For Quick Alerts
  ALLOW NOTIFICATIONS  
  For Daily Alerts

  ‘ಪ್ರೀತಿನಾ ಪ್ರೀತಿಯಿಂದ ಪ್ರೀತಿಸಿ...’ ನಲ್ಲ ನ ಮಾತು !

  By Staff
  |

  ನಲ್ಲ ಚಿತ್ರ ಒಂದು ಲವ್‌ ಸ್ಟೋರಿ. ಸುದೀಪ ನಾಯಕ ನಟರಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಭಿನ್ನವಾಗಿರುವುದು ಮಿತವಾದ ಹಾಸ್ಯ, ನಾಯಕನ ಸಾಂಗತ್ಯ, ಸಾಹಸ ಪ್ರಿಯರಿಗಾಗಿ ಒಂದಿಷ್ಟು ಪೈಟ್‌, ಫ್ಯಾಮಿಲಿ ಆಡಿಯನ್ಸ್‌ಗಾಗಿ ಕೊಂಚ ಸೆಂಟಿಮೆಂಟ್‌, ಜೊತೆಗೆ ವೆಂಕಟ್‌ ನಾರಾಯಣ್‌ರವರ ನಿರ್ದೇಶನದ ಸಂಗೀತ. ಕೆ.ಸಿ.ಎನ್‌.ಪ್ರೊಡಕ್ಷನ್‌ ಲಾಂಛನದಲ್ಲಿ ನಿರ್ಮಾಣಗೊಂಡ ನಲ್ಲ , ಇಷ್ಟು ದಿನ ಸಾಹಿತಿಯಾಗಿ, ಬರಹಗಾರರಾಗಿ ಪರಿಚಿತರಾಗಿದ್ದ ವಿ.ನಾಗೇಂದ್ರ ಪ್ರಸಾದ್‌ ಅವರ ಮೊದಲ ನಿರ್ದೇಶನದ ಚಿತ್ರವಾಗಿದೆ. ಸುದೀಪ ನಾಯಕ ನಟರಾಗಿದ್ದರೆ, ಅವರಿಗೆ ನಾಯಕಿ ಪಿತಾಮಗನ್‌ ಖ್ಯಾತಿಯ ಸಂಗೀತಾ.

  ನಾಯಕ ಪ್ರಶಾಂತ್‌(ಸುದೀಪ್‌) ಹಾಗೂ ನಾಯಕಿ ಪ್ರೀತಿ (ಸಂಗೀತಾ) ಇವರಿಬ್ಬರಿನ ನಡುವಿನ ಸುತ್ತ ಕಥೆ ಹೆಣೆಯಲಾಗಿದೆ. ಮಾನಸಿಕವಾಗಿ ಪ್ರಭುದ್ಧಳಲ್ಲದ ಪ್ರೀತಿ ಅಚಾನಕ್ಕಾಗಿ ಕಾರ್‌ ಮೆಕ್ಯಾನಿಕ್‌ ಪ್ರಶಾಂತನ ಕಾರಿನಲ್ಲಿ ಕಾಣಿಸಿಕೊಳ್ಳುತ್ತಾಳೆ. ಕಾರಣಾಂತರಗಳಿಂದ ಆಕೆಗೆ ಆಶ್ರಯ ನೀಡಿ, ಆಕೆಯ ಮನೆಯವರನ್ನು ಹುಡುಕಿಸುವ ಪ್ರಶಾಂತನ ಪ್ರಯತ್ನ ಒಂದೆಡೆಯಾದರೆ, ಇನ್ನೊಂದೆಡೆ ಆತನಲ್ಲಿನ ಮಾನವೀಯತೆ ಪ್ರೀತಿಗೆ ಚಿಕಿತ್ಸೆ ಕೊಡಿಸುವಂತೆ ಪ್ರೇರೇಪಿಸುತ್ತದೆ. ಅದಕ್ಕಾಗಿ ತನ್ನ ಗ್ಯಾರೇಜನ್ನೇ ಅಡವಿಟ್ಟು ಪ್ರಶಾಂತ, ಪ್ರೀತಿಗೆ ಚಿಕಿತ್ಸೆ ಕೊಡಿಸುತ್ತಾನೆ. ಇಲ್ಲಿಂದ ಕಥೆಯಲ್ಲಿ ಹೊಸ ತಿರುವನ್ನು ತಗೆದುಕೊಳ್ಳುತ್ತದೆ. ಗುಣಮುಖಳಾದ ಪ್ರೀತಿ ಹಿಂದಿನದೆಲ್ಲವನ್ನೂ ಸಂಪೂರ್ಣವಾಗಿ ಮರೆತು ತನ್ನ ಮನೆ ಸೇರುತ್ತಾಳೆ. ನಾಯಕ ಕಾರಣಾಂತರದಿಂದ ಸೆರೆಮನೆ ಸೇರುತ್ತಾನೆ ! ಬಿಡುಗಡೆಗೊಂಡ ಪ್ರಶಾಂತ್‌ ಪ್ರೀತಿಗಾಗಿ ನಡೆಸುವ ಹುಡುಕಾಟ, ತನ್ನ ಅಜ್ಞಾತವಾಸದ ಮೂಲವನ್ನು ಅರಸಿ ಹೊರಟ ಪ್ರೀತಿ,ಆಕೆಯ ತಂದೆ- ತಾಯಿಯ ತೊಳಲಾಟ, ನಾಯಕನ ಧರ್ಮ ಸಂಕಟ ಹೀಗೇ ಹಲವಾರು ತಿರುವುಗಳೊಂದಿಗೆ ಸಾಗುತ್ತದೆ ನಲ್ಲ.

