ಹಾಗಿದ್ದೂ ‘ಹಲೋ’ ಕೊಂಚ ಭಿನ್ನವಾಗಿ ನಿಲ್ಲುತ್ತದೆ.

By ಮಹೇಶ್‌ ದೇವಶೆಟ್ಟಿ

bhavana
ಚಿತ್ರ : ಹಲೋನಿರ್ದೇಶನ : ಕೂಡ್ಲು ರಾಮಕೃಷ್ಣಸಂಗೀತ : ಶ್ರೀಶೈಲತಾರಾಗಣ : ಶಿವಧ್ವಜ್‌, ಭಾವನಾ, ನವೀನ್‌ ಮಯೂರ್‌, ಹಂಸ, ಬಾಲರಾಜ್‌ ಮತ್ತಿತರರು
'ನಿಮ್ಮಿಬ್ಬರನ್ನೂ ನಾನು ಮದುವೆಯಾಗಲೇ?" ಅವಳು ಹೀಗೆ ಕೇಳಿದಾಗ ಅವರಿಬ್ಬರೂ ಬೆಚ್ಚಿ ಬೀಳುತ್ತಾರೆ. ಅವರಿಬ್ಬರಿಗೂ ಅವಳ ಬದುಕು ಹಸನಾಗಬೇಕೆನ್ನುವ ಆಸೆ. ಜತೆಗೆ ಅವಳ ಪ್ರೇಮವನ್ನು ತ್ಯಾಗ ಮಾಡುವ ಬಯಕೆ. ಅವಳು ಪ್ರೀತಿಸಿದ ಹುಡುಗ ಒಂದು ಕಡೆ. ಒಂಥರಾ ಒನ್‌ವೇ ಪ್ರೀತಿಯೇ ಮೂವರ ನಡುವಿನ ಸರಪಳಿ. ಆ ಹಳಿ ಮುಂದೆ ಏನಾಗುತ್ತದೆ? ಎಲ್ಲಿಗೆ ಹೋಗುತ್ತದೆ? ಅನ್ನುವುದನ್ನು ನೋಡಲು 'ಹಲೋ" ಹೇಳಿದರೆ ಮಾತ್ರ ತಿಳಿಯುತ್ತದೆ.

ಸ್ನೇಹ, ಸೇಡು ಮತ್ತು ಪ್ರೇಮ ಈ ಮೂರೂ ಭಾವನೆಗಳನ್ನು ಇಟ್ಟುಕೊಂಡು ಒಂದು ತ್ರಿಕೋನ ಪ್ರೇಮ ಕಥೆಯನ್ನು ಹೊಸೆದಿದ್ದಾರೆ, ಕೂಡ್ಲು ರಾಮಕೃಷ್ಣ. ಆತ್ಮೀಯ ಸ್ನೇಹಿತರಿಬ್ಬರ ನಡುವಿನ ಚಿಕ್ಕದೊಂದು ತಪ್ಪು ಕಲ್ಪನೆಯೇ ಅವರನ್ನು ದೂರ ಮಾಡುತ್ತದೆ. ಸೇಡು ತೀರಿಸಿಕೊಳ್ಳಲು ಪ್ರೇರೇಪಿಸುತ್ತದೆ. ಅದೆಲ್ಲ ಸರಿ ಹೋದಾಗಲೇ ಪ್ರೇಮವನ್ನು ತ್ಯಾಗ ಮಾಡುವ ಸಮಯ ಬರುತ್ತದೆ. ಮೊದಲ 20 ನಿಮಿಷ ಚಿತ್ರ ನೋಡದಿದ್ದರೂ ನಡೆಯುತ್ತದೆ. ಕೊನೆ 20 ನಿಮಿಷ ನೋಡಲೇಬೇಕಾದ ಅನಿವಾರ್ಯತೆ ಇದೆ. ಎರಡು ಗಂಡು ಒಂದು ಹೆಣ್ಣಿನ ನಡುವಿನ ಪ್ರೇಮ ಕಥೆಗಳು ಸಾಕಷ್ಟು ಬಂದಿವೆ. ಆದರೂ ಇದು ಕೊಂಚ ಭಿನ್ನವಾಗಿ ನಿಲ್ಲುತ್ತದೆ. ಅದಕ್ಕೆ ಕಾರಣ ಗಟ್ಟಿಯಾದ ಮೂಲ ಕಥೆ. ಸ್ವಲ್ಪ ಶ್ರಮವಹಿಸಿದ್ದರೆ, ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ತರಬಹುದಿತ್ತು. ಕೂಡ್ಲು ಅದಕ್ಕೆ ಮನಸ್ಸು ಮಾಡಿದಂತಿಲ್ಲ. ಕೆಲವು ಭಾವನಾತ್ಮಕ ದೃಶ್ಯಗಳಲ್ಲಿ ನೀರಸ ನಿರೂಪಣೆ ಬಾಲಿಶವಾಗಿವೆ. ತರ್ಕವಿಲ್ಲದ ಘಟನೆಗಳು, ಉತ್ತರವಿಲ್ಲದ ಪ್ರಶ್ನೆಗಳ ನಡುವೆಯೂ ಕೊನೆಯ 15 ನಿಮಿಷದಲ್ಲಿ ತಮ್ಮ ಸೃಜನಶೀಲತೆಯನ್ನು ನಿರ್ದೇಶಕ ತೋರಿಸಿದ್ದಾರೆ.

