ಶಾಕ್ ಚಿತ್ರ ವಿಮರ್ಶೆ: ನಿಜಕ್ಕೂ ಶಾಕ್ ಟ್ರೀಟ್‌ಮೆಂಟ್
ಕೆಲವು ವರ್ಷಗಳ ಹಿಂದೆ 'ಕೌನ್' ಎನ್ನುವ ಹಿಂದಿ ಚಿತ್ರ ಬಂದಿತ್ತು. ಒಂದು ಮನೆಯಲ್ಲಿ ಒಂದು ಹುಡುಗಿ ಇರುತ್ತಾಳೆ. ಒಬ್ಬ ಅಪರಿಚಿತ ಬರುತ್ತಾನೆ. ಇಬ್ಬರಿಗೂ ಯಾರ‌್ಯಾರೆಂದು ಗೊತ್ತಿಲ್ಲ. ಹೀಗೆ ನಾಟಕೀಯವಾಗಿ ಸಾಗುವ ಕತೆ ಕೊನೆಗೆ ಕೊಲೆಯಲ್ಲಿ ಮುಕ್ತಾಯವಾಗುತ್ತದೆ.
ಇದನ್ನೇ ಆಧಾರವಾಗಿಟ್ಟುಕೊಂಡು ಹ.ಸೂ.ರಾಜಶೇಖರ್ ಆ ಕತೆಯನ್ನು ನೀಟಾಗಿ ಕನ್ನಡಕ್ಕೆ ಇಳಿಸಿದ್ದಾರೆ. ಇಲ್ಲೂ ಒಂದು ಮನೆಯಲ್ಲಿ ಒಂಟಿ ಹುಡುಗಿ. ಟಿವಿಯಲ್ಲಿ ಸೀರಿಯಲ್ ಕಿಲ್ಲರ್ ತಪ್ಪಿಸಿಕೊಂಡಿದ್ದಾನೆ ಎನ್ನುವ ಜಾಹೀರಾತು. ಅಷ್ಟರಲ್ಲಿ ಪಾಟೀಲ್ ಇದ್ದಾರಾ ಎಂದು ಬರುವ ಅಪರಿಚಿತ. ಆತ ಒಳಗೆ ಬರ‍್ತೀನಿ ಅಂತಾನೆ.
ಆಕೆ ಬೇಡ ಅಂತಾಳೆ. ಕೊನೆಗೆ ಒಳಗೆ ಹೋಗುತ್ತಾನೆ.
ಮುಂದೇನಾ ಗುತ್ತದೆ ಎನ್ನುವ ಹೊತ್ತಿಗೆ ಇನ್ಸ್ ಪೆಕ್ಟರ್ ಬರ್ತಾನೆ. ಹೀಗೆ ನಿಮ್ಮನ್ನು ಕುತೂಹಲಕ್ಕೆ ದೂಡುತ್ತದೆ ಶಾಕ್. ತುಂಬಾ ಖರ್ಚು ಮಾಡಿಲ್ಲದ, ಆದರೆ ಖರ್ಚಿಲ್ಲದೆ ಹೇಗೆ ಪ್ರೇಕ್ಷಕರನ್ನು ಹಿಡಿದು ಕೂಡಿಸಬಹುದು ಎನ್ನುವುದನ್ನು ತೋರಿಸಿದೆ 'ಶಾಕ್'. ಎಂದಿನಂತೆ ರಮೇಶ್ ಮಿಂಚಿದ್ದಾರೆ.
ಜತೆಗೆ ನೀನಾಸಂ ಅಶ್ವತ್ಥ್ ತಾವೇನೂ ಕಮ್ಮಿ ಇಲ್ಲ ಎಂದು ಸಡ್ಡು ಹೊಡೆದಿದ್ದಾರೆ. ಕೆಲವು ತಪ್ಪುಗಳ ನಡುವೆಯೂ ತುಂಬಾ ದಿನಗಳ ನಂತರ ಬಂದಿರುವ ಶಾಕ್ ನೋಡಿ ಶಾಕ್ ಅನುಭವಿಸಬಹುದು... (ಸ್ನೇಹಸೇತು: ವಿಜಯ ಕರ್ನಾಟಕ)


Click it and Unblock the Notifications