  ಈ ಚಿತ್ರದ ಹಲವಾರು ಸನ್ನಿವೇಶಗಳು ಸದ್ಮಾ, ಸಾಥಿಯಾ ಹಾಗೂ ಮುನ್ರಾಂಪಿರೈ ಚಿತ್ರಗಳನ್ನು ನೆನಪಿಸುತ್ತವೆ. ಆದರೂ ನಲ್ಲ ಚಿತ್ರ ರೀಮೇಕ್‌ ಅನ್ನಿಸಿಕೊಳ್ಳುವುದಿಲ್ಲ. ಈ ನಾಯಕ- ನಾಯಕಿಯರ ಗೊಂದಲದ ನಡುವೆ ಅಲ್ಲಲ್ಲಿ ಕಾಣಿಸಿಕೊಳ್ಳುವ ಹಾಸ್ಯ ಸನ್ನಿವೇಶಗಳು ಕಮರ್ಶಿಯಲ್‌ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳನ್ನೂ ಇಲ್ಲಿ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಅಳವಡಿಸಿದ್ದಾರೆ. ಚಿತ್ರದ ಮೊದಲರ್ಧ ಭಾಗದಲ್ಲಿ ಕೆಲವು ದೃಶ್ಯಗಳು ಇದ್ದಕ್ಕಿದ್ದಂತೆ ಕೊನೆಗೊಂಡು ಪ್ರೇಕ್ಷಕನಿಗೆ ಗೊಂದಲಕ್ಕೀಡುಮಾಡುತ್ತವೆ . ಚಿತ್ರದ ಕೆಲವೆಡೆ ಎಡಿಟಿಂಗ್‌ ಕೈಚಳಕ ಎಡವಿದೆ.

  ಸೆಂಟಿಮೆಂಟ್‌, ಸ್ಟಂಟ್‌ ಹಾಗೂ ಕಾಮಿಡಿಗಳಲ್ಲಿ ಮಿಂಚುವ ಸುದೀಪ್‌ ಎಂದಿನಂತೇ ಎಲ್ಲಾ ವರ್ಗದ ವೀಕ್ಷಕರನ್ನೂ ರಂಜಿಸುತ್ತಾರೆ. ನಾಯಕನ ಪ್ರಾಮುಖ್ಯತೆಯಲ್ಲಿ ಇತರ ಕಲಾವಿದರನ್ನು ಮರೆ ಮಾಚುತ್ತಿದ್ದರೂ ನಾಯಕಿ ಸಂಗೀತಾ ತಮ್ಮ ನಟನೆಯಿಂದ ಪ್ರಶಂಸೆ ಗಳಿಸುತ್ತಾರೆ. ಇನ್ನೊಬ್ಬ ನಾಯಕಿ ಮುಮ್ತಾಜ್‌ ಐಟಮ್‌ ಹಾಡಿಗೆ ಹೆಜ್ಜೆ ಹಾಕಿರುವುದು ಕೇವಲ ಪಡ್ಡೆ ಹುಡುಗರಿಗೆ ಮಾತ್ರ.

  ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕುರುಡು ಭಿಕ್ಷುಕನಾಗಿ ದತ್ತಣ್ಣ , ಶ್ರೀನಾಥ್‌, ಚಿತ್ರಾ ಶೆಣೈ, ತಾರಾ ಹಾಗೂ ಬ್ಯಾಂಕ್‌ ಜನಾರ್ಧನ್‌ ಉತ್ತಮ ಪೋಷಕ ಅಭಿನಯ ನೀಡಿದ್ದಾರೆ. ವೆಂಕಟ್‌ -ನಾರಾಯಣ್‌ ಅವರ ಸಂಗೀತ ಈ ಚಿತ್ರದಲ್ಲಿ ಒಂದು ಪ್ಲಸ್‌ ಪಾಯಿಂಟ್‌ ಆಗಿದೆ .ಅಲ್ಲಲ್ಲಿ ತಪ್ಪುಗಳು ಕಂಡರೂ, ಒಟ್ಟಿನಲ್ಲಿ ನಲ್ಲ ಉತ್ತಮ ಫ್ಯಾಮಿಲಿ ಎಂಟರ್‌ಟೈನರ್‌ ಎನ್ನಬಹುದು.

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X