ಅಂಗವಿಕಲತೆ ಮೆಟ್ಟಿನಿಲ್ಲುವ ಮನ್ಮಥನ ಜೀವನಪ್ರೀತಿ

By Staff


ಚಿತ್ರವಿಚಿತ್ರ ಮುಖಲಕ್ಷಣಗಳನ್ನು ತೋರಿಸಿಕೊಂಡು ಪೋಲಿ ಡೈಲಾಗ್‌ಗಳನ್ನು ಹೊಡೆದುಕೊಂಡು ಒಂದು ವರ್ಗದ ಪ್ರೇಕ್ಷಕರನ್ನು ಜಗ್ಗೇಶ್ ಸೃಷ್ಟಿಸಿಕೊಂಡಿದ್ದರು. ಜಗ್ಗೇಶ್ ಅವರ ಈ ಹೊಸ ರೂಪವನ್ನೂ ಪ್ರೇಕ್ಷಕರು ಒಪ್ಪಿಕೊಂಡರೆ, ಪಟ್ಟ ಶ್ರಮ ಸಾರ್ಥಕವಾದಂತೆ.


ಜಗ್ಗೇಶ್ ಹಾಸ್ಯದ ಪೊರೆ ಕಳಚಿ ಹೊರಬಂದಿದ್ದಾರೆ. ಅಪಹಾಸ್ಯವಾಗುವ ಹಾಸ್ಯವನ್ನು ಬದಿಗಿಟ್ಟು ಗಂಭೀರ ಮುಖಲಕ್ಷಣದಲ್ಲಿಯೇ ಹಾಸ್ಯರಸವನ್ನು ಚಿಮ್ಮಿಸುವ ನವರಸನಾಯಕ ಸೆಂಚುರಿ ಬಾರಿಸಿ, ತನ್ನ ಜವಾಬ್ದಾರಿಯನ್ನರಿತು ಬ್ಯಾಟ್ ಮಾಡುವ ಬ್ಯಾಟ್ಸಮನ್‌ರಂತಾಗಿದ್ದಾರೆ.

ಚಿತ್ರವಿಚಿತ್ರ ಮುಖಲಕ್ಷಣಗಳನ್ನು ತೋರಿಸಿಕೊಂಡು ಪೋಲಿ ಡೈಲಾಗ್‌ಗಳನ್ನು ಹೊಡೆದುಕೊಂಡು ಒಂದು ವರ್ಗದ ಪ್ರೇಕ್ಷಕರನ್ನು ಜಗ್ಗೇಶ್ ಸೃಷ್ಟಿಸಿಕೊಂಡಿದ್ದರು. ಜಗ್ಗೇಶ್ ಅವರ ಈ ಹೊಸರೂಪವನ್ನೂ ಪ್ರೇಕ್ಷಕರು ಒಪ್ಪಿಕೊಂಡರೆ, ಪಟ್ಟ ಶ್ರಮ ಸಾರ್ಥಕವಾದಂತೆ.

ಜಗ್ಗೇಶ್ ಶ್ರಮಪಟ್ಟಿದ್ದಾರೆ. ಮಲಯಾಳಂನಲ್ಲಿ ದಿಲೀಪ್ ನಟಿಸಿದ್ದ ಕುನ್ನಿಕೋಣಂ ಚಿತ್ರದ ರಿಮೇಕ್ ಆಗಿರುವ ಮನ್ಮಥದಲ್ಲಿ ಅವರು ಪಟ್ಟಿರುವ ಶ್ರಮ ಅವರು ಇಟ್ಟ ಪ್ರತಿ ಸೊಟ್ಟ ಹೆಜ್ಜೆಯಲ್ಲಿ, ಕಣ್ಣನ್ನು ಪಿಳಿಪಿಳಿ ಬಿಡುತ್ತ ಹೇಳಬೇಕಾದ್ದನ್ನೆಲ್ಲ ಹಾವಭಾವದಲ್ಲಿ ಹೇಳುವ ಪರಿಯಲ್ಲಿ ಎದ್ದುಕಾಣುತ್ತದೆ. ಆದರೆ ಈ ಚಿತ್ರ ರಿಮೇಕ್ ಆಗಿರದೇ ಸ್ವಂತ ಪ್ರಯತ್ನವಾಗಿದ್ದರೆ ಮನ್ಮಥನ ಗೂನುಬೆನ್ನಿಗೆ ಇನ್ನೆರಡು ಗುದ್ದು ಹಾಕಬಹುದಾಗಿತ್ತು.

