗೆ ಗೊತ್ತಿಲ್ಲದೇ ಭೂಗತಲೋಕಕ್ಕೆ ಎಂಟ್ರಿ ಕೊಡುತ್ತಾನೆ. ಮುಂದೆ ಪಾತಕಲೋಕ ಅವನನ್ನು ಎಲ್ಲಿಂದ ಎಲ್ಲೆಲ್ಲಿಗೆ ಕರೆದುಕೊಂಡು ಹೋಗುತ್ತದೆ ಎನ್ನುವುದೇ 'ಎಕ್ಕ' ಸಿನಿಮಾ ಕಥೆ. ಸಿನಿಮಾ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.

More from Filmibeat

English summary
Rohit Padaki’s Ekka, starring Yuva Rajkumar, is still awaiting its OTT release
Read more about: ekka yuva rajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X