ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ವಿಮರ್ಶೆ

By * ಉದಯರವಿ

ಹೆಸರು ಜಾನಿ. ಪ್ರೀತಿಸುವುದೇ ಅವನ ಕಾಯಕ. ಪಕ್ಕಾ ಲೋಕಲ್. ಮಾತಾಡೋದು ಕಂಗ್ಲಿಷ್.ಆಪತ್ತಿನಲ್ಲಿರುವವರಿಗೆ ಆಪ್ತರಕ್ಷಕ. ಇದು ಚಿತ್ರದ ಐದು ಸಾಲಿನ ಕತೆ. ಇದಕ್ಕೆ ಒಂದಷ್ಟು ಹಾಡು, ಇನ್ನೊಂದಷ್ಟು ಸೆಂಟಿಮೆಂಟು, ಫೈಟ್ಸ್ , ಕಾಮಿಡಿ ಸೇರಿಸಿದರೆ ಎರಡುವರೆ ಗಂಟೆಗಳ ಪಕ್ಕಾ ಮಾಸ್ ಚಿತ್ರ ರೆಡಿಯಾಗುತ್ತದೆ. ಪ್ರೀತಂ ಗುಬ್ಬಿ ಅದನ್ನೇ ಅಚ್ಚುಕಟ್ಟಾಗಿ ಮಾಡಿದ್ದಾರೆ.

ಆದರೆ ಚಿತ್ರದಲ್ಲಿ ನೈಜತೆಗೆ ಹೆಚ್ಚು ಒತ್ತು ನೀಡದೆ ಇರುವುದು ದೊಡ್ಡ ಕೊರತೆ. ಚಿತ್ರದಲ್ಲಿನ ಗಾಂಧಿ ಕಾಲೋನಿ, ನಾಯಕಿಯ ಮನೆ ಎಲ್ಲವೂ ಪಕ್ಕಾ ಸೆಟ್ ಎಂದು ಪ್ರೇಕ್ಷಕನಿಗೆ ಪದೆ ಪದೆ ಪಕ್ಕೆಗೆ ತಿವಿದು ಎಚ್ಚರಿಸುವಂತಿವೆ. ಈ ವಿಚಾರದಲ್ಲಿ ನಿರ್ದೇಶಕರು ಸ್ವಲ್ಪ ಜಾಗ್ರತೆ ವಹಿಸಬೇಕಿತ್ತು. ಪ್ರೇಕ್ಷಕನ ತಾಳ್ಮೆ ಪರೀಕ್ಷಿಸುವುದು ತಪ್ಪುತ್ತಿತ್ತು.

ಎನ್ ಆರ್ ಐ ಹುಡುಗಿಯಾಗಿ ರಮ್ಯಾ ಅಭಿನಯ ಕಲರ್‌ಫುಲ್‌ ಆಗಿದೆ. "ಊರಿಗೆಲ್ಲಾ ಪದ್ಮಾವತಿ" ಹಾಡು ಕನ್ನಡದ ಮಟ್ಟಿಗೆ ಒಂದು ವಿಭಿನ್ನ ಪ್ರಯೋಗ ಎನ್ನಬಹುದು. ರಮ್ಯಾರನ್ನು ಹೆಚ್ಚಾಗಿ ಗ್ಲಾಮರ್ ಆಗಿ ತೋರಿಸುವಲ್ಲೇ ನಿರ್ದೇಶಕರು ಶ್ರಮ ಹೆಚ್ಚು ಖರ್ಚಾಗಿದೆ. ಕತೆ, ಚಿತ್ರಕತೆ ಕಡೆಗೂ ಒಂಚೂರು ಗಮನ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.

ರಂಗಾಯಣ ರಘು,ಶರಣ್, ದತ್ತಣ್ಣ, ಸಾಧು ಕೋಕಿಲ ನಗಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಪ್ರಯತ್ನ ಸಂಪೂರ್ಣವಾಗಿ ಫಲಿಸಿಲ್ಲ. ರಂಗಾಯಣ ರಘು ಸೀರೆಯುಟ್ಟು ನಾಯಕನ 'ಚಿಕ್ಕಮ್ಮ'ನಾಗಿ ಅಭಿನಯಿಸಿ ಗಮನಸೆಳೆದಿದ್ದಾರೆ. 'ಚಿಕ್ಕಮ್ಮ'ನ ಜೊತೆ ದತ್ತಣ್ಣನ ಒಂದೆರಡು ಡ್ಯುಯೆಟ್ ಸೀನ್‌ಗಳು ಪ್ರೇಕ್ಷಕರಿಗೆ ಭಿನ್ನ ಅನುಭವ.

ಸಂಪೂರ್ಣ ಕಾಮಿಡಿಮಯವಾಗಿ ಸಾಗುವ ಚಿತ್ರಒಂದು ಹಂತದಲ್ಲಿ ಸೀರಿಯಸ್ ಟ್ರ್ಯಾಕ್‌ಗೆ ಮರಳುತ್ತದೆ.ಆದರೆ ಅಷ್ಟರಲ್ಲಾಗಲೆ ಪ್ರೇಕ್ಷಕರ ಕುತೂಹಲ ಹಾಗೆ ಸುಮ್ಮನೆ ಮಾಯವಾಗಿರುತ್ತದೆ. ಕೆ.ಡಿ ವೆಂಕಟೇಶ್ ಅವರ ಸಾಹಸ ಸನ್ನಿವೇಶಗಳು ಧೂಳ್ ಮಗಾ ಧೂಳ್. ವಿ ಹರಿಕೃಷ್ಣ ಸಂಗೀತದಲ್ಲಿ ಅಬ್ಬರವಿಲ್ಲ.ಕೇಳಲು ಇಂಪಾಗಿವೆ. ಎಸ್ ಕೃಷ್ಣ ಛಾಯಾಗ್ರಹಣ ಸಾಧಾರಣ.

ಆಕ್ಷನ್ ಚಿತ್ರಗಳಲ್ಲಿ ಮಿಂಚಿದ್ದವಿಜಯ್ ಈ ಚಿತ್ರದ ಮೂಲಕ ಕ್ಲಾಸ್ ಇಮೇಜ್‌ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ ಪ್ರೇಕ್ಷಕರಿಗೆ ಅವರ ಮಾಸ್ ಇಮೇಜೇ ಕಾಣುತ್ತಿರುತ್ತದೆ. ರಮ್ಯಾ ಅವರು ಕ್ಲಾಸ್‌ನಿಂದಗ್ಲಾಮರ್‌ಗೆ ಹೊರಳಿದಂತಿದ್ದರೂ ಹಳೆಯ ಛಾಯೆ ಉಳಿಸಿದ್ದಾರೆ.ಇವರಿಬ್ಬರ ಅಭಿನಯ ಎಲ್ಲೋ ಮಿಸ್ ಮ್ಯಾಚ್ ಆಗಿ ಕೆಮಿಸ್ಟ್ರಿ ಸಬ್ಜೆಕ್ಟ್‌ನಲ್ಲಿ ಫೇಲಾದ ಅಂಶ ಪ್ರೇಕ್ಷಕರ ಗಮನಕ್ಕೆ ಬಾರದೆ ಇರುವುದಿಲ್ಲ.

More from Filmibeat

English summary
Here is the review of Duniya Vijay and Ramya starrer Kannada movie Johny Mera Naam Preethi Mera Kaam. The film has directed by Preetham Gubbi. Vijay is known as an 'action hero', some unique fight scenes have been incorporated to satisfy his fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X