»   » ಸಾಹಸ ದೃಶ್ಯಗಳಲ್ಲಿ ಮಿಂಚುವ ವಿಜಯ ರಾಘವೇಂದ್ರ, ಹಾಡು ಪೂರ್ತಿ ಸ್ವಿಮ್ಮಿಂಗ್‌ ಡ್ರೆಸ್‌ನಲ್ಲಿ ಕಚಗುಳಿಯಿಡುವ ರಾಧಿಕಾ ಕಾರಣದಿಂದಾಗಿ ಚಿತ್ರ ಪಡ್ಡೆ ಹೈಕಗಳಿಗೆ ಇಷ್ಟವಾದರೆ ಆಶ್ಚರ್ಯವಿಲ್ಲ ...

ಸಾಹಸ ದೃಶ್ಯಗಳಲ್ಲಿ ಮಿಂಚುವ ವಿಜಯ ರಾಘವೇಂದ್ರ, ಹಾಡು ಪೂರ್ತಿ ಸ್ವಿಮ್ಮಿಂಗ್‌ ಡ್ರೆಸ್‌ನಲ್ಲಿ ಕಚಗುಳಿಯಿಡುವ ರಾಧಿಕಾ ಕಾರಣದಿಂದಾಗಿ ಚಿತ್ರ ಪಡ್ಡೆ ಹೈಕಗಳಿಗೆ ಇಷ್ಟವಾದರೆ ಆಶ್ಚರ್ಯವಿಲ್ಲ ...

Subscribe to Filmibeat Kannada

ರಿಮೇಕ್‌ ಆದರೂ ಸ್ವಂತ ಟ್ಯೂನ್‌ಗಳನ್ನು ಹಾಡುಗಳಿಗಾಗಿ ಬಳಸಿದ್ದು ಗಮನಾರ್ಹ. ಮೂರು ಹಾಡುಗಳು ಮಧುರವಾಗಿವೆ. ಹಾಡುಗಳನ್ನು ಚಿತ್ರಿಸಿದ ರೀತಿಯೂ ಅದ್ದೂರಿಯಾಗಿದೆ. ಫೋಟೋಗ್ರಫಿ ಪರವಾಗಿಲ್ಲ . ಸಂಕಲನ ಬಹಳ ಕಡೆ ಕೈ ಕೊಟ್ಟಿದೆ. ಕತೆಗೆ ಗಾಂಭೀರ್ಯ ತಂದುಕೊಡಬೇಕಿದ್ದ ದೃಶ್ಯಗಳು ಸಂಕಲನಕಾರರ ಎಡವಟ್ಟಿನಿಂದ ಹದಗೆಟ್ಟಿವೆ.

ವಿಜಯ ರಾಘವೇಂದ್ರನಿಗೆ ಇದರಲ್ಲಿ ದೀನ ಬಂಧುವಿನ ಪಾತ್ರ. ಮೊದಲಾರ್ಧದಲ್ಲಿ ನಿತ್ಯ ವಿನೀತ ಮುಖಭಾವ. ಎರಡನೆ ಭಾಗದಲ್ಲಿ ಜ್ಯೂನಿಯರ್‌ ಸಾಹಸ ಸಿಂಹ.

ಈ ಹುಡುಗ ಹೊಡೆದಾಟದ ದೃಶ್ಯಗಳಲ್ಲಿ ಅಚ್ಚರಿ ಹುಟ್ಟಿಸುತ್ತಾನೆ. ಆ್ಯಕ್ಷನ್‌ ಚಿತ್ರಕ್ಕೆ ಹೇಳಿಮಾಡಿಸಿದ ಮೈಕಟ್ಟಿದೆ. ಮತ್ತು ತಾಕತ್ತೂ ಇದೆ. ರಾಧಿಕಾ ಮೊದಲಿನೆರಡು ಚಿತ್ರಗಳಿಗಿಂತ ಫ್ರೆಶ್‌ ಆಗಿ ಕಾಣಿಸುತ್ತಾಳೆ. ಪಡ್ಡೆ ಹೈಕಳಿಗೆ ನಿದ್ದೆಗೆಡಿಸಲೆಂದೆ ರಾಧಿಕಾ ಸ್ವಿಮ್ಮಿಂಗ್‌ ಡ್ರೆಸ್ಸಿನಲ್ಲಿ ಹಾಡು ಪೂರ್ತಿ ಕುಣಿದದ್ದು ನಿರ್ಮಾಪಕರ ಥೈಲಿ ತುಂಬಿಸಬಹುದು.

ಇಬ್ಬರು ಪ್ರೇಮಿಗಳು ಒಂದುಗೂಡಲು ನಡೆಯುವ ಕೊಲೆ, ರಕ್ತಪಾತ, ಜೈಲು ಪ್ರಕರಣ, ಹೊಡೆದಾಟಗಳನ್ನು ನೋಡಿದರೆ ಪ್ರೇಮಿಸುವವರು ಭಯ ಬೀಳುವುದು ಖಂಡಿತ.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada