twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರ ವಿಮರ್ಶೆ: ಚೆಲುವೆಯೇ ನಿನ್ನೇ ನೋಡಲು

    By * ವಿನಾಯಕರಾಮ್
    |

    ಕತೆ ಇಲ್ಲಿಂದ ತೆರೆದುಕೊಳ್ಳುತ್ತದೆ. ಹೋಗುತ್ತಾ ಹೋಗುತ್ತಾ ಅದು ವಿಶ್ವವ್ಯಾಪಿಯಾಗುತ್ತದೆ! ಹೌದು, ಇತ್ತೀಚಿನ ವರ್ಷಗಳಲ್ಲಿ ಈ ಮಟ್ಟದ ಅದ್ಧೂರಿ ಚಿತ್ರ ಕನ್ನಡದಲ್ಲಿ ಬಂದಿಲ್ಲ. ಪ್ರಪಂಚದ ಏಳು ಅದ್ಭುತಗಳು ಇಲ್ಲಿ ಮತ್ತೊಂದು ಅದ್ಭುತವೆಂಬಂತೇ ದಾಖಲಾಗಿದೆ.

    ಒಬ್ಬ ಗೈಡ್ ಒಂದಷ್ಟು ಮಂದಿಯನ್ನು ವಿಶ್ವಪರ್ಯಟನೆ ಮಾಡಿಸುವಕತೆ ಚೆ.ನಿ.ನೋ... ಅಲ್ಲಿ ಒಂದು ಹಂತದವರೆಗೆ ಜಗತ್ತಿನ ದಿಗ್ದರ್ಶನ, ನಂತರ ಪ್ರೇಮ ನಿದರ್ಶನ...
    ಶಿವಣ್ಣ ಇಡೀ ಚಿತ್ರದಲ್ಲಿ ರಾರಾಜಿಸುತ್ತಾರೆ. ರಾಜ್ ನಾನಾ ಪಾತ್ರಗಳಲ್ಲಿ ಮಿಂಚಿನ ಸಂಚಾರ ಮೂಡಿಸುತ್ತಾರೆ.

    ಜನ್ಮ ಕೊಟ್ಟವರಿಗೆ, ಅನ್ನ ನೀಡುವ ಭೂಮಿಗೆ, ಅಭಿಮಾನಿ ಬಳಗಕ್ಕೆ, ಅವರಿಗೆ ಇವರಿಗೆ ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತಾ ಹೋಗುತ್ತಾರೆ. ನಿರ್ಮಾಪಕ ಎನ್.ಎಂ. ಸುರೇಶ್ ಇಂಥದ್ದೊಂದು ಕಲ್ಪನಾತೀತ ಬಜೆಟ್ ಚಿತ್ರ ಮಾಡಿದ್ದಾರೆಎನ್ನುವುದೇ ಹೆಮ್ಮೆಯ ವಿಷಯ!

    ನಾಯಕಿ ಸುನಿ ಶಿವಣ್ಣನ ನೃತ್ಯದ ಮುಂದೆ ಕೊಂಚ ಡಲ್ಲಪ್ಪ ಡಲ್ಲು. ಹರಿಪ್ರಿಯಾ ಕೂಡ ಕೆಲವೆಡೆ ಎಡವುತ್ತಾರೆ. ತರುಣ್ ಸುರ್, ದತ್ತಣ್ಣ, ಚಿತ್ರಾ ಶೆಣೈ, ಎಡಕಲ್ಲುಗುಡ್ಡದ
    ಚಂದ್ರಶೇಖರ್ ಎಲ್ಲರದ್ದೂ ಎಂದಿನಂತೆ ಮಾಮೂಲಿ ನಟನೆ. 'ನೆನಪಿರಲಿ ಪ್ರೇಮ್' ಆಗಮನದ ನಂತರ ಕತೆ ಮತ್ತಷ್ಟು ವಿಸ್ತಾರಗೊಳ್ಳುತ್ತದೆ.

    ಹರಿಕೃಷ್ಣ ಹಾಡುಗಳಲ್ಲಿ 3 ಓಕೆ. ಹುಟ್ಟಿದರೇ ಕನ್ನಡನಾಡಲ್... ರಿಮಿಕ್ಸ್ ವರ್ಕ್‌ಔಟ್ ಆಗಿದೆ. ರಾಜ್ ನಾನಾ ಅವತಾರಗಳಲ್ಲಿ ಶಿವಣ್ಣ ಸಿಳ್ಳೆ ಗಿಟ್ಟಿಸುತ್ತಾರೆ. ಕಬೀರ್‌ಲಾಲ್ ಛಾಯಾಗ್ರಹಣದಲ್ಲಿ ವಿಶೇಷತೆ ಇಲ್ಲದಿದ್ದರೂ ನ್ಯೂನ್ಯತೆ ಇಲ್ಲ. ಸಂಕಲನದಲ್ಲಿ ಚುರುಕುತನ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.

    ಒಟ್ಟಾರೇ ಚೆಲುವೆಯನ್ನು ಚೆಲುವಾಗಿ ತೋರಿಸುವಲ್ಲಿ ರಘುರಾಮ್ ಗೆದ್ದಿದ್ದಾರೆ. ಒಂದು ಮುತ್ತಿನ ಕತೆ ಹೇಳುತ್ತಾ ಹೇಳುತ್ತಾ, 'ವಿಶ್ವ ಕೋಶ" ಓದಿದ ಅನುಭವ ಕೊಡುತ್ತಾರೆ! (ಸ್ನೇಹಸೇತು: ವಿಜಯ ಕರ್ನಾಟಕ)

    Monday, August 9, 2010, 15:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X