»   » 'ಹದಿಹರೆಯದ ಸಮಸ್ಯೆಗಳು-ಪರಿಹಾರ' ಚಿತ್ರ

'ಹದಿಹರೆಯದ ಸಮಸ್ಯೆಗಳು-ಪರಿಹಾರ' ಚಿತ್ರ

Subscribe to Filmibeat Kannada

ಸಿನಿಮಾ ನೋಡಿದೆವು. ಇಬ್ಬರೂ ಕ್ಲಾಸ್‌ಗೆ ಬಂಕ್ ಹಾಕಿ ಬಂದಿದ್ದೆವು. ಆದರೆ ನೋಡಿದ ಮೇಲೆ ಅನಿಸುತಿದೆ: ಯಾಕಾದ್ರೂ ಹೀಗೆ ಮಾಡಿದೆವೋ ಎಂದು. ಸಿನಿಮಾ ತುಂಬಾ ಇಷ್ಟ ಆಯಿತು. ಎಲ್ಲೋ ಒಂದು ಕಡೆ ನಾವು ಈ ವಯಸ್ಸಿನಲ್ಲಿ ಮಾಡುತ್ತಿರುವ ತಪ್ಪೇನು ಎನ್ನುವುದು ಅರಿವಾಯ್ತು. ಹೆತ್ತವರು ನೆನಪಿಗೆ ಬಂದರು. ಇನ್ನೆಂದೂ ಹೀಗೆ ಮಾಡುವುದಿಲ್ಲ. ಮೊದಲು ಓದಿ, ಕೆಲಸ ಗಿಟ್ಟಿಸಿಕೊಂಡು ಆಮೇಲೆ ಲಾಲ್‌ಬಾಗ್, ಥಿಯೇಟರ್, ಕಾಫಿ ಡೆ... ಎಲ್ಲಾ ಕಡೆ ತಿರುಗುತ್ತೇವೆ.ಅಕ್ಷಯ್-ಸೌಮ್ಯಾ/ ರಜ್- ಕವಿತಾ (ಹೆಸರು ಬದಲಾಗಿದೆ) ಮಹಾರಾಣಿ ಕಾಲೇಜ್ ವಿದ್ಯಾರ್ಥಿಗಳು

*ವಿನಾಯಕರಾಮ್ ಕಲಗಾರು

ಇದನ್ನು ಓದಿ ನಿಮಗೆ ಆಶ್ಚರ್ಯ ಆಗಬಹುದು. ಇದೇ ಶುಕ್ರವಾರ ಕಪಾಲಿ ಟಾಕೀಸ್ ಎದುರಿಗಿದ್ದ ಕಾಲೇಜ್ ಜೋಡಿಗಳನ್ನು ಪಿಯುಸಿ ಬಗ್ಗೆ ಕೇಳಿದಾಗ ಸಿಕ್ಕ ಉತ್ತರವಿದು!

ಮೊದಲಾರ್ಧ ಕಾಲೇಜಿನ ಸುತ್ತ ಗಿರಕಿ ಹೊಡೆಯು ತ್ತದೆ. ಓದಿ ಉದ್ಧಾರ ಆಗ್ರೋ... ' ಎಂದು ಮೇಷ್ಟ್ರು ಬೈದರೆ, ಮಂಡೆ ತುಂಬ ಕಲರ್ಸ್ ಗಳ ಫೋಟೊ ತುಂಬಿಕೊಂಡೇ ತೀರುಗುತ್ತೀವಿ' ಎನ್ನುವ ಹೈದರ ಕತೆ. ಅಪ್ಪ ಕಿಡ್ನಿ ಮಾರಿ ಮಗನನ್ನು ಓದಿಸುತ್ತಾನೆ. ಆದರೆ ಆ ಸುಪುತ್ರ ನಾರಿಯ ಪ್ರೇಮ ಪತ್ರಕ್ಕಾಗಿ ಮೋರಿಗೆ ಹಾರಿ, ಕೊನೆಗೆ ಕೊಳೆತು ನಾರುತ್ತಾನೆ. ಪಿಯುಸಿ ಪರೀಕ್ಷೆಯಲ್ಲಿ

ಜಸ್ಟ್‌ಪಾಸ್ ಆದರೂ, 88% ಪಡೆದಿದ್ದೇನೆ ಎಂದು ತಂದೆಯ ಮುಂದೆ ತಿಪ್ಪೆ ಸಾರಿಸುತ್ತಾನೆ. ಅಪ್ಪ ಹಾಸಿಗೆ ಹಿಡಿಯುತ್ತಾನೆ. ಮಗ, ಕಾಸಿಗೆ ಪರದಾಡು ತ್ತಾನೆ... ಹೀಗೆ 'ಹದಿಹರೆಯದ ಸಮಸ್ಯೆಗಳು-ಪರಿಹಾರ' ಎಂಬ ವಿಷಯದ ಸುತ್ತ ಚಿತ್ರ ಕತೆ ಸಾಗುತ್ತದೆ. ಈ ಮಧ್ಯೆ ರವಿರಾಜ್ ಸಂಗೀತ ಕತೆಗೆ ಇನ್ನಷ್ಟು ಪುಷ್ಟಿ ನೀಡುತ್ತದೆ. ಸುರೇಶ್ ಬಾಬು ಕ್ಯಾಮೆರಾ ಕಾಲೇಜ್- ವಿಲೇಜ್ ಎರಡನ್ನೂ ಕವರ್ ಮಾಡುತ್ತದೆ.

ಮೊದಲಬಾರಿಗೆ ನಾಯಕನಾಗಿರುವ ಚೇತನ್ ಚಂದ್ರ ಪ್ರತೀ ದೃಶ್ಯದಲ್ಲೂ ಗಮನ ಸೆಳೆದಿದ್ದಾನೆ. ಛತ್ರಪತಿ ಶಿವಾಜಿಯಾಗಿ ರಂಗಪ್ರವೇಶ ಮಾಡುವ ದೃಶ್ಯ ಕಣ್ಣಿಗೆ ಕಟ್ಟುತ್ತದೆ. ಕುಣಿಯವಾಗ, ಕಣ್ಣೀರಿಡುವಾಗ, ಕನಸಿನ ಸೌಧ ಉರುಳಿಬಿದ್ದು ಕನವರಿಸುವಾಗ...ಇಷ್ಟವಾಗು ತ್ತಾನೆ. ನಾಯಕಿ ಹರ್ಷಿಕಾ ಪೂಣಚ್ಚಗೂ ಸೇಮ್ ಡೈಲಾಗ್. ಅವಿನಾಶ್ ಅಸಹಾಯಕ ಅಪ್ಪನಾಗಿ ಅಳು ತರಿಸುತ್ತಾರೆ. ರಾಮಕೃಷ್ಣ, ವಿನಯಾಪ್ರಕಾಶ್ ಅಭಿನಯ ಸಹಜಕ್ಕೆ ಹತ್ತಿರವಾಗಿದೆ.

ಸಾಧುಕೋಕಿಲಾ ಕಚಪಚ ಕಾಮಿಡಿಯನ್ನು ಒಮ್ಮೆ ನೋಡಿ, ಮಜಾ ಮಾಡಿ. ಸುಮ್ಮನೇ ಸುಮ್ಮನೆ..., ಪ್ರಿಯ ಗೆಳೆಯಾ..., ಯಾರೋ ಕಾಣದೇ...ಹಾಡುಗಳು ಸುರೇಶ್‌ಬಾಬು ಕ್ಯಾಮೆರಾ ಕಣ್ಣಿಗೆ ತಕ್ಕಂತೆ ಹೆಜ್ಜೆಹಾಕುತ್ತವೆ. ಛಾಯಾಗ್ರಹಣ ಇಷ್ಟ ವಾಗುವುದು ಈ ದೃಶ್ಯದಲ್ಲಿ: ಕಾಫಿ ಡೇನಲ್ಲಿ ಮಗ ಬಿಸ್ಲೆರಿ ನೀರನ್ನು ನಾಯಕಿಯ ತಲೆ ಮೇಲೆ ಸುರಿಯುತ್ತಿರುತ್ತಾನೆ; ರಸ್ತೆ ಎದುರಿಗಿರುವ ಬೋರ್‌ವೆಲ್ ನೀರನ್ನು ಅಪ್ಪ ಕುಡಿಯುತ್ತಿರುತ್ತಾನೆ!

ಆದರೆ ದ್ವಿತಿಯಾರ್ಧದಲ್ಲಿರುವ ಹಿಡಿತ ಮೊದಲಾರ್ಧಕ್ಕಿಲ್ಲ. ನಿರೂಪಣೆ ಯಲ್ಲಿ ಇನ್ನಷ್ಟು ಗಡಸು ಬೇಕಿತ್ತು. ಕೆಲವು ಕಡೆ ಅನಗತ್ಯ ದೃಶ್ಯಗಳಿವೆ ಇತ್ಯಾದಿ ಇತ್ಯಾದಿ ಎನ್ನುವುದು ವಿಮರ್ಶೆಯ ಇನ್ನೊಂದು ಭಾಗ. ಅಲ್ಲದೇ ಇದು ಕಪಾಲಿ ಟಾಕೀಸಿನ ಎದುರು ನಿಂತಿದ್ದ ಇನ್ನೊಂದು ಪ್ರೇಕ್ಷಕವರ್ಗದ ಅಭಿಪ್ರಾಯ ಕೂಡ ! ಆದರೆ ಅವರ ಪ್ರಕಾರವೂ ಇದು ಕೆಟ್ಟ ಚಿತ್ರವಂತೂ ಅಲ್ಲ.
ಪಿಯುಸಿ ಚಿತ್ರ ತೆರೆಗೆ ಬರಲು ಸಿದ್ಧ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada