»   » ಹುಬ್ಬಳ್ಳಿಯ ಮೂರು ಸಾವಿರ ಮಠದ ವೈಭವ, ತೆಳ್ಳಗಾಗಿರುವ ದಾಮಿನಿ, ಬಿಸಿ ಬಿಸಿ ಯೋಚನೆಗಳ ಬಿ.ಸಿ.ಪಾಟೀಲರ ನಿರ್ದೇಶನ ಮತ್ತು ಪ್ರಾಮಾಣಿಕ ನಟನೆಯ ಪ್ರಯತ್ನ - ಸಿನಿಮಾ ನೋಡಲು ಇಷ್ಟು ಸಾಕೆ?

ಹುಬ್ಬಳ್ಳಿಯ ಮೂರು ಸಾವಿರ ಮಠದ ವೈಭವ, ತೆಳ್ಳಗಾಗಿರುವ ದಾಮಿನಿ, ಬಿಸಿ ಬಿಸಿ ಯೋಚನೆಗಳ ಬಿ.ಸಿ.ಪಾಟೀಲರ ನಿರ್ದೇಶನ ಮತ್ತು ಪ್ರಾಮಾಣಿಕ ನಟನೆಯ ಪ್ರಯತ್ನ - ಸಿನಿಮಾ ನೋಡಲು ಇಷ್ಟು ಸಾಕೆ?

Subscribe to Filmibeat Kannada

ದ್ವಿಪಾತ್ರಗಳಲ್ಲಿ ನಟಿಸಿರುವ ಪಾಟೀಲರು ಆ್ಯಕ್ಷನ್‌ ದೃಶ್ಯಗಳಲ್ಲಿ ಸಹಜವಾಗಿ ಮಿಂಚಿದ್ದಾರೆ. ಕೆಲವೆಡೆ ಅತಿ ಗಾಂಭೀರ್ಯ ತೋರಿಸಿದ್ದು ತಪ್ಪು. ನಿರ್ದೇಶಕರು ಅವರೇ ಆಗಿರುವುದರಿಂದ ಹೊಸ ವಿಚಾರಗಳಿಗೆ ಹೊಸ ನಿರೂಪಣೆಗೆ ಯತ್ನಿಸಿದ್ದಾರೆ. ಹೊಸತನ ಹೇಗಿರಬೇಕೆಂಬುದಕ್ಕೆ ಸೋದರ ಅಶೋಕ ಪಾಟೀಲರ ಸಲಹೆ ಪಡೆದಿದ್ದರೆ ಚೆನ್ನಾಗಿತ್ತು .

ಸಿಕ್ಕ ಅವಕಾಶವನ್ನು ಬಳಸಿಕೊಂಡು ನೆನಪಿನಲ್ಲಿ ಉಳಿಯುವುದು ಸಾಂಘವಿ. ಸ್ಮಾರ್ಟ್‌ ವಿಲನ್‌ ವಿನಯ್‌ ಕುಲಕರ್ಣಿ ಸ್ವಲ್ಪ ಕಷ್ಟಪಟ್ಟರೆ ಖಳನಾಯಕನ ಸ್ಥಾನ ತುಂಬಬಹುದು. ನಿದ್ದೆಗಣ್ಣಲ್ಲಿ ಸಂಕಲನಕಾರ ಕತ್ತರಿ ಎತ್ತಿಕೊಂಡದ್ದು ಕ್ರಿಮಿನಲ್‌ ಅಪರಾಧ.

ಹುಬ್ಬಳ್ಳಿಯ ಮೂರು ಸಾವಿರ ಮಠದ ವೈಭವ ಕತೆಗೆ ಪೂರಕವಾಗಿದೆ. ಇಡೀ ಚಿತ್ರ ರೂಪಿಸಲು ಪಾಟೀಲರು ಕಷ್ಟಪಟ್ಟಿದ್ದಾರೆ. ಪರಿಶ್ರಮಪಟ್ಟು ಒಂದು ಹಾಡನ್ನು ಹಾಡಿದ್ದಾರೆ. ಹೊರಬಂದಿರುವ ಪ್ರೊಡಕ್ಟ್‌ ಹೇಗಿದೆ ಅನ್ನುವುದರ ಜೊತೆಗೆ ಪಟ್ಟಪಾಡನ್ನೂ ನೆನಪಿಡಬೇಕು.

ಆಕಾಶದಲ್ಲೇ ನಿಂತು ಹನ್ನೆರೂಡುವರೆ ಸಲ ಒದೆಯುವ ಇಬ್ಬಿಬ್ಬರು ಪಾಟೀಲರು ಸ್ಟಂಟ್‌ಪ್ರಿಯರಿಗೆ ಖುಷಿ ಕೊಡಬಹುದು. ಹೆಂಗಳೆಯರ ಕರುಳು ಮೀಟಲೆಂದೇ ಪ್ರಮೀಳಾ ಜೋಷಾಯ್‌ ಪ್ರಲಾಪವಿದೆ. ಪಡ್ಡೆ ಹೈಕಳಿಗೆ ಬಸಿಬಿಸಿ ದಾಮಿನಿ ಇದ್ದಾಳೆ. ಎಲ್ಲವನ್ನೂ ಒಂದೇ ತಾಟಿನಲ್ಲಿ ಹಾಕಿಡಲಾಗಿದೆ. ಆರಿಸಿ ತಿನ್ನುವುದಷ್ಟೇ ನಿಮ್ಮ ಕೆಲಸ.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada