For Quick Alerts
  ALLOW NOTIFICATIONS  
  For Daily Alerts

  ಸುಗ್ರೀವ: ಉಫ್...ಶಿವಣ್ಣ ಬರೀ ಕಲಾವಿದನಲ್ಲ!

  By *ಕಲಗಾರು, ದೇವಶೆಟ್ಟಿ
  |

  ಹದಿನೆಂಟು ಗಂಟೆಗಳಲ್ಲಿ ಇದನ್ನು ನಿರ್ಮಿಸಿದ್ದಾರಾ ಎಂದು ನೋಡನೋಡುತ್ತಲೇ ನಿಮಗೆ ಅಚ್ಚರಿಯಾಗುತ್ತದೆ. ಬೆರಗು ಮೂಡಿಸುತ್ತದೆ. ಬಹುತೇಕ ಒಂದು ಆಸ್ಪತ್ರೆಯಲ್ಲೇ ಕತೆ ನಡೆದರೂ ಅದು ಅರಿವಿಗೆ ಬಾರದಂತೆ ಚಿತ್ರಕತೆ ಮುಂದೆ ಹೋಗುತ್ತದೆ. ಅದಕ್ಕೆ ಸೆಂಟಿಮೆಂಟ್ ಮತ್ತು ಒಂಥರಾಭಾವನಾತ್ಮಕ ಕ್ರಾಂತಿ ಕಾರಣವಾಗುತ್ತದೆ.

  ಎಲ್ಲರ ಅಭಿನಯ ಸಾಥ್ ನೀಡುತ್ತದೆ. ಮನಸು ಮಂದಾರವಾಗುತ್ತದೆ. ಹತ್ತು ನಿರ್ದೇಶಕರು ಹದಿನೆಂಟು ಗಂಟೆಗಳಲ್ಲಿ ಕೆಲಸ ಮಾಡಿದ್ದಾರೊ...ಅಥವಾ ಒಂದು ತಿಂಗಳು ಇದಕ್ಕೆ ದುಡಿದಿದ್ದಾರೊ ಎಂದು ನಿಮಗೆ ಅನ್ನಿಸುವುದೇ ಈ ಚಿತ್ರದ ಗೆಲುವಿಗೆ ಮುನ್ನುಡಿ ಬರೆಯುತ್ತದೆ. ಸಂಗೀತ, ಸಂಭಾಷಣೆಕತೆಯನ್ನು ಎತ್ತಿ ಹಿಡಿಯುತ್ತವೆ. ಕ್ಯಾಮೆರಾ ಕೆಲಸ ಮುದ ನೀಡುತ್ತದೆ.

  ಅಪ್ಪ ಮಗನ ಪ್ರೀತಿಯ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆಯುತ್ತದೆ. ಎಲ್ಲದಕ್ಕೂ ಕಳಸ ಇಟ್ಟಂತೆ ಕಾಣುವುದು ಶಿವಣ್ಣನ ಅಭಿನಯ. ಮೊದಲಿಂದ ಕೊನೇವರೆಗೂ ಅವರೇ ತೆರೆ ಮೇಲೆ ಕಾಣಿಸುತ್ತಾರೆ. ಇಡೀ ಚಿತ್ರವನ್ನು ಏಕಾಂಗಿಯಾಗಿ ಹೊತ್ತು ಗೆಲ್ಲಿಸಿದ್ದಾರೆ. ಸತತವಾಗಿ ಹದಿನೆಂಟು ಗಂಟೆ ವಿಶ್ರಾಂತಿ ಪಡೆಯದೇ ಅಭಿನಯಿಸಿದ್ದು, ಅಷ್ಟೊಂದು ಭಿನ್ನ ಭಾವನೆಗಳನ್ನು ಅಷ್ಟೇ ಸಮಯದಲ್ಲಿ ಕರಾರುವಕ್ಕಾಗಿ ವ್ಯಕ್ತಪಡಿಸಿದ್ದು...ಉಫ್...ಶಿವಣ್ಣ...ಬರೀ ಕಲಾವಿದನಲ್ಲ...ಎನರ್ಜಿ ಇರುವ ಕಲಾವಿದ ಎಂದು ಎಲ್ಲರೂ ಒಪ್ಪಬೇಕು.

  ಕೊನೇ ಮಾತು: ಮನೆ ಮಂದಿಯೆಲ್ಲಾ ನೋಡಿ ಬನ್ನಿ...ನಿಮ್ಮ ಮಕ್ಕಳ ಬಗ್ಗೆ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ...(ಸ್ನೇಹಸೇತು: ವಿಜಯ ಕರ್ನಾಟಕ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X