ಅದೇ ಹೊತ್ತಿನ ಸಂಭಾಷಣೆ ಅಚ್ಚರಿ ಹುಟ್ಟಿಸುವಷ್ಟು ಸೊಗಸಾಗಿದೆ. ಆದರೆ ಉಳಿದ ಎರಡೂಕಾಲು ಗಂಟೆಯ ಮಾತುಗಳಲ್ಲಿ ಜೀವವೇ ಇಲ್ಲ. ಶ್ರೀಶೈಲ ಸಂಗೀತದಲ್ಲಿ ಮೂರು ಹಾಡುಗಳು ಖುಷಿಕೊಡುತ್ತವೆ. ನೇಟಿವಿಟಿ ಇಲ್ಲದ್ದು ಬೇಸರ ತರಿಸುತ್ತದೆ. ಹಿಂದಿ ಹಾಡುಗಳನ್ನು ಕೇಳಿದಂತೆನಿಸಿದರೆ, ಅದು ನಿರ್ದೇಶಕನಿಗೆ ಸಿಗುವ ಶಹಬ್ಬಾಸ್‌ಗಿರಿಯೇನೂ ಅಲ್ಲ. ಮೂರು ಮಂದಿ ಕ್ಯಾಮರಾಮನ್‌ಗಳ 'ಕೈಚಳಕ"ದಿಂದಲೂ ಚಿತ್ರ ನೋಡುವಂತಿರುವುದು ಪರಮ ಅದ್ಭುತ ! ಬ್ಯಾಂಕಾಕ್‌, ಸಿಂಗಪುರ್‌ನಲ್ಲಿ ಚಿತ್ರಿಸಿದ ಹಾಡುಗಳನ್ನು ನೋಡಿದಾಗ ಅಲ್ಲಿಗೆ ಹೋಗುವ ಜರೂರತ್ತೇ ಇರಲಿಲ್ಲವೆನಿಸುತ್ತದೆ.

ಭಾವನಾಳ ನೀಳ ಕಾಲುಗಳ ಕಡೆಗೇ ಕ್ಯಾಮರಾ ಗಸ್ತು ತಿರುಗಿದ್ದರಿಂದ ವಿದೇಶದ ಕಟ್ಟಡಗಳನ್ನು ಕಾಲು ನುಂಗಿಹಾಕಿವೆ. ಆದರೆ ಹಾಡುಗಳಲ್ಲಿನ ಶ್ರೀಮಂತಿಕೆ ಖುಷಿ ಕೊಡುತ್ತದೆ. ಶಿವಧ್ವಜ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸೇಡು ಮತ್ತು ಪ್ರೇಮದ ಭಾವನೆಗಳನ್ನು ನಿಭಾಯಿಸಿದ ರೀತಿ ಎಕ್ಸಲೆಂಟ್‌. ನವೀನ್‌ ಮಯೂರ್‌ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಕೊಟ್ಟಿದ್ದಾರೆ. ಮಾತುಗಳ ಉಚ್ಚಾರವನ್ನು ತಿದ್ದಿಕೊಳ್ಳುವ ಕಡೆ ಗಂಭೀರ ಪ್ರಯತ್ನ ನಡೆಸಲೇಬೇಕಿದೆ. ಗ್ಲಾಮರ್‌ ಪ್ಲಸ್‌ ನಟನೆ ಎರಡರಲ್ಲೂ ಸೈ ಎನಿಸಿಕೊಂಡಿರುವುದು ಭಾವನಾ. ಎಷ್ಟೋ ಕಡೆ ಅನಗತ್ಯವಾಗಿ ತುಂಡುಬಟ್ಟೆ ತೊಟ್ಟಿರುವುದು ನಿರ್ದೇಶಕನ 'ಅಭಿರುಚಿ"ಗೆ ತಕ್ಕಂತಿದೆ. ಅನಂತವೇಲು ಮತ್ತು ಗೆಳೆಯರ ಗುಂಪಿನ ದೈತ್ಯ ಪ್ರಕಾಶ್‌ ಶ್ರದ್ಧೆಯಿಂದ ಅಭಿನಯಿಸಿದ್ದಾರೆ.(ವಿಜಯ ಕರ್ನಾಟಕ)

More from Filmibeat

English summary
Hello deals with friendship, love and hatred
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X