ನೀ ಬಂದು ನಿಂತಾಗ; ಹಾರರ್ ಹರೋಹರ!!
ನಮ್ಮಲ್ಲಿ ಹಾರರ್ ಸಿನಿಮಾಗಳು ಸಾಕಷ್ಟು ಬಂದಿವೆ. ಆತ್ಮಗಳ ಪ್ರೇಮ ಸಲ್ಲಾಪಗಳ ಬಗ್ಗೆ ತೆರೆ ಮೇಲೆ ನೋಡಿದ್ದೇವೆ. ನೀ ಬಂದು ನಿಂತಾಗ ಚಿತ್ರವೂ ಅದೇ ಥರದ ಚಿತ್ರ. ಸಾವಿನ ಮನೆಯಲ್ಲಿರುವ ಹುಡುಗಿಯೊಬ್ಬಳು ಪ್ರೇಮದ ಅರಮನೆಗೆ ಬಂದು, ಒಬ್ಬನನ್ನು ಪ್ರೀತಿಸುತ್ತಾಳೆ. ಅದನ್ನು ವಿಚಿತ್ರಪ್ರೇಮ ಅಥವಾ ಪ್ರೇತ ಪ್ರೇಮ ಎನ್ನಬಹುದು.
ಇಡೀ ಚಿತ್ರದಲ್ಲಿ ಹೈಲೈಟ್ ಎಂದರೆ ಅದೇ ಒಂದು. ನಿರ್ದೇಶಕ ಶೇಖರ್ ಶರವಣ ಆಯ್ದುಕೊಂಡ ಕತೆಯ ಎಳೆ ಚೆನ್ನಾಗಿದೆ.ಆದರೆ, ಚಿತ್ರಕತೆ ಹಾಗೂ ಅದರ ನಿರೂಪಣೆ ತುಂಬಾ ಡಲ್ ಇದೆ. ನಟ ಸೌರವ್ ಬಹಳ ದಿನಗಳ ನಂತರ ತೆರೆ ಮೇಲೆ ಮತ್ತೆ ಬಂದಿದ್ದಾರೆ ಎಂಬ ವಿಷಯಕ್ಕಷ್ಟೇ ಅವರ ನಟನೆಯನ್ನು ಸಹಿಸಿಕೊಂಡು ನೋಡಬೇಕು. ನಾಯಕಿ ಜ್ಯೋತಿಕಾಶ್ರೀ ನಟನೆ ಸಾಧಾರಣ.
ರಮೇಶ್ ಭಟ್, ರಮ್ಯಾಬಾರ್ನೆ, ಸುಮಿತ್ರಾ, ವಿನಯ ಪ್ರಕಾಶ್ ಎಲ್ಲರನ್ನೂ ಚೆನ್ನಾಗಿ ತೋರಿಸಲಾಗಿದೆ. ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿದೆ. ಇಂದ್ರಜಿತ್ ಹಾಡುಗಳಿಗಿಂತ ರೀರೆಕಾರ್ಡಿಂಗ್ ಚೆನ್ನಾಗಿದೆ. ಮ್ಯಾಥ್ಯೂ ರಾಜನ್ ಛಾಯಾಗ್ರಹಣ ಇಡೀ ಚಿತ್ರದ ವಿಶೇಷ ಆಕರ್ಷಣೆ.
ಒಂದು ಪಕ್ವ ಹಾಗೂ ಪಕ್ಕಾ ಹಾರರ್ ಚಿತ್ರ ನೋಡಿದ ಅನುಭವ ಆಗದಿದ್ದರೂ ಒಂದು ಹಂತಕ್ಕೆ ಓಕೆ. ನಿದ್ರೆ ಬರುವವರೆಗೆ ಕಷ್ಟ ಪಟ್ಟು ನೋಡಬಹುದು. ಆಮೇಲೆ ನೋಡುವ ಬದಲು ಎದ್ದು ಬರುವುದು ಒಳ್ಳೆಯದು.(ಸ್ನೇಹಸೇತು: ವಿಜಯ ಕರ್ನಾಟಕ)


Click it and Unblock the Notifications











