For Quick Alerts
  ALLOW NOTIFICATIONS  
  For Daily Alerts

  ಗುಣಗಾನಕ್ಕೆ ಪದಗಳಿಲ್ಲ

  By Staff
  |

  ಒಂದು ಸಾಮಾನ್ಯ ಚಿತ್ರಕತೆ, ಸವಕಲು ನಿರೂಪಣೆ, ಬಾಲಿಶ ದೃಶ್ಯಗಳು, ಕೆಟ್ಟ ಸಂಕಲನ ಇವೆಲ್ಲದರ ಒಟ್ಟು ಮೊತ್ತವೇ ಗುಣವಂತ! ಹಾಗಂತ ಪೂರ್ತಿ ತಳ್ಳಿ ಹಾಕುವಂತೆಯೂ ಇಲ್ಲ. ಕಾರಣ ಹಂಸಲೇಖ ಇದೆಲ್ಲವನ್ನು ಮುಚ್ಚಲು ಶಕ್ತಿ ಮೀರಿ ಶ್ರಮಿಸಿದ್ದಾರೆ. ಪ್ರೇಮ್ ತಮ್ಮ ಎಂದಿನ ನವಿರು ಅಭಿನಯದಿಂದ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಆದರೆ ನಿರ್ದೇಶಕ ರಘುವರ್ಧನ್ ಅವರ ಹೋಂವರ್ಕ್ ಸಾಲದು.

  • ದೇವ್
  ಮೊದಲಾರ್ಧದಲ್ಲಿ ಪ್ರೇಮ ಕತೆ. ಪ್ರೇಮ್ ಮತ್ತು ರೇಖಾ ನಡುವಿನ ಮರ ಸುತ್ತಾಟ, ಶರಣ್ ಹಾಸ್ಯದ ಹೆಸರಿನ ತಿಣುಕಾಟವನ್ನು ಪ್ರೇಕ್ಷಕರು ಸಹಿಸಿಕೊಳ್ಳಬೇಕು. ನಂತರ ಚಿತ್ರದಲ್ಲೊಂದು ರೌಡಿ ಪಡೆ ಎದುರಾಗುತ್ತದೆ. ಆಕಸ್ಮಿಕವಾಗಿ ನಾಯಕನ ತಾಯಿಯನ್ನು ರೌಡಿ(ರಂಗಾಯಣ ರಘು) ಕೊಲೆ ಮಾಡುತ್ತಾನೆ. ಅಲ್ಲಿಂದ ಅನಿವಾರ್ಯವಾಗಿ ನಾಯಕಿಯಿಂದ ನಾಯಕ ದೂರವಾಗುತ್ತಾನೆ. ತಾಯಿಯನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ. ಕೊನೆಯಲ್ಲಿ ಎಲ್ಲವೂ ಸುಖಾಂತ್ಯ. ಕೇಳಲು ಚಿಕ್ಕ ಕತೆ. ಇದನ್ನು ನೀಟಾಗಿ ತೋರಿಸಿದ್ದರೆ ಚಿತ್ರವೂ ಸಹನೀಯವಾಗುತ್ತಿತ್ತು.

  ಈ ಚಿತ್ರದಲ್ಲಿ ಮೆಚ್ಚತಕ್ಕ ಅಂಶ ಎರಡೇ, ಒಂದು ಪ್ರೇಮ್ ಅಭಿನಯ. ಇನ್ನೊಂದು ಹಂಸಲೇಖ ಸಂಗೀತ. ಇದುವರೆಗೆ ಬರೀ ಪ್ರೇಮಿಯಾಗಿ ಮಿಂಚುತ್ತಿದ್ದ ಪ್ರೇಮ್ ಮೊದಲ ಬಾರಿಗೆ ಹೊಡೆದಾಟದಲ್ಲೂ ಗೆದ್ದಿದ್ದಾರೆ. ಇನ್ನು ಮುಂದೆ ಅದಕ್ಕೂ ನಾನು ರೆಡಿ ಎಂದು ಹೇಳಿದ್ದಾರೆ. ಹಂಸಲೇಖ ಮೆಲುಕು ಹಾಕುವಂಥ ಸಂಗೀತ ನೀಡಿದ್ದಾರೆ. ಇವರಿಬ್ಬರಿಂದ ಚಿತ್ರ ಕೊಂಚ ನೋಡಬಲ್. ಹಾಡಿನ ಭಾಗ ಹೊರತು ಪಡಿಸಿದರೇ, ಕ್ಯಾಮೆರಾ ಮೆನ್ ಚಂದ್ರಶೇಖರ್ ಕೆಲಸವೂ ಅಷ್ಟಾಗಿ ತೃಪ್ತಿ ನೀಡುವುದಿಲ್ಲ.

  ಇನ್ನು ಚಿತ್ರದ ನಾಯಕಿ ರೇಖಾ, ಚಂದದ ಡ್ರೆಸ್ ಹಾಕಿಕೊಂಡು ನಿಲ್ಲಲು ಮಾತ್ರ ಲಾಯಕ್ಕು ಎಂದು ತೋರಿಸಿದ್ದಾಳೆ. ಅವಳಿಂದ ನಟನೆ ಅಪೇಕ್ಷೆ ಮಾಡುವುದು ತಪ್ಪು. ಇನ್ನು ಮುಂದಾದರೂ ಅವಳು ಸುಧಾರಿಸಿದರೆ, ಅದು ಕೇವಲ ಲಕ್ಕು. ಪ್ರೇಮ್ ಅಭಿಮಾನಿಗಳಿಗೆ ಚಿತ್ರ ಒಂದು ಸಲಕ್ಕೆ ಬೋರ್ ಆನ್ನಿಸುವುದಿಲ್ಲ.
  ------------------------------------------------------------------------------------------
  ಚಿತ್ರಕ್ಕೆ ನಮ್ಮ ಶ್ರೇಯಾಂಕ : ***
  (*ಅತ್ಯುತ್ತಮ , **ಉತ್ತಮ, ***ಸಾಧಾರಣ, ****ಕಳಪೆ)
  ------------------------------------------------------------------------------------------

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X