ಮುಂದುವರಿದ ಕಳ್ಳ ಮಳ್ಳ ಸುಳ್ಳರ ಯಶಸ್ವಿ ಯಾತ್ರೆ!

ಮೂರನೆಯ ವಾರದ ಪ್ರಯುಕ್ತ ಚಿತ್ರತಂಡ ಈ ಶನಿವಾರ ಹಾಗೂ ಭಾನುವಾರದಂದು ಕ್ರಮವಾಗಿ ಉತ್ತರ ಕರ್ನಾಟಕ ಹಾಗೂ ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಚಿತ್ರಮಂದಿರಗಳಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಜನರ ಕ್ರಿಯೆ-ಪ್ರತಿಕ್ರಿಯೆಗಳನ್ನು ಕಣ್ಣಾರೆ ಕಂಡು ಸ್ವತಃ ವಿಮರ್ಶಿಸಿಕೊಳ್ಳಲಿದ್ದಾರೆ. ರವಿಚಂದ್ರನ್, ರಮೇಶ್, ವಿಜಯರಾಘವೇಂದ್ರ, ರಾಗಿಣಿ, ಯಜ್ಞಾಶೆಟ್ಟಿ ಹಾಗೂ ರಿಷಿಕಾ ತಾರಾಗಣದ ಈ ಚಿತ್ರ ಹಾಸ್ಯಕ್ಕೆ ಒತ್ತು ನೀಡಿದೆ.
ಪೆಟ್ರೋಲ್, ಗೋಲ್ಡ್, ಗ್ಯಾಸ್ ಬೆಲೆ ದುಬಾರಿ ರೀ.., ಆದ್ರೂ "ಕಳ್ಳ ಮಳ್ಳ ಸುಳ್ಳ"ರ ಆಟ ಬೊಂಬಾಟ್ ರೀ... ಎಂದು ಚಿತ್ರತಂಡ ಘೋಷಿಸಿದೆ. ಜನರನ್ನು ಸೆಳೆಯಲು ಕಸರತ್ತು ಮಾಡುವುದು ಅನಿವಾರ್ಯ ಎಂಬುದು ಸಾರ್ವಕಾಲಿಕ ಸತ್ಯವೆಂಬುದು ಇಲ್ಲೂ ಸಾಬೀತಾಗಿದೆ! ಸಾರಥಿಯ ಹೌಸ್ ಫುಲ್ ಪ್ರದರ್ಶನ, ಬಹು ನಿರೀಕ್ಷೆಯ ಪರಮಾತ್ಮನ ಆಗಮನದ ನಂತರ ಈ ಸಿನಮಾ ಎಷ್ಟು ದಿನ ಪೂರೈಸುತ್ತದೆ ಎಂಬುದು ಸದ್ಯಕ್ಕೆ ರಹಸ್ಯ...
More from Filmibeat
English summary
Kannada Movie Kalla Malla Sulla is running successfully in 3rd week. The question is that the journey of Success Kalla Malla Sulla will be go for how many days, after the entry of expected movie Paramathma. Answer for this question will be ready very soon.


Click it and Unblock the Notifications