ಅದಮ್ಯ ಜೀವನಪ್ರೀತಿ ರೂಪ, ಅಂಗವೈಕಲ್ಯತೆಯನ್ನು ಮೆಟ್ಟಿನಿಲ್ಲಬಲ್ಲದೆಂಬ ಅಪರೂಪದ ಸಂದೇಶ ಹೊತ್ತು ಬಂದಿದೆ ಮನ್ಮಥ. ಈ ಮನ್ಮಥನಿಗೆ ಸುಂದರಾಂಗ ಸುಂದರಿಯನ್ನು ಮದುವೆಯಾಗುವ ಬಯಕೆ. ಅನುರೂಪದ ಹುಡುಗಿಯನ್ನು ಹುಡುಕುವ ಸನ್ನಿವೇಶಗಳಲ್ಲಿ ಬರುವ ಹಾಸ್ಯ ಪ್ರಸಂಗವೊಂದು ಮನ್ಮಥನ ರೂಪಕ್ಕೆ ಕನ್ನಡಿ ಹಿಡಿಯುತ್ತದೆ.

ತನ್ನ ರೂಪದ ಬಗ್ಗೆ ಜಿಗುಪ್ಸೆ ತಾಳುವ ಪುಟ್ಸಾಮಿಗೆ ಒಂದು ಬಾರಿ ಸುಂದರಿಯೊಬ್ಬಳು ಸಿಗುತ್ತಾಳೆ. ಆ ಸುಂದರಿಗೊಬ್ಬ ಸುಂದರ ಪ್ರಿಯಕರ. ಅವರಿಬ್ಬರನ್ನು ಒಂದೆಡೆ ಸೇರಿಸುವ ತಾಣ ಪುಟ್ಸಾಮಿಯ ಟೆಲಿಫೋನ್ ಬೂತ್. ಪುಟ್ಸಾಮಿ ಹಾಕುವ ಸೊಟ್ಟ ಕಾಲುಗಳಂತೇ ವಿಚಿತ್ರ ತಿರುವನ್ನು ಪಡೆಯುವ ಕಥೆಯಲ್ಲಿ ಪುಟ್ಸಾಮಿ ಆ ಸುಂದರಿಯ ಕೊಲೆಗೆ ಸಾಕ್ಷಿಯಾಗುತ್ತಾನೆ.

ಹೀಗೊಂದು ದಿನ ಆ ಸುಂದರಿಯ ಅನುರೂಪದಂತೆಯೇ ಕಾಣುವ ಕುರುಡಿಯೊಬ್ಬಳು ಪುಟ್ಸಾಮಿಯ ಬಾಳಲ್ಲಿ ಪ್ರವೇಶಿಸುತ್ತಾಳೆ. ಅವಳು ತನ್ನನ್ನು ತಿರಸ್ಕರಿಸಿದರೂ ಚಿಂತೆಯಿಲ್ಲ ಆಕೆಗೆ ಕಣ್ಣು ಬರಬೇಕೆಂಬ ಆಶಯ ಪುಟ್ಸಾಮಿಯದು. ಆಕೆಗೆ ಬೇರೊಬ್ಬರ ಕಣ್ಣನ್ನು ಕೂಡಿಸುತ್ತಾರೆ. ಆಕೆಗೆ ಕೂಡಿಸಿದ ಕಣ್ಣು ಯಾರದು? ಆಕೆ ಮನ್ಮಥನನ್ನು ತಿರಸ್ಕರಿಸಿದಳೆ? ಆ ಸುಂದರ ಏನಾದ? ನೀವೇ ಕಲ್ಪಿಸಿಕೊಳ್ಳಿ.

ರಿಮೇಕ್ ಚಿತ್ರಕ್ಕೆ ನಿರ್ದೇಶಕರೊಬ್ಬರು ಬೇಕಾ? ಇದ್ದರೂ ಅವರೇನು ಮಾಡುತ್ತಿದ್ದರು ಎಂಬುದಕ್ಕೆ ಬೇಕಾದಷ್ಟು ನಿದರ್ಶನಗಳು ಚಿತ್ರದುದ್ದಕ್ಕೂ ಸಿಗುತ್ತವೆ. ಪೊಲೀಸ್ ಕಾನ್ಸ್‌ಟೇಬಲ್ ಒಬ್ಬ ಈ ರೀತಿಯೂ ಟೋಪಿ ಧರಿಸಬಹುದೇ ಎಂಬ ಸಂದೇಹ ಬಂದರೆ ಅದು ನಿಮ್ಮ ತಪ್ಪಲ್ಲ. ಧೋಧೋ ಮಳೆ ಸುರಿದು ಮರುಕ್ಷಣದಲ್ಲಿಯೇ ರಣರಣ ಬಿಸಿಲು ಬಂದರೆ ಅದೂ ಕೂಡ ಹವಾಮಾನದ ತಪ್ಪು! ರಾಜೇಶ್ ಫರ್ನಾಂಡಿಸ್ ಅವರ ನಿರ್ದೇಶನವೇ ಕೆಲಬಾರಿ ಅಂಗವಿಕಲವಾಗುವುದು ವಿಪರ್ಯಾಸ. ಚಿತ್ರದ ಎಲ್ಲ ಅಂಗವೈಕಲ್ಯತೆಗಳನ್ನು ಮೆಟ್ಟಿನಿಂತಿದ್ದು ಮುಖಭಾವದಲ್ಲೇ ನಗಿಸಿ, ಅಳಿಸುವ ಜಗ್ಗೇಶ್ ಅವರ ಭಾವಪೂರಿತ ನಟನೆ. ಜಗ್ಗೇಶ್ ಮುಖದ ಪ್ರತಿ ಎಕ್ಸ್‌ಪ್ರೆಶನ್ನನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ ರಮೇಶ್‌ಬಾಬು.

ಅಂಗವಿಕಲನ ನಟನೆಯಲ್ಲಿ ಆರುಕಾಲು ಅಡಿಗೇರುವ ಜಗ್ಗೇಶ್ ಜೀನ್ಸ್ ತೊಟ್ಟು ನಾಯಕಿಯೊಂದಿಗೆ ಡ್ಯುಯೆಟ್ ಹಾಡುವ ಜಗ್ಗೇಶ್ ಮೂರಕ್ಕಿಳಿಯುತ್ತಾರೆ. ಜಗ್ಗೇಶ್‌ಗೆ ಎಂಥ ಪಾತ್ರಗಳು ಸೂಕ್ತವಾಗುತ್ತವೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ರೋಮಾನ್ಸ್ ಮಾ‌ಡುವ ಜಗ್ಗೇಶ್‌ಗಿಂತ ವಿಲನ್‌ ಜಗ್ಗೇಶ್ ಪ್ರಭಾವಶಾಲಿಯಾಗಿದ್ದಾರೆ.

ಮಿಕ್ಕಂತೆ ದ್ವಿಪಾತ್ರದಲ್ಲಿ ಬರುವ ಗುರ್ಲಿನ್ ಚೋಪ್ರಾ ಆಯ್ಕೆ ಅನುಚಿತ. ಒಂದೇ ದೃಶ್ಯದಲ್ಲಿ ಬಂದು ಹೋಗುವ ಪೂಜಾ ಗಾಂಧಿಯೇ ಹಿತ. ಕಾಮಿಡಿಗಾಗಿಯೇ ಇರುವ ಕೋಮಲ್ ಕಾಮಿಡಿ ಮಿತ. ತನಗಿನ್ನು ಕಣ್ಣುಬಂದ ಸುಂದರಿ ಸಿಗುವುದಿಲ್ಲ ಎಂದು ಹೇಳುವ ಮನ್ಮಥನನ್ನು ನೋಡಿ ನಿಮ್ಮ ಕಣ್ಣಲ್ಲೂ ಎರಡು ಹನಿ ಜಿನುಗದಿದ್ದರೆ ಜಗ್ಗೇಶ್ ಪ್ರಯತ್ನ ವ್ಯರ್ಥ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X