'ಕರಿಚಿರತೆ' ವಿಜಿ ಬ್ರೇನು ಬೆಂಡೇಕಾಯಿ

ಆ ಕಾರಣಕ್ಕೆ ಆತ ಹುಚ್ಚನಾಗಿರುತ್ತಾನಾ? ಅಥವಾ ಹಾಗೆ ಬೇಕೆಂತಲೇ ಆಡುತ್ತಾನಾ? ಅದು ಕರಿಚಿರತೆ'ಯ ಮುಂದುವರಿದ ಕತೆ. ಮಾದೇಶ್ ಈ ಬಾರಿ ರೀಮೇಕ್ ಮಾಡಿಲ್ಲ ಎನ್ನುವುದು ಒಂದು ಕಡೆಯ ಖುಷಿಯಾದರೆ, ಸಕ್ಸಸ್ ಆಗುವ ಎಲ್ಲಾ ಫಾರ್ಮುಲಾವನ್ನು ಚಿತ್ರದಲ್ಲಿ ಬಚ್ಚಿಟ್ಟಿದ್ದಾರೆ ಎನ್ನುವುದು ಸಂತಸದ ವಿಚಾರ. ಇಡೀ ಚಿತ್ರ ವಿಜಿ ಹಂಗಾಮ. ಹೊಡೆದಾಟದಲ್ಲಿ ಮತ್ತೊಂದು ದುನಿಯಾ'ತೋರುತ್ತಾರೆ ವಿಜಿ.
ಒಂದು ಚಿತ್ರಕ್ಕೆ ನಿರ್ದೇಶಕರು ಎಷ್ಟು ಮುಖ್ಯವೋ ನಾಯಕನ ಪಾತ್ರವೂ ಅಷ್ಟೇ ಮುಖ್ಯ ಎನ್ನುವುದನ್ನು ಕರಿಚಿರತೆ ಮತ್ತೊಮ್ಮೆ ನಿರೂಪಿಸಿದೆ. ಮಾದೇಶ್ ಆ ಮಟ್ಟಿಗೆ ಬಹಳ ಬುದ್ಧಿವಂತ'ರು. ಜನರನ್ನು ಹಿಡಿದು ಕೂರಿಸುವ ಚಿತ್ರಕತೆ ಹೆಣೆಯುವಲ್ಲಿ ನಿಸ್ಸೀಮರು. ಒಂದು ಫೈಟ್, ಅದರ ಹೆಗಲೇರಿ ಕೂರುವ ಹಾಡು, ಮತ್ತೆ ಡೈಲಾಗು, ಸಣ್ಣದೊಂದು ಸೆಂಟಿಮೆಂಟ್ ಝಲಕ್, ಮತ್ತೆ ಡ್ಯಾನ್ಸು... ಹೀಗೆ ಇಡೀ ಚಿತ್ರ ಶರವೇಗದಲ್ಲಿ ಸಾಗುತ್ತದೆ. ವಿಜಿ ಇದ್ದಾರೆ ಎಂಬ ಕಾರಣಕ್ಕೆ ಹಾಗಿದ್ದರೂ ಇರಬಹುದು.
ಎಲ್ಲಕ್ಕಿಂತ ಹೈಲೈಟ್-ವಿಜಿ ಮಾನಸಿಕ ಅಸ್ವಸ್ಥನಂತೆ ಆಡುವುದು. ಒಂದು ಹಂತದಲ್ಲಿ ಪ್ರೇಕ್ಷಕ ಭಯ ಬೀಳುತ್ತಾನೆ. ಮೈ ಜುಂಗಟ್ಟುತ್ತದೆ. ನಿಜವಾದ ಹುಚ್ಚರೂ ಬಹುಶಃ ಆ ಹಂತಕ್ಕೆ ವರ್ತಿಸುತ್ತಾರೋ ಇಲ್ಲವೋ ಗೊತ್ತಿಲ್ಲ! ಶರ್ಮಿಳಾ ಮಾಂಡ್ರೆ ಹಾಡಿನಲ್ಲಿ ಮಸ್ತ್ ಕಾಣುತ್ತಾರೆ. ಯಜ್ಞಾ ಶೆಟ್ಟಿ ಅತಿಯಾದ ಮೇಕಪ್ ಕಿರಿಕಿರಿ ಉಂಟು ಮಾಡುತ್ತದೆ. ಆ ಪಾತ್ರಕ್ಕೆ ಅವರೇ ಬೇಕಿತ್ತಾ ಎಂಬ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸಬೇಕು.
ಸಾಧುಕೋಕಿಲಾ ಎರಡು ಒಳ್ಳೆ ಹಾಡುಗಳನ್ನು ಕೊಟ್ಟಿದ್ದಾರೆ. ತುಷಾರ್ ರಂಗನಾಥ್ ಸಂಭಾಷಣೆ ಎಂದಿನಂತೇ ಸೊಗಸು. ಸಾಹಸ ಮತ್ತು ನೃತ್ಯ ಸಂಯೋಜನೆ ವಿಶೇಷವಾಗಿದೆ. ರಂಗಾಯಣ ರಘು ಬಹಳ ದಿನಗಳ ನಂತರ ಹೆಚ್ಚು ಕೂಗಾಡದೇ ಗಮನ ಸೆಳೆದಿದ್ದಾರೆ. ಸುಧಾ ಬೆಳವಾಡಿ ಜೈ ಜಗದೀಶ್, ಕೋದಂಡು, ಪುಂಗಾ ಎಲ್ಲರ ಪಾತ್ರವೂ ಗಟ್ಟಿಯಾಗಿದೆ. ಒಟ್ಟಾರೆ ಇದು ವಿಜಿ ಮತ್ತು ಆಕ್ಷನ್ ಅಭಿಮಾನಿಗಳಿಗೆ ಹೇಳಿಮಾಡಿಸಿದ ಚಿತ್ರ. ಜೈ ಮಾದೇಶ್ವರ'!


Click it and Unblock the Notifications











