»   » ವರ್ಷಧಾರೆ ತಕ್ಕಮಟ್ಟಿಗೆ ಹರ್ಷಧಾರೆ

ವರ್ಷಧಾರೆ ತಕ್ಕಮಟ್ಟಿಗೆ ಹರ್ಷಧಾರೆ

By: *ಕಲಗಾರು, ದೇವಶೆಟ್ಟಿ
Subscribe to Filmibeat Kannada

ಒಂದೇ ಏಟಿಗೆ ನೋಡಿಬಿಡುವುದಾದರೆ ವರ್ಷಧಾರೆ ನಿಜಕ್ಕೂ ಚೆನ್ನಾಗಿದೆ. ತಾಳ್ಮೆಯಿಂದ, ವ್ಯವಸ್ಥಿತ ರೀತಿಯಲ್ಲಿ ನೋಡುವುದಾರೆ ಕುಂಬಾರನಿಗೆ 'ವರ್ಷ', ದೊಣ್ಣೆನಾಯಕನಿಗೆ ನಿಮಿಷ! ತಿಂಗಳ ಹಿಂದಷ್ಟೇ ಬಂದ ವೇಮಗಲ್ ಜಗನ್ನಾಥ್ ನಿರ್ದೇಶನದ 'ಭಯಡಾಟ್ ಕಾಮ್' ಚಿತ್ರಕ್ಕೆ ಹೋಲಿಸಿದರೆ ವರ್ಷಧಾರೆ ತಕ್ಕಮಟ್ಟಿಗೆ ಹರ್ಷಧಾರೆ.

ಹಾಗಂತ ವರ್ಷ ಓಡುವ ಚಿತ್ರ ಎಂದರೆ ತಪ್ಪಾಗುತ್ತೆ. ಯುವಕನೊಬ್ಬ ತನ್ನ ಗುರಿ ಸಾಧಿಸಿದನಂತರವೇ ಮದುವೆಯಾಗಬೇಕೆಂಬ ಉದ್ದೇಶದಿಂದ ದಿನವನ್ನು ಹಾಗೇ ಸುಮ್ಮನೆ ತಳ್ಳುತ್ತಿರುತ್ತಾನೆ. ಆದರೆ ಆತನ ಪ್ರೇಯಸಿಯ ಚಿಂತನೆಯೇ ಬೇರೆಯಾಗಿರುತ್ತದೆ. ಬೆಂಕಿ ಪಕ್ಕ ತುಪ್ಪ ಇಟ್ಟರೆ ಕರಗದಿದ್ದೀತೇ?

ಮಾಮೂಲಿ ಕತೆ. ನೋಡುತ್ತಾ ನೋಡುತ್ತಾ ಬೋರ್ ಹೊಡೆಸುತ್ತದೆ ಎನ್ನುವ ಹೊತ್ತಿಗೆ ಎಲ್ಲೋ ಒಂದು ಕಡೆ ಮನಸ್ಸಿಗೆ ಹಿಡಿಸುತ್ತದೆ. ಸೂರಜ್ ಸುಮಾರಾಗಿ ಅಭಿನಯಿಸಿದ್ದಾರೆ. ವಿಲನ್ ಶೇಡ್‌ಗೆ ಒಪ್ಪುತ್ತಾರೆ. ಸಂಗೀತಾ ಶೆಟ್ರದ್ದು ಮಾದಕತೆ, ಅದೇ ಕತೆ, ಅದೇ ವ್ಯಥೆ. ಉಳಿದಂತೆ ಪೋಷಕ ಪಾತ್ರಗಳಿಗೆ ಹೆಚ್ಚು ಒತ್ತು ಕೊಟ್ಟಿಲ್ಲ. ದ್ವಿತಿಯಾರ್ಧದಲ್ಲಿ ಕೆಲ ಸನ್ನಿವೇಶಗಳು 'ಏ'ತ ನೀರಾವರಿ 'ಕಾಮ'ಗಾರಿಯನ್ನು ಹೈ ಲೈಟ್ ಮಾಡುತ್ತವೆ !(ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada