»   » ಚಿತ್ರವಿಮರ್ಶೆ: ಮಳೆಬಿಲ್ಲೇ

ಚಿತ್ರವಿಮರ್ಶೆ: ಮಳೆಬಿಲ್ಲೇ

Subscribe to Filmibeat Kannada

ಮಳೆ ಬಿಲ್ಲೇ ಮಳೆ ಬಿಲ್ಲೆ ...ಎನ್ನುವ ಸೈನಿಕ ಚಿತ್ರದ ಹಾಡಿನ ಸಾಲನ್ನು ತಮ್ಮ ಚಿತ್ರಕ್ಕೆ ಇಟ್ಟು ಆ ಬಿಲ್ಲಿನಲ್ಲಿ ಚೆಂದದ ಚಿತ್ರ ಕೊಡಲು ಮಹೇಶ್ ಸುಖಧರೆ ಬಂದಿದ್ದಾರೆ. ನಾಲ್ಕು ವರ್ಷಗಳಿಂದ ತೆರೆ ಮರೆಗೆ ಸರಿದಿದ್ದ ಮಹೇಶ್ ಈಗ ಪಕ್ಕಾ ಪ್ರೇಮ ಕತೆಗೆ ಕ್ಯಾಮೆರಾ ಹಿಡಿದಿದ್ದಾರೆ. ಇದೂ ಒಂದು ಪ್ರೇಮ ಕತೆಯಾದ್ದರಿಂದ ಕತೆಯನ್ನು ವಿವರವಾಗಿ ಹೇಳುವ ಅಗತ್ಯ ಇಲ್ಲ.

ಇಬ್ಬರು ನಾಯಕರು, ಒಬ್ಬ ನಾಯಕಿ ನಡುವೆ ಚಿತ್ರ ಕತೆ ಸುತ್ತುತ್ತದೆ. ಹೊಸ ಹುಡುಗ ಅಕ್ಷಯ್ ಭರವಸೆ ಮೂಡಿಸುತ್ತಾನೆ. ಆದರೆ ಇನ್ನೂ ಪಳಗುವ ಅಗತ್ಯ ಇದೆ. ನಾಯಕಿ ಪ್ರಜ್ಞಾಗೆ ಇದು ಮೊದಲ ಚಿತ್ರ. ಅದು ಆಕೆಯ ಮುಖದಲ್ಲಿ ಕಾಣುತ್ತದೆ. ಆದರೆ ಮುದ್ದುಮುದ್ದಾಗಿ ಕಾಣುತ್ತಾಳೆ. ದಿಗಂತ್‌ಗೂ ಒಂದು ಪಾತ್ರ ಇದೆ. ಇವರ ಜೊತೆಗೆ ಬಹುತೇಕ ಪೋಷಕ ನಟರ ದಂಡೇ ಇದೆ.

ಸುಖಧರೆ ಇಲ್ಲಿ ಹೆಚ್ಚು ತಲೆಗೆ ಕೆಲಸ ಕೊಟ್ಟಿಲ್ಲ. ಬದಲಿಗೆ ಮನಸಿಗೆ ತಟ್ಟುವುದನ್ನು ಬಿಟ್ಟಿಲ್ಲ. ಪ್ರೇಮದ ನವಿರು ಭಾವನೆಗಳನ್ನು ಅಷ್ಟೇ ಮನಸಿಗೆ ಮುಟ್ಟುವಂತೆ ಹೆಣೆದಿದ್ದಾರೆ. ಕೆಲವೊಮ್ಮೆ ದೃಶ್ಯಗಳನ್ನು ಇನ್ನಷ್ಟು ಚುರುಕು ಗೊಳಿಸುವ ಯತ್ನಕ್ಕೆ ಯಾಕೊ ಕೈ ಹಾಕಿಲ್ಲ. ಆ ಬಗ್ಗೆ ಯೋಚಿಸಬೇಕಿತ್ತು. ಹಾಗೇ ರುದ್ರೇಶ್ ಬರೆದ ಸಂಭಾಷಣೆ ಗಮನ ಸೆಳೆಯುತ್ತವೆ. ಕ್ಯಾಮೆರಾ , ಸಂಗೀತ ಕೂಡ ಇಷ್ಟವಾಗುತ್ತದೆ. ರೀಮೇಕ್ ಹಾವಳಿಗಳ ಮಧ್ಯೆ ಒಂದು ಸ್ವಮೇಕ್
ಚಿತ್ರಕ್ಕೆ ಕೈ ಹಾಕಿದ್ದೇ ಸುಖಧರೆ ಹೆಚ್ಚುಗಾರಿಕೆ. ಕನ್ನಡಿಗರು ಇದನ್ನು ನೋಡುವ ಮನಸು ಮಾಡಬೇಕಷ್ಟೇ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada