»   » ನಿರ್ದೇಶಕರು ತಮ್ಮ ದೈತ್ಯ ಪ್ರತಿಭೆಯನ್ನು ತೋರಿಸುವ ಸಾಹಸ ಮಾಡಿ ಇಡೀ ಚಿತ್ರವನ್ನು ‘ಹದಗೆಟ್ಟ ಹೈದ್ರಾಬಾದ್‌’ ಮಾಡಿದ್ದಾರೆ

ನಿರ್ದೇಶಕರು ತಮ್ಮ ದೈತ್ಯ ಪ್ರತಿಭೆಯನ್ನು ತೋರಿಸುವ ಸಾಹಸ ಮಾಡಿ ಇಡೀ ಚಿತ್ರವನ್ನು ‘ಹದಗೆಟ್ಟ ಹೈದ್ರಾಬಾದ್‌’ ಮಾಡಿದ್ದಾರೆ

Subscribe to Filmibeat Kannada

ಗಾಂಧಿ, ಗೋಡ್ಸೆ ಆದದ್ದು ಹೀಗೆ...ಮೂಲ ಚಿತ್ರವನ್ನು ಯಥಾವತ್ತಾಗಿ ಇಳಿಸಿದ್ದರೂ ನಿರ್ದೇಶಕನ ಮಾನ ಉಳಿಯುತ್ತಿತ್ತು. ಅದು ಬಿಟ್ಟು, ತಮ್ಮ ದೈತ್ಯ ಪ್ರತಿಭೆಯನ್ನು ತೋರಿಸುವ ಸಾಹಸದಿಂದ ಇಡೀ ಚಿತ್ರವನ್ನು ಹದಗೆಟ್ಟ ಹೈದ್ರಾಬಾದ್‌ ಮಾಡಿದ್ದಾರೆ. ದೃಶ್ಯಗಳ ಸಂಯೋಜನೆ, ಕತೆಗೆ ಬೇಕಾದ ಗಂಭೀರತೆ, ಪಾತ್ರಕ್ಕೆ ಜೀವ ತುಂಬುವ ರೀತಿ... ಹೀಗೆ ಯಾವುದೋ ಒಂದು ವಿಭಾಗವನ್ನು ನೋಡುವಂತೆ ಮಾಡದಿದ್ದ ಮೇಲೆ...ದಿನೇಶ್‌ ಗಾಂಧಿ, ಗೋಡ್ಸೆ ಆಗುವುದು ಈ ರೀತಿ.

ಪ್ರೇಮಾ, ಭಾವನಾ ತಮ್ಮ ಪಾತ್ರವನ್ನು ನೀಟಾಗಿ ಮಾಡಿದ್ದಾರೆ. ದಾಮಿನಿ ಕೂಡ ಪರವಾಗಿಲ್ಲ. ಬಿ. ಸಿ. ಪಾಟೀಲ್‌ ಇದ್ದದ್ದು ನೆನಪಾಗುವುದೇ ಇಲ್ಲ. ಆದರೂ ಅವರೇ ಚಿತ್ರದ ನಾಯಕನೆಂದು ನೆನಪಿಡುವುದು ಒಳ್ಳೆಯದು. ಫೋಟೋಗ್ರಫಿ ಪರವಾಗಿಲ್ಲ. ಸಂಕಲನಕಾರ ಅತಿ ಬುದ್ಧಿವಂತಿಕೆಯನ್ನು ತೋರಿಸಿದ್ದರಿಂದ ಕತೆ ಯಾವ ದಿಕ್ಕಿನಲ್ಲಿ ಸಾಗಿತ್ತೆಂಬುದು ಅಯೋಮಯ. ಇಡೀ ಚಿತ್ರದಲ್ಲಿ ಖುಷಿ ಕೊಡುವುದು ಒಂದು ಹಾಡು. ಹಂಸಲೇಖ ಬರೆದು, ರಾಗ ಸಂಯೋಜನೆ ಮಾಡಿದ ‘ಯಜಮಾನ ಯಜಮಾನ’ ಎದೆ ತಟ್ಟುತ್ತದೆ. ಅದೊಂದು ಹಾಡಿಗೆ ಥಿಯೇಟರ್‌ಗೆ ಹೋಗಬೇಕಾ ಅಂತ ಕೇಳುವ ಅಗತ್ಯ ಇಲ್ಲ ಎಂದು ಇದುವರೆಗೆ ‘ಚೆಲ್ವಿ’ಯ ಇತಿಹಾಸ ಓದಿದಾಗ ಎಲ್ಲರಿಗೂ ಅನಿಸಬಹುದು.

ಎಲ್ಲರಿಗೂ ಹಿಟ್‌ ಚಿತ್ರ ಕೊಡಲಿಕ್ಕಾಗುತ್ಯೇ?

ಅಂದ ಹಾಗೆ ಒಂದು ಮಾತು. ಚಿತ್ರದಲ್ಲಿ ನಾಯಕ, ನಾಯಕಿಯನ್ನು ಏಕವಚನದಲ್ಲಿ ಮಾತನಾಡಿಸುತ್ತಾನೆ. ಆದರೆ ನಾಯಕಿ ಮಾತ್ರ ನಾಯಕನನ್ನು ಬನ್ನಿ, ಹೋಗಿ ಎಂದು ಮರ್ಯಾದೆ ಕೊಟ್ಟೇ ಕರೆಯುತ್ತಾಳೆ. ಪ್ರೇಮಿಗಳ ನಡುವೆಯೂ ಈ ರೀತಿ ಅಸಮಾನತೆ ತಂದು ತಾವೊಬ್ಬ ಸ್ತ್ರೀ ದ್ವೇಷಿ ಎಂದು ನಿರ್ದೇಶಕ ಅನಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಮತ್ತೊಂದು ವಿಷಯ ಟೈಟಲ್‌ ಕಾರ್ಡಿನಲ್ಲಿ ಕೌರವ್‌ ವೆಂಕಟೇಶ್‌ ಬದಲು ವೆಂಕಟೇಶ್‌ ಎಂದು ತೋರಿಸಲಾಗಿದೆ. ಕನ್ನಡ ಚಿತ್ರದಲ್ಲಿಯೇ ಕನ್ನಡಕ್ಕಾಗದ ಗತಿ ಇದು !

ಎಲ್ಲರಿಗೂ ಹಿಟ್‌ ಚಿತ್ರ ಕೊಡಲು ಸಾಧ್ಯವಿಲ್ಲ ಎನ್ನುವುದು ನಿಜ. ಆದರೆ ಅದಕ್ಕೆ ತಕ್ಕ ಪ್ರಯತ್ನ ಮಾಡದೇ ಚಿತ್ರ ಮಾಡಿ ಪ್ರೇಕ್ಷಕರ ದುಡ್ಡು ಹಾಳು ಮಾಡುವುದು ಯಾವ ನ್ಯಾಯ ? ಪರಿಶ್ರಮ ಮಾತಲ್ಲಿ ಹೇಳಿದರೆ ಸಾಕಾಗದು. ಅದು ತೆರೆ ಮೇಲೆ ಕಾಣಬೇಕು. ನಿರ್ದೇಶಕ ಸದ್ಯಕ್ಕೆ ಮಾಡಬೇಕಾದ ಕೆಲಸವೆಂದರೆ ನಿರ್ದೇಶನ ತರಬೇತಿ ಪಡೆಯುವುದು. ಪಡೆಯದಿದ್ದರೆ ಅದೂ ಕನ್ನಡಿಗರ ಸೌಭಾಗ್ಯ !

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada