ವಿಷ್ಣುವರ್ಧನ ಚಿತ್ರದ ಪ್ಲಸ್ ಮತ್ತು ಮೈನಸ್‌ ಪಾಯಿಂಟ್ಸ್

By Rajendra
<ul id="pagination-digg"><li class="previous"><a href="/reviews/09-vishnuvardhana-review-by-vinayakaram-kalagaru-1-aid0052.html">« Previous</a>

ಇನ್ನು ಪಾತ್ರವರ್ಗ. ಸುದೀಪ್‌ದು ಎಂದಿನಂತೇ ಸುಲಲಿತ, ಸಂಭ್ರಮಿತ ನಟನೆ. ನಾಲಗೆ ಮಡಚಿ ಸಿಳ್ಳೆ ಹೊಡೆಯಲೇ ಬೇಕು ಎನ್ನುವ ರೇಂಜಿಗೆ ಕಿಚ್ಚ ಪರದೆ ಮೇಲೆ ಕಚ್ಚಿಕೊಳ್ಳುತ್ತಾನೆ. ಸುದೀಪ್ ಎಂಟ್ರಿಯಲ್ಲಿ ವಿಷ್ಣು ಅವರ ಆಪ್ತಮಿತ್ರ ಚಿತ್ರದಲ್ಲಿ ಅವರು ಕನ್ನಡಕದೊಂದಿಗೆ ಬಂದು ಎದುರಿಗೆ ಇರುವವರಿಗೆ ಕಾಲೆತ್ತಿ ಒದೆಯುವ ದೃಶ್ಯವನ್ನೇ ಅನುಕರಣೆ ಮಾಡಲಾಗಿದೆ. ಅಂಥ ಅದೆಷ್ಟೋ ದೃಶ್ಯಗಳು, ಡೈಲಾಗ್‌ಗಳು ಅಭಿಮಾನಿಗಳ ಪಾಲಿಗೆ ಹಸಿ ಹಸಿ ಹೋಳಿಗೆ!

ಇಬ್ಬರ ಹಾಟ್ ಹೀರೋಯಿನ್‌ಗಳನ್ನೇ ಬಳಸಿಕೊಂಡಿರುವುದು ಚಿತ್ರದ ಪ್ಲಸ್ ಪಾಯಿಂಟು. ಜಾಕಿ ಭಾವನಾ ನೀಟಾಗಿ ಡ್ರೆಸ್ ಮಾಡಿಕೊಂಡರೂ ಮೈಮಾಟ ಮಾತ್ರ ಮೈಸೂರು ಪಾಕಿಗೆ ಗುಲಾಬಿ ಹೂವಿನ ಸೀರೆ ಉಡಿಸಿದಂತಿದೆ! ಇನ್ನು ಪ್ರಿಯಾಮಣಿ ಮಧ್ಯಂತರದ ಹೊತ್ತಿಗೆ ಬಂದರೂ ಮಸ್ತ್ ಕೊನೇ ತನಕ ಇದ್ದು ಪಡ್ಡೆ ಹುಡುಗರಿಗೆ ಪಾಯಸ ಬಡಿಸಿಯೇ ಹೋಗುತ್ತಾಳೆ. ದ್ವಾರಕೀಶ್ ಅಲ್ಲಲ್ಲಿ ಬಂದು ಕುಳಿತಲ್ಲೇ ಬೆಲ್ಲಿ ಡ್ಯಾನ್ಸ್ ಮಾಡಿ ಹೋಗುತ್ತಾರೆ!

ಅರುಣ್ ಸಾಗರ್ ಚಿತ್ರದುದ್ದಕ್ಕೂ ಇದ್ದು ನಗುವಿನ ಪಟಾಕಿ ಸಿಡಿಸುತ್ತಾರೆ. ಬಹಳ ದಿನಗಳ ನಂತರ ಅರುಣ್ ಪ್ರತಿಭೆಗೆ ಫಲ ಸಿಕ್ಕಂತಿದೆ. ಉಳಿದಂತೆ ಮುನಿ, ಮುಂಬೈ ವಿಲನ್, ಸಂಗೀತಾ, ಚೇತನ್ ಎಲ್ಲರದ್ದೂ ಪಾತ್ರಪೋಷಣೆಯಲ್ಲಿ ಸಿಂಹಪಾಲು! ಹರಿಕೃಷ್ಣ ಅಚ್ಚುಕಟ್ಟಾಗಿ ಸಂಗೀತ ನೀಡಿದ್ದಾರೆ. ಎರಡು ಹಾಡುಗಳಂತೂ ಕೇಳುತ್ತಾ ಕೇಳುತ್ತಾ ಕುಂತ ಕುರ್ಚಿಯನ್ನೇ ಕುಣಿಸುತ್ತದೆ.

ಛಾಯಾಗ್ರಹಣದಲ್ಲಿ ಸಣ್ಣ ಪ್ರಮಾಣದ ನ್ಯೂನತೆ ಕಾಣುತ್ತದೆ, ಕಣ್ಣಿಗೆ ಎಲ್ಲೋ ಒಂದು ಕಡೆ ಕಾಡುತ್ತದೆ. ಅದೇನೋ ಗೊತ್ತಿಲ್ಲ, ನಟ ದರ್ಶನ್ ಮಾಧ್ಯಮದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿದ್ದಂತೇ ಸಾರಥಿ ವಿಚಿತ್ರ ಎನಿಸುವ ರೀತಿಯಲ್ಲಿ ನಾಗಾಲೋಟ ಶುರು ಮಾಡಿದೆ. ಇತ್ತ ಸುದೀಪ್ ಅದೇ ಮಾಧ್ಯಮದವರ ಮೇಲೆ ಕೆಂಡಾಮಂಡಲ ಆಗಿದ್ದಾರೆ ಎಂಬ ಸುದ್ದಿ ವಾರದೀಚೆಗೆ ದೊಡ್ಡ ಸುದ್ದಿಯಾಗಿದೆ.

ಅದೇ ಬೆನ್ನಲ್ಲಿ ವಿಷ್ಣುವರ್ಧನ ಬಿಡುಗಡೆಯಾಗಿದೆ ಮತ್ತು ಭಯಂಕರ ಓಪನಿಂಗ್ ಪಡೆದಿದೆ. ಸಿನಿಮಾ ಕೂಡ ಚೆನ್ನಾಗಿದೆ. ಎರಡೂವರೆ ತಾಸು ಮನರಂಜನೆ ಕೊಡುವುದಕ್ಕೇ ಎಂದು ಜನ್ಮತಾಳಿದೆ ಎನ್ನುವುದು ವಿಷ್ಣು ಪ್ಲಸ್ ಕಿಚ್ಚ ಅಭಿಮಾನಿ ಸಂಘದ ಒಕ್ಕೋರಲಿನ ಅಭಿಪ್ರಾಯ! ಜೈ ವಿಷ್ಣುವರ್ಧನ... ಜೈ ಆಪ್ತರಕ್ಷಕ!

<ul id="pagination-digg"><li class="previous"><a href="/reviews/09-vishnuvardhana-review-by-vinayakaram-kalagaru-1-aid0052.html">« Previous</a>

More from Filmibeat

English summary
Kannada movie Vishnuvardhana review by Vinayakaram Kalagaru. Sudeep lead movie is a thriller and comedy entertainer. Technically the film is superior. Musical content is top class. Read plus and minus points of the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X