»   » ‘ನಿರ್ಮಾಪಕರನ್ನು ಉಳಿಸಿ’ ಎಂಬ ಘೋಷಣೆಯಾಂದಿಗೆ ಮೊನ್ನೆಯಷ್ಟೇ ಧರಣಿ ನಡೆದಿತ್ತು. ಆದರೆ ಈಗ ಪ್ರೇಕ್ಷಕರನ್ನು ಉಳಿಸಲು ಧರಣಿ ನಡೆಸುವ ಜರೂರತ್ತು ಎದುರಾಗಿದೆ... !

‘ನಿರ್ಮಾಪಕರನ್ನು ಉಳಿಸಿ’ ಎಂಬ ಘೋಷಣೆಯಾಂದಿಗೆ ಮೊನ್ನೆಯಷ್ಟೇ ಧರಣಿ ನಡೆದಿತ್ತು. ಆದರೆ ಈಗ ಪ್ರೇಕ್ಷಕರನ್ನು ಉಳಿಸಲು ಧರಣಿ ನಡೆಸುವ ಜರೂರತ್ತು ಎದುರಾಗಿದೆ... !

Subscribe to Filmibeat Kannada

ಕಷ್ಟಗಳೆಲ್ಲ ಬರುವುದು ಕೇವಲ ಬಡವರಿಗೆ. ಅವರನ್ನು ನಾಶ ಮಾಡಲು ಇಡೀ ವ್ಯವಸ್ಥೆಯೇ ತಯಾರಾಗಿ ನಿಂತಿರುತ್ತದೆ ಎನ್ನುವ ಅತಿರೇಕದ ಭಾವದ ಕತೆಯಿದು. ಕಾಲ ಬದಲಾಗಿದೆ. ಈಗ ರಾಜ್ಯದಲ್ಲಿ ಹುಡುಕಿದರೂ ಅಂತಹ ಒಂದು ಹಳ್ಳಿ ಸಿಗಲು ಸಾಧ್ಯವಿಲ್ಲ . ಸಿಕ್ಕರೂ ಅದು ಮಹೇಂದರ್‌ ಕನಸಿನ ಸೀತಾಪುರವಾಗಿರುವುದಿಲ್ಲ.

ಕಲಾತ್ಮಕ ಚಿತ್ರದ ಕತೆಯಂತಿರುವ ಇದಕ್ಕೆ ಕಮರ್ಷಿಯಲ್‌ ಮಸಾಲೆ ತುಂಬಲಾಗಿದೆ. ಹಾಸ್ಯ, ಹಾಡು ಮತ್ತು ಸೆಂಟಿಮೆಂಟ್‌ಗಳು ಹದವಾಗಿ ಬೆರೆತಿವೆ. ಬಿಡಿಬಿಡಿಯಾಗಿ ಕೆಲವು ದೃಶ್ಯಗಳು ಇಷ್ಟವಾಗುತ್ತವೆ. ಆದರೆ ನೀರಸ ನಿರೂಪಣೆ ಚಿತ್ರದ ಓಟಕ್ಕೆ ತೊಡರುಗಾಲು ಹಾಕುತ್ತದೆ. ಕ್ಲೈಮ್ಯಾಕ್ಸ್‌ ದೃಶ್ಯವಂತೂ ಮೊದಲೇ ಗೊತ್ತಾಗಿಬಿಡುತ್ತದೆ. ಒಟ್ಟಾರೆ ಚಿತ್ರ ಮುಗಿದಾಗ, ಇಷ್ಟಕ್ಕೆ ಇಷ್ಟೊಂದು ಎಳೆಯಬೇಕಿತ್ತೆ ಎಂದನ್ನಿಸೋದು ನಿಜ.

ರಾಕ್‌ಲೈನ್‌ ವೆಂಕಟೇಶ್‌ ಮುಗ್ಧ ಮಾನವ. ‘ಬಾಲರಾಮ’ನನ್ನು ನೆನಪಿಸುವ ಅವರ ನಟನೆ ಎಷ್ಟೋ ಬೆಳೆದಿದೆ. ಹೊಡೆದಾಟದಲ್ಲಿ ಅವರು ರಾಕ್‌. ಇಡೀ ಚಿತ್ರದ ಹೈಲೈಟ್‌ ಅಂದರೆ ಪ್ರೇಮಾ. ಗಯ್ಯಾಳಿಯಾಗಿ ಮಂಜುಳಾರನ್ನು ನೆನಪಿಸುತ್ತಾರೆ. ಸೆಂಟಿಮೆಟಿನಲ್ಲಿ ಭಾರತಿ. ಎರಡರಲ್ಲೂ ಪ್ರೇಮಾ ಸೈ ಅನಿಸಿಕೊಂಡಿದ್ದಾರೆ. ಚಿಕ್ಕದಾಗಿದ್ದರೂ ಚೊಕ್ಕವಾಗಿ ನಟಿಸಿದ್ದು ತಾರಾ. ಸಾಹುಕಾರನಾಗಿ ಅವಿನಾಶ್‌ ನಾಗರಹಾವನ್ನೇ ಆವಾಹಿಸಿಕೊಂಡಿದ್ದಾರೆ.

ಹಂಸಲೇಖಾ ಹಾಡು ಮತ್ತು ಸಂಗೀತದಲ್ಲಿ ಎರಡು ಹಾಡು ಗುನುಗುನಿಸುವಂತಿವೆ. ಹಳ್ಳಿ ಸೊಗಡಿನ ಮಾತು ಕೊಟ್ಟ ಬಿ.ಎ.ಮಧು ಎಕ್ಸಲೆಂಟ್‌. ಮಹೇಂದ್ರನ್‌ ಛಾಯಾಗ್ರಹಣವೂ ಕಣ್ಣಿಗೆ ತಂಪು.

(ವಿಜಯ ಕರ್ನಾಟಕ)

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada