‘ಸಿಂಹಾದ್ರಿಯ ಸಿಂಹ’ ಮತ್ತು ‘ಜಮೀನ್ದಾರ್ರು’ ಚಿತ್ರಗಳ ಮುಂದುವರಿದ ಭಾಗದಂತೆ ಕಾಣುವ ‘ರಾಜ ನರಸಿಂಹ’ದಲ್ಲಿ ತೆಲುಗಿನ ಛಾಯೆ ದಟ್ಟವಾಗಿದೆ.
ಮುಖಪುಟ --> ಸ್ಯಾಂಡಲ್‌ವುಡ್ -->ನಾವು ನೋಡಿದ ಚಿತ್ರ -->ಚಿತ್ರ ವಿಮರ್ಶೆಮಾರ್ಚ್ 01, 2003‘ಇಡೀ ನಾಡನ್ನೇ ರಕ್ಷಿಸುವ ಪೊಲೀಸರನ್ನು ಯಾರು ರಕ್ಷಿಸಬೇಕು’ ಇದು ಚಿತ್ರದ ಒನ್‌ಲೈನ್ ಸ್ಟೋರಿ. ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಕೆಲಸದಲ್ಲಿ ಕಡ್ಡಿಯಾಡಿಸುವ ರಾಜಕಾರಣಿಗಳು ಇರುವತನಕ ನಾಡು ಉದ್ಧಾರವಾಗುವುದಿಲ್ಲ ಅನ್ನೋದು ಇಲ್ಲಿಯ ತಿರುಳು. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಪೊಲೀಸರ ಜೀವದ ಬೆಲೆ ಕೇವಲ ಎರಡು ಬುಲೆಟ್ಟು ಅನ್ನುವುದು ಅರಗಿಸಿಕೊಳ್ಳಲಾಗದ ವಾಸ್ತವ. ಬಹುಶಃ ಮೊದಲ ಬಾರಿ ಪೊಲೀಸರ ನೋವು, ಅಸಹಾಯಕತೆ, ವೈಯಕ್ತಿಕ ಬದುಕು, ಅವಮಾನವನ್ನು ಇಲ್ಲಿ ಕಾಣಬಹುದು. ಇಷ್ಟರಮಟ್ಟಿಗೆ ಈ ಚಿತ್ರದಲ್ಲಿ ಹೊಸತನವಿದೆ.
ಖಾಕಿ ತೊಡುವವರು ಮದುವೆ ಆಗಬಾರದೆನ್ನುವ ನಿಯಮ ಮಾಡಬೇಕೆನ್ನೋದು ಕೊಂಚ ಅತಿರೇಕ ಅನ್ನಿಸಿದರೂ ಬದುಕಿಗೆ ಹತ್ತಿರವೆನ್ನಿಸುತ್ತದೆ. ಪೊಲೀಸರ ಬದುಕಿನ ಹೊಸಮುಖದಿಂದಲೇ ಚಿತ್ರ ಸಹ್ಯವಾಗುತ್ತದೆ.
ಮಾಮೂಲಿ ಸೆಂಟಿಮೆಂಟು ಎಲ್ಲೂ ಹಳಿ ತಪ್ಪಿಲ್ಲ . ಕೆಲವು ಅಗತ್ಯ ಶಾಟ್‌ಗಳು, ಧುತ್ತೆಂದು ಪ್ರತ್ಯಕ್ಷವಾಗುವ ಪಾತ್ರಗಳು, ಎಲ್ಲೋ ಹುಟ್ಟುವ ದೃಶ್ಯಗಳು ಅಡ್ಡಗಾಲು ಹಾಕುತ್ತವೆ. ಹಾಗೆಯೇ ಮಚ್ಚುಗಳನ್ನು ಎಣಿಸಿ ಬಳಸಿದ್ದು ಸಮಾಧಾನ. ರಕ್ತ ಹರಿಸುವಲ್ಲಿ ಜಿಪುಣತನ ತೋರಿಸಿದ್ದು ನಿರ್ದೇಶಕರ ಜಾಣತನ. ಆದರೆ ಅಫ್ಟ್ರಾಲ್ ಒಬ್ಬ ಎಸಿಪಿ ಮಾತಿಗೆ ಮರುಳಾಗಿ ಮುಖ್ಯಮಂತ್ರಿಯಾಬ್ಬ ಜುಬ್ಬಾ ಬಿಚ್ಚಿ ನಿಲ್ಲೋದು ಭೂಲೋಕದಲ್ಲಂತೂ ನಡೆಯಲು ಸಾಧ್ಯವಿಲ್ಲ ಮಾರಾಯ್ರೇ.
ಸಾಯಿಕುಮಾರ್ ಸಂಭಾಷಣೆ ಗ್ರಾಂಥಿಕವೆನಿಸುತ್ತದೆ. ಉಳಿದವರು ಕನ್ನಡದವರಾದ್ದರಿಂದ ಹೊಂದಿಸಿಕೊಂಡು ಮಾತುಗಳನ್ನು ಆಡಿದ್ದಾರೆ. ಸಿ.ಡಿ.ರಾಜು ಛಾಯಾಗ್ರಹಣ ‘ಬೆಂಗಳೂರು ಬಂದ್’ ದೃಶ್ಯಗಳನ್ನು ಅಚ್ಚುಕಟ್ಟಾಗಿ ಸೆರೆ ಹಿಡಿದಿದೆ.
ಸಾಯಿಕುಮಾರ್ ಎಂದಿನಂತೆ ಉದ್ದುದ್ದ ಡೈಲಾಗು ಹೇಲುವಲ್ಲಿ ತೃಪ್ತಿ ಕಂಡಿದ್ದಾರೆ. ಸಾವಿರದಾ ಎಂಟೂವರೆ ಸಲ ಅದೇ ಖಾಕಿ ಡ್ರೆೃಸ್ಸಿನಲ್ಲಿ ಕಾಣಿಸಿಕೊಂಡರೆ ಯಾವ ಭಾವನೆ ಹುಟ್ಟಿಸಲು ಸಾಧ್ಯ? ಅನಂತನಾಗ್, ದೊಡ್ಡಣ್ಣ ಮಿಂಚಿದ್ದಾರೆ. ಅವಿನಾಶ್, ಚಿತ್ರಾ ಶೆಣೈ ಪರವಾಗಿಲ್ಲ . ನಿರ್ದೇಶಕ ಟೇಶಿ ವೆಂಕಟೇಶ್ ಅರೆಪಾವಿನಷ್ಟಾದರೂ ಭರವಸೆ ಹುಟ್ಟಿಸಿದ್ದಾರೆ. ಹನಿ ನೀರಿನಷ್ಟು ಕಲಿತಿದ್ದಾರೆ. ಸಾಗರದಷ್ಟು ಕಲಿಯಬೇಕಿದೆ.
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications











