»   » ನಾಯಕ ರಾಜೇಂದ್ರ ಅವರ ಅಭೂತಪೂರ್ವ ಅಭಿನಯ ಕಕ್ಕಾಬಿಕ್ಕಿಯಾಗಿಸುತ್ತದೆ. ಚಿತ್ರದಲ್ಲಿ ಖಳನಾಯಕರೇ ಇಲ್ಲ ಅನ್ನುವುದನ್ನು ಕೆಲವು ಕಡೆ ರಾಜೇಂದ್ರ ಸುಳ್ಳು ಮಾಡಿದ್ದಾರೆ.

ನಾಯಕ ರಾಜೇಂದ್ರ ಅವರ ಅಭೂತಪೂರ್ವ ಅಭಿನಯ ಕಕ್ಕಾಬಿಕ್ಕಿಯಾಗಿಸುತ್ತದೆ. ಚಿತ್ರದಲ್ಲಿ ಖಳನಾಯಕರೇ ಇಲ್ಲ ಅನ್ನುವುದನ್ನು ಕೆಲವು ಕಡೆ ರಾಜೇಂದ್ರ ಸುಳ್ಳು ಮಾಡಿದ್ದಾರೆ.

Subscribe to Filmibeat Kannada

ಮುಖಪುಟ  --> ಸ್ಯಾಂಡಲ್‌ವುಡ್‌  -->ನಾವು ನೋಡಿದ ಚಿತ್ರ  -->ಚಿತ್ರ ವಿಮರ್ಶೆಮಾರ್ಚ್‌ 04, 2003ಆತ ಪುಡಿ ರೌಡಿ. ಆಕೆ ಕೆಲಸವಿಲ್ಲದೆ ಅಲೆವ ಗಾಯಕಿ. ಆಕಸ್ಮಿಕವಾಗಿ ಇಬ್ಬರಿಗೂ ಫೋನಿನಲ್ಲಿ ಪರಿಚಯವಾಗುತ್ತದೆ. ಅದೇ ನೆಪದಲ್ಲಿ ಆತ ಆಕೆಗೆ ಕೆಲಸ ಕೊಡಿಸುತ್ತಾನೆ. ಅದುವರೆಗೆ ಇಬ್ಬರೂ ಪರಸ್ಪರ ಮುಖ ನೋಡಿರುವುದಿಲ್ಲ . ಮೊಬೈಲ್‌ ರಿಂಗಣದಲ್ಲಿಯೇ ಇವರ ಹೃದಯದಲ್ಲಿ ಡಿಂಗ್‌ ಡಾಂಗ್‌ ಶುರುವಾಗುತ್ತದೆ. ಆಗ ಅವಳು ಬೇರೆ ಹೆಸರಿಟ್ಟುಕೊಂಡು ಅವನ ಬಳಿ ಬರುತ್ತಾಳೆ. ಯಾಕೆ ಹಾಗೆ ಮಾಡುತ್ತಾಳೆ ಎಂಬುದು ಸಸ್‌ಪೆನ್ಸು.

ಹೀಗೆ ಅಲ್ಲಿಂದಿಲ್ಲಿಗೆ ಜಿಗಿದು ಜಿಗಿದು ಜುಗಾರಿಯಾಡುವ ಕಥೆ ಕೊನೆಗೂ ತನ್ನ ಪಾಜಾಗಟ್ಟೆ ಮುಟ್ಟುವಷ್ಟರಲ್ಲಿ ಸುಸ್ತೋ ಸುಸ್ತು. ಮೊಬೈಲ್‌ ಪ್ರೀತಿ ಹುಟ್ಟುವುದು ನೋಡಿ ಇದು ಮತ್ತೊಂದು ‘ಬೆಳದಿಂಗಳ ಬಾಲೆ’ ಎಂದು ಅಪಾರ್ಥ ಮಾಡಿಕೊಳ್ಳಬಾರದು. ಬಾಲೆಯ ಕಿರುಬೆರಳು ಮುಟ್ಟುವುದು ಬದ್ರಿಗೆ ಸಾಧ್ಯವಾಗಿಲ್ಲ. ಪ್ರೇಮದ ಉಗಮ, ಉತ್ಕರ್ಷ ಮತ್ತು ಉತ್ಕಟತೆಯನ್ನು ಅಜಮಾಸು ಎಂಟಾಣೆಯಷ್ಟಾದರೂ ಹಿಡಿದಿಟ್ಟಿದ್ದರೆ ನಿರ್ದೇಶಕ ರಘುವರ್ದನ್‌ ಅವರಿಗೆ ನಮೋ ನಮಃ ಅನ್ನಬಹುದಿತ್ತು.

ಇದರ ನಡುವೆಯೂ ನಾಯಕನ ಮೊಬೈಲ್‌ ನಂಬರಿಗೆ ಅರ್ಚನೆ ಮಾಡಿಸುವ ನಾಯಕಿ, ಬಸ್‌ಸ್ಟ್ಯಾಂಡಿನಲ್ಲಿ ನಾಯಕಿಯನ್ನು ಹುಡುಕಿಕೊಂಡು ಅಲೆವ ನಾಯಕ ಮತ್ತು ಕ್ಲೈಮ್ಯಾಕ್ಸ್‌ ದೃಶ್ಯ ನಿರ್ದೇಶಕನ ಅಳಿದುಳಿದ ಜಾಣತನ ತೋರಿಸುತ್ತದೆ. ಎಂ. ಆರ್‌. ಸೀನು ಛಾಯಾಗ್ರಹಣ ಚಿತ್ರದ ಅನೇಕ ಓರೆ ಕೋರೆಗಳನ್ನು ಸ್ವಲ್ಪವಾದರೂ ಮುಚ್ಚಿ ಹಾಕಿದೆ.

ಬಹುತೇಕ ಮಾತು ಮತ್ತು ಹಾಡುಗಳನ್ನು ನುಂಗಿ ನೀರು ಕುಡಿದದ್ದು ರಾಜೇಶ್‌ ರಾಮನಾಥ್‌ರ ಹಿನ್ನೆಲೆ ಸಂಗೀತ. ಯೋಗೀಶ್ವರ್‌ ಮೊದಲ ಬಾರಿ ಪಕ್ಕಾ ಮಸಾಲೆ ಚಿತ್ರದ ಠಪೋರಿಯಾಗಿ ಕಾಣಿಸಿದ್ದಾರೆ. ನಟನೆ ಬಗ್ಗೆ ಇನ್ನು ಒಂದೇ ಒಂದು ಕಾಮೆಂಟ್‌ ಮಾಡಿದರೂ ಈ ‘ಸೈನಿಕ’ ಕೈಗೆ ಮೆಷಿನ್‌ಗನ್‌ ಎತ್ತಿಕೊಳ್ಳಬಹುದು. ಬಿಟ್ಹಾಕಿ....

(ವಿಜಯ ಕರ್ನಾಟಕ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada